ಅವಳಿ ನಗರದಲ್ಲಿ ಪೊಲೀಸರಿಂದ ಮುಂದುವರೆದ ಗಾಂಜಾ ಕುಳಗಳ ಬೇಟೆ: 467 ಜನರು ವಶಕ್ಕೆ ಪಡೆದು ತಪಾಸಣೆ

ಇಂದು ಹುಬ್ಬಳ್ಳಿಯ ಆರ್​ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಎರಡನೇ ಸುತ್ತಿನ ಜಾಗೃತಿ ಕಾರ್ಯಗಾರ ಮಾಡಲಾಗಿದೆ. ಪಾಸಿಟಿವ್ ಬಂದ ವ್ಯಸನಿಗಳಿಗೆ ಮತ್ತು ಪೋಷಕರಿಗೂ ಪೊಲೀಸರಿಂದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮಾದಕ ವಸ್ತುಗಳ ವ್ಯಸನದಿಂದ ಹೊರ ಬರಲು ಸಲಹೆ ನೀಡಲಾಗಿದೆ. ಮಕ್ಕಳ ನಡತೆಯಿಂದ ಬೇಸತ್ತ ಪೋಷಕರು ಕಮಿಷನರ್ ಮುಂದೆ ಕಣ್ಣೀರು ಹಾಕಿದ್ದಾರೆ. 

ಅವಳಿ ನಗರದಲ್ಲಿ ಪೊಲೀಸರಿಂದ ಮುಂದುವರೆದ ಗಾಂಜಾ ಕುಳಗಳ ಬೇಟೆ: 467 ಜನರು ವಶಕ್ಕೆ ಪಡೆದು ತಪಾಸಣೆ
ಅವಳಿ ನಗರದಲ್ಲಿ ಪೊಲೀಸರಿಂದ ಮುಂದುವರೆದ ಗಾಂಜಾ ಕುಳಗಳ ಬೇಟೆ: 467 ಜನರು ವಶಕ್ಕೆ ಪಡೆದು ತಪಾಸಣೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2024 | 7:59 PM

ಹುಬ್ಬಳ್ಳಿ, ಆಗಸ್ಟ್​ 4: ಅವಳಿ ನಗರದಲ್ಲಿ ಪೊಲೀಸರಿಂದ ಗಾಂಜಾ (ganja) ಕುಳಗಳ ಭೇಟಿ ಮುಂದುವರೆದಿದೆ. ಗಾಂಜಾ ಮಾರಾಟಗಾರರು ಮತ್ತು ವ್ಯಸನಿಗಳು ಸೇರಿದಂತೆ ಒಟ್ಟು 467 ಜನರನ್ನು ಖಾಕಿ (police) ವಶಕ್ಕೆ ಪಡೆದುಕೊಂಡಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಶಶಿ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ವಶಕ್ಕೆ ಪಡೆದವರನ್ನು ಹುಬ್ಬಳ್ಳಿಯ ಕಿಮ್ಸ್, ಧಾರವಾಡದ ಎಸ್ಡಿಎಂ, ಡಿ ಮಾನ್ಸ್​ಗಳಲ್ಲಿ ತಪಾಸಣೆ ಮಾಡಿಸಲಾಗಿದೆ.

467 ಗಾಂಜಾ ವ್ಯಸನಿಗಳಲ್ಲಿ 251 ಜನರ ರಿಸಲ್ಟ್ ಪಾಸಿಟಿವ್ ಬಂದಿದ್ದು, 216 ಜನರ ವರದಿ ನೆಗೆಟಿವ್ ಬಂದಿದೆ. ವಶಕ್ಕೆ ಪಡೆದವರಲ್ಲಿ 45 ಜನರ ಮೇಲೆ ದೂರು ದಾಖಲಾಗಿದೆ. ಡ್ರಗ್ ಫೆಡ್ಲರ್​ಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಮನಸೋ ಇಚ್ಛೆ ಥಳಿಸಿ ಹಲ್ಲೆ ಮಾಡಿದ ಪಿಎಸ್ಐ

ಕಳೆದ ಭಾನುವಾರ ಒಂದನೇ ಸುತ್ತಿನ ಜಾಗೃತಿ ಕಾರ್ಯಗಾರ ಮಾಡಲಾಗಿದ್ದು, ಇಂದು ಹುಬ್ಬಳ್ಳಿಯ ಆರ್​ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಎರಡನೇ ಸುತ್ತಿನ ಜಾಗೃತಿ ಕಾರ್ಯಗಾರ ಮಾಡಲಾಗಿದೆ. ಪಾಸಿಟಿವ್ ಬಂದ ವ್ಯಸನಿಗಳಿಗೆ ಮತ್ತು ಪೋಷಕರಿಗೂ ಪೊಲೀಸರಿಂದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮಾದಕ ವಸ್ತುಗಳ ವ್ಯಸನದಿಂದ ಹೊರ ಬರಲು ಸಲಹೆ ನೀಡಲಾಗಿದೆ. ಮಕ್ಕಳ ನಡತೆಯಿಂದ ಬೇಸತ್ತ ಪೋಷಕರು ಕಮಿಷನರ್ ಮುಂದೆ ಕಣ್ಣೀರು ಹಾಕಿದ್ದಾರೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಬಸವರಾಜ ಹೊಸೂರ (47) ಆತ್ಮಹತ್ಯೆ ಮಾಡಿಕೊಂಡ ಕೈದಿ. ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಜೋಡಿ ಕೊಲೆ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.

ಅನಾರೋಗ್ಯ ಹಿನ್ನೆಲೆ ಭಾರತೀಯ ಯೋಧ ರಾಜಸ್ಥಾನದಲ್ಲಿ ಸಾವು

ಬಾಗಲಕೋಟೆ: ಅನಾರೋಗ್ಯದಿಂದ ಬಾಗಲಕೋಟೆ ಜಿಲ್ಲೆಯ ಯೋಧ ರಾಜಸ್ಥಾನದ ಜೋಧ್‌ಪುರ್ ಬೆಟಾಲಿಯನ್​ನಲ್ಲಿ  ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಉಸಿರಾಟ ಸಮಸ್ಯೆಯಿಂದ ಹನುಮಂತ ತಳವಾರ(32) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪಿಎಸ್​ಐ ಮನೆಯಲ್ಲೇ ದರೋಡೆ, ಎಫ್​ಐಆರ್​ ದಾಖಲು: ಅನುಮಾನ ಹುಟ್ಟಿಸಿದ ಪೊಲೀಸರ ನಡೆ

ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದ ನಿವಾಸಿ. 2011ರಲ್ಲಿ ಸೇನೆಗೆ ಸೇರ್ಪಡೆ ಆಗಿದ್ದರು. ನಾಳೆ ಸಂಜೆ ವೇಳೆಗೆ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ