ಮಹಿಳೆಯ ಹಣ ಕದ್ದ ಖದೀಮರು: ಮಕ್ಕಳೊಂದಿಗೆ ಬಸ್ ನಿಲ್ದಾಣದಲ್ಲೇ ಅಳುತ್ತಾ ಕುಳಿತ ತಾಯಿ
ಊರಿಗೆ ತೆರಳಲು ಬಸ್ ಹತ್ತುವಾಗ ಬಡ ಮಹಿಳೆಯ ಪರ್ಸ್‌ನಲ್ಲಿಟ್ಟಿದ್ದ ಹದಿನೈದು ಸಾವಿರ ರೂ. ಹಣವನ್ನು ಕಳ್ಳರು ಎಗರಿಸಿದ್ದಾರೆ. ಹಾಸನದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇತ್ತ ಹಣ ಕಳೆದುಕೊಂಡ ಮಹಿಳೆ ಊರಿಗೆ ಹೋಗದೆ ಬಸ್ ನಿಲ್ದಾಣದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕಣ್ಣೀರು ಹಾಕಿದ್ದಾರೆ. ಬಳಿಕ ತಾಯಿ-ಮಕ್ಕಳ ಗೋಳಾಟ ಕಂಡು ಸ್ಥಳೀಯರು ನೆರವು ನೀಡಿದ್ದಾರೆ.
ಹಾಸನ, ಮಾರ್ಚ್ 28: ಸಾರ್ವಜನಿಕ ಸ್ಥಳಗಳಲ್ಲಿ ಮೈಯಲ್ಲಾ ಕಣ್ಣಾಗಿದ್ದರು ಸಾಕಾಗುವುದಿಲ್ಲ. ನಮ್ಮ ಹಣ (money) , ವಸ್ತುಗಳನ್ನು ಎಷ್ಟೇ ಎಚ್ಚರಿಕೆಯಿಂದ ಕಾಯಿದು ಕೊಂಡರು, ಮೈಮರೆತ ಯಾವುದೋ ಕ್ಷಣದಲ್ಲಿ ಕಳ್ಳತವಾಗಿ ಹೋಗಿರುತ್ತದೆ. ಸದ್ಯ ಇಂತಹದ್ದೇ ಒಂದು ಹಾಸನದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಊರಿಗೆ ತೆರಳಲು ಬಸ್ ಹತ್ತುವಾಗ ಬಡ ಮಹಿಳೆಯ ಪರ್ಸ್‌ನಲ್ಲಿಟ್ಟಿದ್ದ ಹದಿನೈದು ಸಾವಿರ ರೂ. ಹಣವನ್ನು ಕಳ್ಳರು ಎಗರಿಸಿದ್ದಾರೆ. ಇತ್ತ ಹಣ ಕಳೆದುಕೊಂಡ ಮಹಿಳೆ ಊರಿಗೆ ಹೋಗದೆ ಬಸ್ ನಿಲ್ದಾಣದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕಣ್ಣೀರು ಹಾಕಿದ್ದಾರೆ. ಬಳಿಕ ತಾಯಿ-ಮಕ್ಕಳ ಗೋಳಾಟ ಕಂಡು ಸ್ಥಳೀಯರು ನೆರವು ನೀಡಿದ್ದಾರೆ.
ಬಿಜಾಪುರ ಮೂಲದ ಭಾರತಿ ಹಣ ಕಳೆದುಕೊಂಡ ಮಹಿಳೆ. ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದರು.
ಇದನ್ನೂ ಓದಿ: ಪ್ರೀತಿಯ ನಾಯಿ ‘ಡಂಬೂ’ ನಾಪತ್ತೆ; ಊಟ-ನೀರು ಬಿಟ್ಟ ಕುಟುಂಬ!
ವಾಪಸ್ ಮಕ್ಕಳೊಂದಿಗೆ ರಾಮನಾಥಪುರಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದ ಮಹಿಳೆ ರಾಮನಾಥಪುರಕ್ಕೆ ತೆರಳಲು KA-13, F-2091 ನಂಬರ್‌ನ ಬಸ್ ಹತ್ತುತ್ತಿದ್ದಾಗ ಹಣ ಕಳ್ಳತನವಾಗಿದೆ. ಕೂಲಿ ಮಾಡಿ ಸಂಗ್ರಹಿಸಿಟ್ಟಿದ್ದ ಹಣ ಕಳೆದುಕೊಂಡು ಮಹಿಳೆ ಕಂಗಾಲಾಗಿದ್ದು, ಬಸ್ ನಿಲ್ದಾಣದಲ್ಲೇ ತಾಯಿ ಮತ್ತು ಮಕ್ಕಳು ಅಳುತ್ತಾ ಕುಳಿತ್ತಿದ್ದರು. ನಂತರ ಸ್ಥಳೀಯರು ಸಹಾಯ ಮಾಡಿದ್ದಾರೆ.
ಗುಡಿಸಲಿನಲ್ಲಿ ಮಲಗಿದ್ದ 14 ತಿಂಗಳ ಮಗು ಕಳ್ಳತನ: ದೂರು ನೀಡಿದ ದಂಪತಿ
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಮಳಲಿ ಗ್ರಾಮದಲ್ಲಿ ಗುಡಿಸಲಿನಲ್ಲಿ ಮಲಗಿದ್ದ 14 ತಿಂಗಳ ಹೆಣ್ಣು ಮಗುವನ್ನು ದುಷ್ಟರು ಕದ್ದೊಯ್ದಿರುವಂತಹ ಘಟನೆ ನಡೆದಿದೆ. ಸಂಜು ಮತ್ತು ರೋಹಿತ್ ದಂಪತಿ ಪುತ್ರಿ ಹದಿನಾಲ್ಕು ತಿಂಗಳ ಹೆಣ್ಣು ಮಗು ಕೀರ್ತಿಯನ್ನ ಕಳ್ಳತನ ಮಾಡಲಾಗಿದೆ. ಮದ್ಯ ಪ್ರದೇಶ ಮೂಲದ ಸಂಜು ಮತ್ತು ರೋಹಿತ್ ದಂಪತಿ ಕೂಲಿ ಕೆಲಸಕ್ಕೆ ಬಂದಿದ್ದರು.
ಇದನ್ನೂ ಓದಿ: ಹಾಸನದಲ್ಲಿ ಮತ್ತೆ ಮುನ್ನಲೆಗೆ ಬಂದ ಹಿಜಾಬ್-ಕೇಸರಿ ಶಾಲು ಸಂಘರ್ಷ: ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು
ಕಳೆದ ಮೂರು ತಿಂಗಳಿಂದ ಇಟ್ಟಿಗೆ ತಯಾರಿಕೆ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಯಲ್ಲಿ ಮಗು ಮಲಗಿಸಿ ನದಿಗೆ ಸ್ನಾನಕ್ಕೆ ನದಿಗೆ ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ. ಮಗು ಕಳ್ಳತನದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.