AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಂಗಾಲೇಶ್ವರ ಹೇಳಿಕೆಗೂ, ತಮಗೂ ಸಂಬಂಧವಿಲ್ಲ: ಧಾರವಾಡ ಮುರುಘಾಮಠ ಶ್ರೀ ಸ್ಪಷ್ಟನೆ

ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನಶ್ರೀ, ಸಂಸದ ಪ್ರಲ್ಹಾದ್​​ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದು ವೈಯಕ್ತಿಕ. ಅವರ ಹೇಳಿಕೆಗೂ, ತಮಗೂ ಸಂಬಂಧವಿಲ್ಲ ಎಂದಿದ್ದಾರೆ. ನಮ್ಮ ಮಠ ಎಂದಿಗೂ ರಾಜಕೀಯ ವಿಚಾರದಲ್ಲಿ ಭಾಗವಹಿಸುವುದಿಲ್ಲ. ಸದ್ಯ ಎದ್ದಿರುವ ವಿವಾದಕ್ಕೂ, ತಮಗೂ ಸಂಬಂಧವಿಲ್ಲವೆಂದು ಹೇಳಿದ್ದಾರೆ.

ದಿಂಗಾಲೇಶ್ವರ ಹೇಳಿಕೆಗೂ, ತಮಗೂ ಸಂಬಂಧವಿಲ್ಲ: ಧಾರವಾಡ ಮುರುಘಾಮಠ ಶ್ರೀ ಸ್ಪಷ್ಟನೆ
ದಿಂಗಾಲೇಶ್ವರ ಸ್ವಾಮೀಜಿ, ಪ್ರಲ್ಹಾದ್​ ಜೋಶಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on:Mar 28, 2024 | 9:10 PM

Share

ಧಾರವಾಡ, ಮಾರ್ಚ್​ 28: ಸಂಸದ ಪ್ರಲ್ಹಾದ್​​ ಜೋಶಿ (Pralhad Joshi) ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದು ವೈಯಕ್ತಿಕ. ಅವರ ಹೇಳಿಕೆಗೂ, ತಮಗೂ ಸಂಬಂಧವಿಲ್ಲವೆಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನಶ್ರೀ ಸ್ಪಷ್ಟನೆ ನೀಡಿದ್ದಾರೆ. ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಹೇಳಿಕೆಗೂ, ಧಾರವಾಡ ಮುರುಘಾಮಠಕ್ಕೂ ಸಂಬಂಧವಿಲ್ಲ. ನಮ್ಮ ಮಠ ಎಂದಿಗೂ ರಾಜಕೀಯ ವಿಚಾರದಲ್ಲಿ ಭಾಗವಹಿಸುವುದಿಲ್ಲ. ಸದ್ಯ ಎದ್ದಿರುವ ವಿವಾದಕ್ಕೂ, ತಮಗೂ ಸಂಬಂಧವಿಲ್ಲವೆಂದು ಹೇಳಿದ್ದಾರೆ.

ನಿನ್ನೆ ದಿಂಗಾಲೇಶ್ವರ ಸ್ವಾಮೀಜಿ ಪ್ರಲ್ಹಾದ್​​ ಜೋಶಿ ವಿರುದ್ಧ ಹೇಳಿಕೆ ನೀಡುವಾಗ ಮಲ್ಲಿಕಾರ್ಜುನ ಸ್ವಾಮೀಜಿ ಜೊತೆಗಿದ್ದರು. ಇದೀಗ ಅವರೊಂದಿಗಿದ್ದ ಸ್ವಾಮೀಜಿಗಳು ಉಲ್ಟಾ ಹೊಡೆದಿದ್ದಾರೆ. ಆ ಮೂಲಕ ದಿಂಗಾಲೇಶ್ವರ ಪರವಿದ್ದ ಸ್ವಾಮೀಜಿಗಳಲ್ಲಿಯೇ ಬಿರುಕು ಉಂಟಾಯ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಪ್ರಲ್ಹಾದ್​​ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ

ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಚಿಂತನ ಮಂಥನ ಸಭೆ ನಡೆಸಿ ವರ್ತಮಾನ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು‌. ಆದರೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆದ ಮಠಾದೀಶರ ಸಭೆ ಕೇಂದ್ರ ಸಚಿವ ಜೋಶಿಯವರ ವಿರುದ್ಧ ಸಿಡಿದೆದಿದ್ದರು. ಸಭೆ ಬಳಿಕ ಮಾತನಾಡಿದ್ದ ದಿಂಗಾಲೇಶ್ವರ ಶ್ರೀಗಳು, ಬಿಎಸ್​ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಸಿದ್ದು ಪ್ರಲ್ಹಾದ್​ ಜೋಶಿ ಎಂದು ಗಂಭೀರ ಆರೋಪ ಮಾಡಿದ್ದರು. ಅದಕ್ಕಾಗಿ ಜಾಕೆಟ್ ಹೊಲಿಸಿದ್ದರು. ನಾವು ಹೋರಾಟ ಮಾಡಿದ ಮೇಲೆ ಜಾಕೆಟ್‌ ಪಾಕೆಟ್ ಸೇರಿದೆ ಎಂದಿದ್ದರು.

ಇದನ್ನೂ ಓದಿ: ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಪ್ರಲ್ಹಾದ್​ ಜೋಶಿ ಪಾತ್ರವಿಲ್ಲ: ಯಡಿಯೂರಪ್ಪ ಸ್ಪಷ್ಟನೆ

ಜೋಶಿ ಅವರ ಸೇಡಿನ ರಾಜಕಾರಣ ಮಾಡಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ ಕುಸಿದು ಬಿದ್ದಿದ್ದಾರೆ. ಧಾರವಾಡ ಲೋಕಸಭೆ ಟಿಕೆಟ್ ಬದಲಾವಣೆ ಮಾಡಬೇಕು. ಇದನ್ನು ನಾವು ಹೈಕಮಾಂಡ್​ಗೆ ತಿಳಿಸುತ್ತೇವೆ. ಕೇಂದ್ರ ಸಚಿವರ ಬದಲಾವಣೆಗೆ ಕಾರಣ ನೀಡಿದ್ದು, ಬಹು ಸಂಖ್ಯಾತರ ಲಿಂಗಾಯತ ಮತಗಳು ಧಾರವಾಡ ಜಿಲ್ಲೆಯಲ್ಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಕೇಂದ್ರ ಸರ್ಕಾರ ರಾಜ್ಯಕ್ಕೆ 2.30 ಲಕ್ಷ ಸಾವಿರ ಕೋಟಿ ರೂ. ನೀಡಿದೆ, ಆದರೂ ಕಾಂಗ್ರೆಸ್​​ ಸುಳ್ಳು ಹೇಳುತ್ತಿದೆ: ಜೋಶಿ

ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಿನ್ನೆ ಬಿಎಸ್​ ಯಡಿಯೂರಪ್ಪ ಮಾತನಾಡಿ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸುವುದರಲ್ಲಿ ಜೋಶಿ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಜೋಶಿಯವರು, ಸ್ವಾಮೀಜಿಗಳ ಆರೋಪ, ಟೀಕೆಗಳು ನನಗೆ ಆಶೀರ್ವಾದ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:58 pm, Thu, 28 March 24