ಸಂಸದ ಪ್ರಜ್ವಲ್ ರೇವಣ್ಣರ 5 ವರ್ಷದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ

ವಿಧಾನಸಭೆ ಚುನಾವಣೆಯಲ್ಲಾದ ಸೋಲಿನಿಂದ ಮೇಲೆದ್ದು ಬರಲು ತಯಾರಾಗಿರುವ ದಳಪತಿಗಳು, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮರು ವಶಕ್ಕೆ ಸಜ್ಜಾಗಿದ್ದಾರೆ. ಇದಕ್ಕೆ ಪೂರಕವಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರ ಐದು ವರ್ಷದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್​ನ್ನು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಬಿಡುಗಡೆಗೊಳಿಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣರ 5 ವರ್ಷದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ
ಸಂಸದ ಪ್ರಜ್ವಲ್ ರೇವಣ್ಣರ 5 ವರ್ಷದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ದೇವೇಗೌಡ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2024 | 9:23 PM

ಹಾಸನ, ಮಾ.06: ಲೋಕಸಭೆ ಚುನಾವಣೆ(Lok Sabha Election) ಸಮೀಪವಾಗುತ್ತಿದೆ, ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ಭರ್ಜರಿ ತಯಾರಿ ಮಾಡಿರುವ ಬಿಜೆಪಿ ಮೊದಲಪಟ್ಟಿಯನ್ನೂ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಜೊತೆಗೆ ಕೈ ಮಣಿಸಲು ಅಖಾಡಕ್ಕಿಳಿದಿರುವ ಮೈತ್ರಿ ಟೀಂ ರಣತಂತ್ರ ಹೆಣೆಯುತ್ತಿದ್ದರೆ, ವಿಧಾನಸಭೆ ಚುನಾವಣೆಯಲ್ಲಾದ ಸೋಲಿನಿಂದ ಮೇಲೆದ್ದು ಬರಲು ತಯಾರಾಗಿರುವ ದಳಪತಿಗಳು, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮರು ವಶಕ್ಕೆ ಸಜ್ಜಾಗಿದ್ದಾರೆ. ಇದಕ್ಕೆ ಪೂರಕವಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರ ಐದು ವರ್ಷದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್​ನ್ನು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಬಿಡುಗಡೆಗೊಳಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಮರು ವಶಕ್ಕೆ ಸಜ್ಜಾದ ದಳಪತಿಗಳು

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಇಂದು ಸಂಸದರ ಐದು ವರ್ಷಗಳ ಅವಧಿಯಲ್ಲಿ ನಡೆದಿರುವ ಸಾವಿರಾರು ಕೋಟಿ ಕಾಮಗಾರಿಗಳ ಮಾಹಿತಿ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಸಭೆಯಲ್ಲಿ ಮಾಜಿ ಸಚಿವ ಎಚ್ಡಿ ರೇವಣ್ಣ, ಶಾಸಕರಾದ ಸಿ.ಎನ್ ಬಾಲಕೃಷ್ಣ, ಸ್ಚರೂಪ್ ಪ್ರಕಾಶ್, ಸಂಸದ ಪ್ರಜ್ವಲ್ ಭಾಗಿಯಾಗಿದ್ದರು. ಇನ್ನು ಜೆಡಿಎಸ್ ಭದ್ರಕೋಟೆ ಹಾಸನ ಕ್ಷೇತ್ರ ಉಳಿಸಿಕೊಳ್ಳಲು ದಳಪತಿಗಳ ರಣತಂತ್ರ ಹೆಣೆಯುತ್ತಿದ್ದು, ಈಗಾಗಲೇ ಹಾಸನ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಜೆಡಿಎಸ್ ಘೋಷಣೆ ಮಾಡಿದೆ.

ಇದನ್ನೂ ಓದಿ:ಹಾಸನ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದಾರೆ: ಸಿದ್ದರಾಮಯ್ಯ

ನಾನು ಪ್ರಜ್ವಲ್ ಹಿಂದೆ ನಿಂತು ಸಲಹೆ ಕೊಡ್ತೇನೆ- ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ

ಇನ್ನು ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ‘ಸಮಸ್ಯೆಗಳು ಬಹಳ ಇದೆ, ಮಾಡಬೇಕಾದ್ದು ಕೂಡ ಸಾಕಷ್ಟು ಇದೆ. ಆದರೂ ಪ್ರಜ್ವಲ್ ಶಕ್ತಿಮೀರಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ವಾರದ ಹಿಂದೆಯಷ್ಟೇ ಅರಸೀಕೆರೆ, ಹಾಸನದಲ್ಲಿ ಸಭೆ, ಹಾಸನದ ಮೆಡಿಕಲ್ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಆದರೆ, ಈ ಕಾಲೇಜು ಆಗಿದ್ದು ಯಾವಾಗ?, ಮೆಡಿಕಲ್ ಕಾಲೇಜು ಉಳಿಸಲು ರೇವಣ್ಣ ಮಾಡಿದ ಪ್ರಯತ್ನ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಈಗ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಮಾಡಿರುವ ಕೆಲಸ ಜನರಿಗೆ ಮುಟ್ಟಿಸಲು ನಾವು ಹಿಂದೆ ಬಿದ್ದರೆ, ಮುಂದಿನ 100 ದಿನಗಳಲ್ಲಿ ನಮ್ಮ ಎದುರಾಳಿಗಳು ನಮ್ಮನ್ನ ರಾಜಕೀಯವಾಗಿ ಮುಗಿಸುತ್ತಾರೆ. ಇಷ್ಟೆಲ್ಲ ಕೆಲಸ ಮಾಡಿರುವ ಸಂಸದರನ್ನ ಸೋಲಿಸಲೇಬೇಕು ಎಂದು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಹಾಸನ: ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಘೋಷಣೆ

‘ಹಿಂದೆ ಚಂದ್ರಶೇಖರ್ ಅವರು ಪ್ರಧಾನಿ ಆಗಿದ್ದಾಗ ನನ್ನ ಮಂತ್ರಿ ಮಾಡ್ತೇನೆ ಬಾ ಎಂದರು, ನನಗೆ ಮಂತ್ರಿ ಸ್ಥಾನ ಬೇಡಾ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದಿದ್ದೆ. ಇವತ್ತು ಈ ಜಿಲ್ಲೆಯ ಉಸ್ತುವಾರಿ ಸಚಿವರು ರಾಜಣ್ಣ ಆಗಿದ್ದಾರೆ. ಅವರ ಬಗ್ಗೆ ನಾನು ನಿಂದನೆ‌ಮಾಡೋದಿಲ್ಲ. ನಾನು ಅನಾರೋಗ್ಯ ದಿಂದ ಮಲಗಿದ್ದೆ, ನೀವು ಬರದೆ ಹೋದರೆ ನಾನು ಸೋಲ್ತಿನಿ ಎಂದರು. ಈ ಹಿನ್ನಲೆ ಹೋದೆ ರಾಜಣ್ಣ ಅವರನ್ನು ಗೆಲ್ಲಿಸಿದೆ. ನಾನು ಯಾರಿಗೆ ಅನ್ಯಾಯ ಮಾಡಿದೆ ಎಂದು ಪ್ರಶ್ನಿಸಿದರು.

ಪ್ರಜ್ವಲ್​ ಮಾಡಿರೋ ಅಭಿವೃದ್ದಿ ಕಾರ್ಯವನ್ನ ಜನರ ಬಳಿಗೆ ತಲುಪಿಸಬೇಕು

ಗೌರವಾನ್ವಿತ ಸಿಎಂ ಹೇಳಿದ್ದರೂ, ‘ಬಿಜೆಪಿ ತೆಗೆದ ಮುಸ್ಲಿಂ ಮೀಸಲಾತಿಯನ್ನ ನಾನು ಅಧಿಕಾರಕ್ಕೆ ಬಂದ ಕೂಡಲೇ ಕೊಡ್ತೀನಿ ಎಂದು, ಈಗ ಏನಾಯಿತು ಹೇಳಿ ಎಂದರು. ನಾನು ಯಾವ ಸಮಾಜಕ್ಕೆ ಅನ್ಯಾಯ ಮಾಡಿದ್ದೇನೆ, ಕೇವಲ ನಾನು ನನ್ನ ಮಗ ಎಂದು ಯೋಚನೆ ಮಾಡಿಲ್ಲ. ವಿದಾನಪರಿಷತ್, ರಾಜ್ಯ ಸಭೆಗೆ ಹಲವರನ್ನು ಆಯ್ಕೆ ಮಾಡಿಲ್ಲವೇ, ಇವತ್ತು ಹಾಸನದಲ್ಲಿ ಪ್ರಜ್ವಲ್ ಮೇಲೆ ಗದಾ ಪ್ರಹಾರ ಮಾಡುತ್ತಾರೆ. ನಾನು ಎರಡು ಮೂರು ದಿನ ಬರಬಹುದು, ಈ ನೂರು ದಿನದಲ್ಲಿ ಎದುರಾಳಿಗಳು ಮಾಡುವ ದಾಳಿ ಎದುರಿಸುವ ಸಂಕಲ್ಪ ಮಾಡಬೇಕು. ಪ್ರಜ್ಚಲ್ ಮಾಡಿರೊ ಅಭಿವೃದ್ಧಿ ಕಾರ್ಯಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಹಾಸನ: ಕಾಂಗ್ರೆಸ್ ಸಮಾವೇಶಕ್ಕೆ ಬಸ್ ಉಂಟು, ಪಿಯು ಪರೀಕ್ಷೆ ಬರೆಯಲು ಹೋಗುವ ಮಕ್ಕಳಿಗೆ ಬಸ್ಸಿಲ್ಲ! ಸರ್ಕಾರದ ಹೊಸ ಗ್ಯಾರಂಟಿ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ಪ್ರಸ್ತಾಪಿಸಿ ಹೆಚ್‌ಡಿಡಿ ಕಿಡಿ

ಇನ್ನು ಈ ಹಿಂದೆ ಜೆಡಿಎಸ್​ ಹಾಗೂ ಕಾಂಗ್ರೆಸ್​ ಮೃತ್ರಿ ಸರ್ಕಾರದ ವಿರುದ್ದ ಹೆಚ್​ಡಿಡಿ ಕಿಡಿಕಾರಿದರು. ‘ರೈತರ ಸಾಲಮನ್ನಾ ಮಾಡೋದಾದ್ರೆ ನನ್ನ ಎಲ್ಲಾ ಭಾಗ್ಯಗಳಿಗೆ ಹಣ ಇಟ್ಟು, ಆ ಮೇಲೆ ರೈತರ ಸಾಲಮನ್ನಾ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಎಲ್ಲಾ ಭಾಗ್ಯಗಳಿಗೂ ಅಂದಿನ ಸಿಎಂ ಕುಮಾರಸ್ವಾಮಿ ಹಣ ಒದಗಿಸಿದ್ದರು. ಕುಮಾರಸ್ವಾಮಿ ರೈತರ 26 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರಲ್ಲ, ಅದಕ್ಕೆ ಅಸೂಯೆ ಪಡ್ತೀರಾ, ನಿಮ್ಮ ಎಲ್ಲಾ ಭಾಗ್ಯಗಳಲ್ಲಿ ಏನಿದೆ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ವರಿಷ್ಠ H.D.ದೇವೇಗೌಡ ಕಿಡಿಕಾರಿದರು.

ನನ್ನ ಬಗ್ಗೆ ಮೋದಿಯವರು ತುಂಬಾ ಗೌರವ ಇಟ್ಟು ಕೊಂಡಿದ್ದಾರೆ

ಮೋದಿಯವರ ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ, ಹೀಗಾಗಿ ನನ್ನ ಬಗ್ಗೆ ತುಂಬಾ ಗೌರವ ಇಟ್ಟು ಕೊಂಡಿದ್ದಾರೆ. ಅದೇ ಕಾಂಗ್ರೆಸ್ ನನ್ನನ್ನು ಅಧಿಕಾರದಿಂದ ಕಿತ್ತು ಹಾಕಿತು. ಈ ದೇವೇಗೌಡ ಒಂದೇ ಒಂದು ರೂಪಾಯಿ ದುರುಪಯೋಗ ಮಾಡಿಲ್ಲ. ಇಡೀ ಹಿಂದೂಸ್ಥಾನದಲ್ಲಿ ನನ್ನ ಬಗ್ಗೆ ಯಾರೂ ಆರೋಪ ಮಾಡಲ್ಲ. ನಾನು ಪ್ರಧಾನಿಯಾಗಿ ದೇಶದ ಹಲವಾರು ಸಮಸ್ಯೆ ಬಗೆ ಹರಿಸಿದ್ದೇನೆ. ನೇಗಿಲ ಗೆರೆ ಪುಸ್ತಕ ಓದಬೇಕು. ನನಗೆ ಇನ್ನೂ ಎರಡು ವರ್ಷ ರಾಜ್ಯಸಭೆ ಅವಕಾಶ ಇದೆ. ನಾನು ಪ್ರಜ್ವಲ್ ಹಿಂದೆ ನಿಲ್ತೇನೆ, ಅವರ ದುಡಿಮೆ‌ ಓಡಾಟ ನನಗೆ ಆಗಲ್ಲ, ಅವರಿಗೆ ಸಲಹೆ ಕೊಡ್ತೇನೆ, ಜಿಲ್ಲೆಯ ಜನತೆಯ ಋಣ ತೀರಿಸೋಣ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ