ಹಾಸನದಲ್ಲಿ ಮತ್ತೆ ಮುನ್ನಲೆಗೆ ಬಂದ ಹಿಜಾಬ್​​-ಕೇಸರಿ ಶಾಲು ಸಂಘರ್ಷ: ಕಾಲೇಜಿಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು

ವರ್ಷದ ಬಳಿಕ‌ ಹಾಸನದಲ್ಲಿ ಮತ್ತೆ ಹಿಜಾಬ್ ಮತ್ತು ಕೇಸರಿ ದಂಗಲ್ ಶುರುವಾಗಿದೆ. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರ ನಡೆಗೆ ಅಸಮಾಧಾನ ವ್ಯಕ್ತವಾಗಿದೆ. ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಯರಿಗೆ ಉಪನ್ಯಾಸಕರು ಬುದ್ದಿ ಹೇಳಿದರೂ ಬದಲಾಗದ ಆರೋಪ ಕೇಳಿಬಂದಿದೆ. ಹಿಜಾಬ್ ವಿರುದ್ದ ಕೇಸರಿ ಶಾಲ್ ಧರಿಸಿಕೊಂಡು ಬರುವ ಮೂಲಕ ವಿದ್ಯಾರ್ಥಿಗಳು ತಿರುಗೇಟು ನೀಡಿದ್ದಾರೆ.

ಹಾಸನದಲ್ಲಿ ಮತ್ತೆ ಮುನ್ನಲೆಗೆ ಬಂದ ಹಿಜಾಬ್​​-ಕೇಸರಿ ಶಾಲು ಸಂಘರ್ಷ: ಕಾಲೇಜಿಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು
ಹಿಜಾಬ್ ವರ್ಸಸ್ ಕೇಸರಿ ಶಾಲು ಸಂಘರ್ಷ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2024 | 3:56 PM

ಹಾಸನ, ಮಾರ್ಚ್​ 08: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ (Hijab) ವರ್ಸಸ್ ಕೇಸರಿ ಶಾಲು ಸಂಘರ್ಷ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ವರ್ಷದ ಬಳಿಕ‌ ಹಾಸನದಲ್ಲಿ ಮತ್ತೆ ಹಿಜಾಬ್ ಮತ್ತು ಕೇಸರಿ ದಂಗಲ್ ಶುರುವಾಗಿದೆ. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರ ನಡೆಗೆ ಅಸಮಾಧಾನ ವ್ಯಕ್ತವಾಗಿದೆ. ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಯರಿಗೆ ಉಪನ್ಯಾಸಕರು ಬುದ್ದಿ ಹೇಳಿದರೂ ಬದಲಾಗದ ಆರೋಪ ಕೇಳಿಬಂದಿದೆ. ಇನ್ನು ಹಿಜಾಬ್ ವಿರುದ್ದ ಕೇಸರಿ ಶಾಲ್ ಧರಿಸಿಕೊಂಡು ಬರುವ ಮೂಲಕ ವಿದ್ಯಾರ್ಥಿಗಳು ತಿರುಗೇಟು ನೀಡಿದ್ದಾರೆ. ಕೇಸರಿ ಶಾಲು ಧರಿಸಿ ರೀಲ್ಸ್ ಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟಾಂಗ್​ ನೀಡಿದ್ದಾರೆ. ಆ ಮೂಲಕ ಖಾಸಗಿ ಕಾಲೇಜಿನಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗಿದೆ.

ಉಡುಪಿ ಕಾಲೇಜಿನಲ್ಲಿ ಶುರುವಾಗಿದ್ದ ಹಿಜಾಬ್ ಸಮರ, ಸುಪ್ರೀಂಕೋರ್ಟ್​ವರೆಗೂ ತಲುಪಿತ್ತು. ಬಳಿಕ ಶಾಲಾ ಕಾಲೇಜಿನ ಕ್ಲಾಸ್ ರೂಂಗಳಲ್ಲಿ ಹಿಜಾಬ್​ನಂಥ ಧಾರ್ಮಿಕ ಗುರುತುಗಳನ್ನ ಧರಿಸೋದಕ್ಕೆ ಹಿಂದಿನ ಬಿಜೆಪಿ ಸರ್ಕಾರ ನಿಷೇಧ ಹೇರಿತ್ತು. ಬಳಿಕ ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ಆದೇಶವನ್ನ ವಾಪಸ್ ಪಡೆಯೋದಾಗಿ ಹೇಳಿದ್ದಾರೆ. ಇದು ಬಿಜೆಪಿಗರನ್ನ ಕೆರಳಿಸಿತ್ತು.

ಇದನ್ನೂ ಓದಿ: Hijab: ನಾನು ಮತ್ತೆ ಕಾಲೇಜಿಗೆ ಹೋಗುತ್ತೇನೆ, ಹಿಜಾಬ್ ವಿಚಾರಕ್ಕೆ ಸಿಎಂಗೆ ಧನ್ಯವಾದ ತಿಳಿಸಿದ ವಿದ್ಯಾರ್ಥಿನಿ ಮುಸ್ಕಾನ್

ಹಿಜಾಬ್ ಹಾಕಿಕೊಂಡೇ ಹೋಗಿ, ಹಿಜಾಬ್ ನಿಷೇಧ ವಾಪಸ್ ಪಡೆಯೋಕೆ ಅಧಿಕಾರಿಗಳಿಗೆ ಹೇಳುತ್ತೇನೆ ಎಂದಿದ್ದರು. ಬಟ್ಟೆ ತೊಡೋದು, ಊಟ ಮಾಡೋದು ಅವರವರ ಇಷ್ಟ. ನಾನೇಕೆ ಅಡ್ಡಿ ಪಡಿಸಲಿ ಅಂತಾ ತಮ್ಮ ಹೇಳಿಕೆಯನ್ನ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು.

ಉಡುಪಿಯ ಕಾಲೇಜಿನಿಂದ ಹಿಜಾಬ್ ವಿವಾದ ಶುರುವಾಗಿತ್ತು. ಕಾಲೇಜ್​ಗೆ ಹಿಜಾಬ್ ಧರಿಸಿ 6 ವಿದ್ಯಾರ್ಥಿನಿಯರು ಬಂದಿದ್ದರು. ಕಾಲೇಜು ಆಡಳಿತ ಮಂಡಳಿ ಇದನ್ನು ಪ್ರಶ್ನಿಸಿತ್ತು. ಬಳಿಕ ವಿವಾದವಾಗ್ತಿದ್ದಂತೆ ಹಿಜಾಬ್ ಧರಿಸಿ ಬಂದಿದ್ದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿತ್ತು. 2022 ಜನವರಿ 31ರಂದು ವಿದ್ಯಾರ್ಥಿನಿಯರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮಾರ್ಚ್​​ 15ರಂದು ತೀರ್ಪು ನೀಡಿದ ಹೈಕೋರ್ಟ್ ಹಿಜಾಬ್ ಮುಸ್ಲಿಂ ಮಹಿಳೆಯರ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ನಿಗದಿಪಡಿಸುವುದು ಸೂಕ್ತವಾದ ನಿರ್ಬಂಧನೆ. ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ ಅಂತ ಹೇಳಿ ಹಿಜಾಬ್​ಗೆ ಕೋರಿದ್ದ ರಿಟ್ ಅರ್ಜಿಗಳು ವಜಾಗೊಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.