ಖಾಕಿ ಕಂಡು ಕಾಲ್ಕಿತ್ತಿದ ಕಳ್ಳರು: ಸಿನೀಮಿಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದ ಪೊಲೀಸರು

ಆಂಧ್ರ ಪ್ರದೇಶದ ಅನಂತಪುರದಲ್ಲಿ ಗ್ಯಾಸ್ ಕಟರ್​ ಬಳಸಿ ಎಟಿಎಂನಿಂದ ಹಣ ದೋಚಿದ್ದ ಕಳ್ಳರ ಗ್ಯಾಂಗ್​ಯನ್ನು ಕರ್ನಾಟಕದ ಬಾಗಲಕೋಟಿ ಜಿಲ್ಲೆಯ ಹುನಗುಂದ ಮತ್ತು ಇಳಕಲ್ ಪೊಲೀಸರು ಬಂಧಿಸಿದ್ದಾರೆ. ಕಳ್ಳರು ಅನಂತಪುರದಿಂದ ಕರ್ನಾಟಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಮೇರೆಗೆ ವಾನಹಗಳ ತಪಾಸಣೆ ವೇಳೆ ಸಿಕ್ಕಿಬಿದಿದ್ದಾರೆ.

ಖಾಕಿ ಕಂಡು ಕಾಲ್ಕಿತ್ತಿದ ಕಳ್ಳರು: ಸಿನೀಮಿಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದ ಪೊಲೀಸರು
ಖಾಕಿ ಕಂಡು ಕಾಲ್ಕಿತ್ತಿದ ಕಳ್ಳರು, ಸಿನೀಮಿಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದ ಪೊಲೀಸರು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2024 | 2:59 PM

ಬಾಗಲಕೋಟೆ, ಆಗಸ್ಟ್​​ 05: ಸಿನೀಮಿಯ ರೀತಿಯಲ್ಲಿ ಚೇಸ್ ಮಾಡುವ ಮೂಲಕ ಇಬ್ಬರು ಅಂತಾರಾಜ್ಯ ಕಳ್ಳರನ್ನು (Thieves) ಇಳಕಲ್​ ಹಾಗೂ ಹುನಗುಂದ ಠಾಣೆ ಪೊಲೀಸರು (police) ಬಂಧಿಸಿದ್ದಾರೆ. ಆ ಮೂಲಕ ಪರಾರಿ ಆಗಲು ಕಳ್ಳರು ಮಾಡಿದ ಎಲ್ಲಾ ಪ್ಲ್ಯಾನ್​ ತಲೆಕೆಳಗಾಗಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿ ಗ್ಯಾಸ್ ಕಟಟ್​ನಿಂದ ಎಟಿಎಂನಲ್ಲಿದ್ದ ಹಣವನ್ನು ಕಳ್ಳರ ಗ್ಯಾಂಗ್ ದೋಚಿದ್ದರು. ಕಳ್ಳರು ಅನಂತಪುರದಿಂದ ಕರ್ನಾಟಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಇತ್ತು.

ಹುನಗುಂದ, ಇಳಕಲ್​ ಎನ್​ಹೆಚ್ 50ರಲ್ಲಿ ಹೋಗುವ ದೆಹಲಿ ಪಾಸಿಂಗ್ ವಾಹನ ತಪಾಸಣೆ ಮಾಡಲು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಸೂಚಿಸಿದ್ದಾರೆ. ಅವರ ಆದೇಶದ ಮೇರಿಗೆ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡಿದ ಪೊಲೀಸರು ಹುನಗುಂದ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ದಾರಿಯ ಬೆಳಗಲ್ ಚೆಕ್ ಪೋಸ್ಟ್​ನಲ್ಲಿ ವಾಹನ ತಡೆದು ತಪಾಸಣೆ ಮಾಡಿದ್ದಾರೆ.

ಇದನ್ನೂ ಓದಿ: ಅವಳಿ ನಗರದಲ್ಲಿ ಪೊಲೀಸರಿಂದ ಮುಂದುವರೆದ ಗಾಂಜಾ ಕುಳಗಳ ಬೇಟೆ: 467 ಜನರು ವಶಕ್ಕೆ ಪಡೆದು ತಪಾಸಣೆ

ಈ ವೇಳೆ ಅದೇ ಮಾರ್ಗದಲ್ಲಿ ಬಂದ ಕಳ್ಳರ ಗ್ಯಾಂಗ್​ ಪೊಲೀಸರನ್ನು ಕಂಡು ಜಾಗೃತರಾಗಿ ವಾಹನ ಹಿಂತಿರುಗಿಸಿದ್ದಾರೆ. ಹುನಗುಂದ ಮಾರ್ಗದ ಧನ್ನೂರು-ಮುದ್ದೇಬಿಹಾಳದ ಅಡ್ಡದಾರಿ ಹಿಡಿದು ಪರಾರಿ ಆಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನುಹತ್ತಿದ ಹೈವೇ ಪೊಲೀಸರು ಚೇಸ್​ ಮಾಡಿದ್ದಾರೆ. ಈ ವೇಳೆ ಪೊಲೀಸ್ ವಾಹನಕ್ಕೆ ಕಳ್ಳರ ವಾಹನ ಡಿಕ್ಕಿ ಹೊಡೆದಿದೆ. ಹೀಗಾಗಿ ವಾಹನ ಬಿಟ್ಟು ಕಳ್ಳರು ಹೊಲದಲ್ಲಿ ಓಡಿ ಹೋಗಿದ್ದಾರೆ.

ಅತ್ತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ನೆರವು ಪಡೆದ ಪೊಲೀಸ್​ ಕಳ್ಳರು ಹೈವೇಗೆ ಬರುವಂತೆ ಮಾಡಿದ್ದಾರೆ. ಕಳ್ಳರು ಹೈವೆಗೆ ಬರ್ತಿದ್ದಂತೆ ಸುತ್ತುವರೆದು ಇಬ್ಬರು ಕಳ್ಳರನ್ನು ಪೊಲೀಸ್ ತಂಡ ಬಂಧಿಸಿದೆ. ಸದ್ಯ ಹುನಗುಂದ ಠಾಣೆಗೆ ಆಂಧ್ರ ಪೊಲೀಸರು ಆಗಮಿಸಿದ್ದು, ಕಳ್ಳರನ್ನ ಆಂಧ್ರಕ್ಕೆ ಕರೆದೊಯ್ಯಲಿದ್ದಾರೆ.

ಇಬ್ಬರು ನಟೋರಿಯಸ್​ ಕಳ್ಳರ ಬಂಧನ

ಚಾಮರಾಜನಗರ: ಇಬ್ಬರು ನಟೋರಿಯಸ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸರಿಂದ ಕಾರ್ಯಾಚರಣೆ ಮಾಡಿ, ಬೆಂಗಳೂರಿನ ಕೆಂಗೇರಿಯ ತೌಷಿಫ್ ಮತ್ತು ಮೈಸೂರು ಸುಭಾಷ್‌ ನಗರದ ಆರೀಫ್​ರನ್ನು ಅರೆಸ್ಟ್​ ಮಾಡಲಾಗಿದೆ. ಕೇವಲ ವಿದ್ಯುತ್ ಜನರೇಟರ್ ಹಾಗೂ ವಾಹನಗಳ ಬ್ಯಾಟರಿಗಳನ್ನೆ ಐನಾತಿಗಳು ಟಾರ್ಗೆಟ್ ಮಾಡುತ್ತಿದ್ದರು. ಬಂಧಿತರಿಂದ ಸ್ಕಾರ್ಪಿಯೋ ಕಾರು, ವಿದ್ಯುತ್ ಜನರೇಟರ್, ವಾಹನಗಳ ಬ್ಯಾಟರಿ ಸೇರಿದಂತೆ 11.70 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಮನಸೋ ಇಚ್ಛೆ ಥಳಿಸಿ ಹಲ್ಲೆ ಮಾಡಿದ ಪಿಎಸ್ಐ

ಹೆದ್ದಾರಿ ಬದಿಯಲ್ಲಿ ನಿಲ್ಲಿಸುತ್ತಿದ್ದ ಲಾರಿ, ಕ್ರೇನ್ ಮತ್ತಿತರ ವಾಹನಗಳ ಬ್ಯಾಟರಿ ಕಳ್ಳತನ‌ ಮಾಡುತ್ತಿದ್ದರು.  ಚಾಮರಾಜನಗರ, ಕೋಲಾರ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಖದೀಮರು‌ ಕಳ್ಳತನ ಮಾಡಿದ್ದಾರೆ. ಸದ್ಯ ಖತರ್ನಾಕ್ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ