ನರ್ಸಿಂಗ್​ ವಿದ್ಯಾರ್ಥಿನಿ ಆತ್ಮಹತ್ಯೆ: ಸಾಯುವ ಮುನ್ನ ತಾಯಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2024 | 3:43 PM

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವಾರ ವಿದ್ಯೋದಯ ನರ್ಸಿಂಗ್ ಕಾಲೇಜಿನ ಬಿಎ ನರ್ಸಿಂಗ್ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗುತ್ತಿದೆ. ಸದ್ಯ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನರ್ಸಿಂಗ್​ ವಿದ್ಯಾರ್ಥಿನಿ ಆತ್ಮಹತ್ಯೆ: ಸಾಯುವ ಮುನ್ನ ತಾಯಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತಾ?
ನರ್ಸಿಂಗ್​ ವಿದ್ಯಾರ್ಥಿನಿ ಆತ್ಮಹತ್ಯೆ, ಸಾಯುವ ಮುನ್ನ ತಾಯಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತಾ?
Follow us on

ನೆಲಮಂಗಲ, ಆಗಸ್ಟ್​ 05: ಖಿನ್ನತೆಗೆ ಒಳಗಾಗಿದ್ದ ಬಿಎ ನರ್ಸಿಂಗ್ ವಿದ್ಯಾರ್ಥಿನಿ (student) ಕಾಲೇಜು ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ವಿದ್ಯೋದಯ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ. ಕೇರಳ ಮೂಲದ ಅತುಲ್ಯ (19) ಮೃತ ವಿದ್ಯಾರ್ಥಿನಿ. ಕಳೆದ ಒಂದುವರೆ ತಿಂಗಳ ಹಿಂದಷ್ಟೇ ಯುವತಿ ನರ್ಸಿಂಗ್ ಸೇರಿಕೊಂಡಿದ್ದಳು.

ಒಂಟಿತನ ಕಾಡುತ್ತಿದ್ದ ಬಗ್ಗೆ ತನ್ನ ತಾಯಿಗೆ ಅತುಲ್ಯ ಕರೆ ಮಾಡಿದ್ದಾಳೆ. ಫೋನ್​ನಲ್ಲಿ ಮಾತನಾಡುವ ನೆಪದಲ್ಲಿ ಕಾಲೇಜು ಕಟ್ಟಡ ಏರಿದ್ದಾಳೆ. ಬಳಿಕ ಅಲ್ಲಿಂದ ಜಿಗಿದಿದ್ದು, ಗಂಭೀರ ಗಾಯಗೊಂಡಿದ್ದಳು. 8ನೇ ಮೈಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾಳೆ. ಘಟನೆ ಸಂಬಂಧ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಗಭದ್ರಾ ನದಿಯಲ್ಲಿ ಮುಳುಗಿ ರೈತ ಸಾವು

ಬಳ್ಳಾರಿ: ಪಂಪ್​​ ಸೆಟ್ ತೆಗೆಯಲು ಹೋದಾಗ ತುಂಗಭದ್ರಾ ನದಿಯಲ್ಲಿ ಮುಳುಗಿ ರೈತ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಂದಿಪುರ ಕ್ಯಾಂಪ್ ಗಡ್ಡೆ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಬಾಗೇವಾಡಿ ಗ್ರಾಮದ ಹೀರನಾಗಪ್ಪ (35) ಮೃತ ರೈತ. ನದಿ ಮೂಲಕ ಜಮೀನಿಗೆ ನೀರು ಹರಿಸಲು ಪಂಪ್ ಸೆಟ್ ಹಾಕಿದ್ದರು.

ಇದನ್ನೂ ಓದಿ: ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಬಿಡದಿಯಲ್ಲಿ ಆತ್ಮಹತ್ಯೆ

ಪಂಪ್ ಸೆಟ್​ಗೆ ತ್ಯಾಜ್ಯ ಅಡ್ಡ ಬಂದಿದ್ದರಿಂದ ತೆರವು ಮಾಡಲು ನೀರಿನ ಆಳದ ಅರಿವಿಲ್ಲದೇ ನದಿಗೆ ಇಳಿದಿದ್ದಾರೆ. ಈ ವೇಳೆ ಮುಳುಗಿ ಮೃತಪಟ್ಟಿದ್ದಾರೆ. ಸದ್ಯ ಸ್ಥಳೀಯರು ಮೃತದೇಹ ಹೊರತೆಗೆದಿದ್ದಾರೆ. ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು: ನೀರು ಖಾಲಿ ಮಾಡಿ ಮೃತದೇಹ ಹುಡುಕಾಟ

ಯಾದಗಿರಿ: ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಸುರಪುರ ತಾಲೂಕಿನ ಮಲ್ಲಾ ಗ್ರಾಮದಲ್ಲಿ ನಡೆದಿದೆ. ದತ್ತಪ್ಪ (40) ಮೃತ ವ್ಯಕ್ತಿ. ನಿನ್ನೆಯಿಂದ ಹುಡುಕುತ್ತಿದ್ದರು ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಗ್ರಾಮಸ್ಥರು ಕೆರೆಯ ನೀರನ್ನು ಖಾಲಿ ಮಾಡಿ ಮೃತದೇಹ ಹುಡುಕಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಖಾಕಿ ಕಂಡು ಕಾಲ್ಕಿತ್ತಿದ ಕಳ್ಳರು: ಸಿನೀಮಿಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದ ಪೊಲೀಸರು

ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಬಾರದೇ ಇರೋದ್ರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.