ವರದಕ್ಷಿಣೆ ಕಾಟ; ಕಾರು, ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪತಿ ಪಟ್ಟು

SSLC ಓದಿ, MBA ಓದಿದ್ದೇನೆ, ನನಗೆ MG ರೋಡ್ ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸವಿದೆ ಎಂದು ನಂಬಿಸಿ ನೆಲಮಂಗಲದ ಯುವತಿಯನ್ನು ಕಳೆದ 2023 ಡಿಸೆಂಬರ್​ 14 ರಂದು ವರ್ತೂರಿನ ಕಿರಣ್ ಎಂಬಾತ ವಿವಾಹವಾಗಿದ್ದನು. ಆದರೆ, ಮದುವೆಯಾಗಿ ಒಂದು ವರ್ಷದೊಳಗೆ ಈ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತಿರಾಯ ವರದಕ್ಷಿಣೆ ಕಿರುಕುಳ ಕೊಡಲು ಶುರುಮಾಡಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ವರದಕ್ಷಿಣೆ ಕಾಟ; ಕಾರು, ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪತಿ ಪಟ್ಟು
ವರದಕ್ಷಿಣೆ ಕಿರುಕುಳ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 04, 2024 | 9:06 PM

ಬೆಂಗಳೂರು, ಆ.04: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಚಿನ್ನಾಭರಣ, ನಗದು ಕೊಟ್ಟು ಅದ್ದೂರಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಇದೀಗ ಮದುವೆಯಾದ ಕೇವಲ ಒಂದು ವರ್ಷದೊಳಗೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಮತ್ತೆ ಪತಿರಾಯ ವರದಕ್ಷಿಣೆ ಕಾಟ ಕೊಡಲು ಶುರುಮಾಡಿದ್ದಾನೆ. ಈ ಹಿನ್ನಲೆ ನೊಂದ ನೆಲಮಂಗಲದ 24 ವರ್ಷದ ವಧು ಬೆಂಗಳೂರಿನ ವರ್ತೂರಿನ ಪತಿ ಕಿರಣ್ ಸೇರಿದಂತೆ ಮನೆಯವರ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾರೆ.

ಕಾರು, ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪಟ್ಟು

ಕಳೆದ 2023 ಡಿಸೆಂಬರ್​ 14 ರಂದು ವರ್ತೂರಿನ ಕಿರಣ್ ಜೊತೆ ಹಸೆಮಣೆ ಏರಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ವರದಕ್ಷಿಣೆ ಆಸೆ ಅತಿಯಾಗಿದೆ. ಈ ಹಿನ್ನಲೆ ಕೈ ಹಿಡಿದ ಪತ್ನಿಗೆ ಕಾರು, ಮತ್ತಷ್ಟು ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡು ರೂಂನಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ.

ಇದನ್ನೂ ಓದಿ:19ನೇ ವಯಸ್ಸಿಗೆ ಮದುವೆ 23ಕ್ಕೆ ಗರ್ಭಿಣಿ; ವರದಕ್ಷಿಣೆಗಾಗಿ ಕೈ ಕಾಲು ಕತ್ತರಿಸಿ ಗರ್ಭಿಣಿಯ ಬರ್ಬರ ಹತ್ಯೆ

MBA ಓದಿ, MG ರೋಡ್​ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಎಂದು ನಂಬಿಸಿದ್ದ ಆಸಾಮಿ

ವರದಕ್ಷಿಣೆ ತಂದುಕೊಟ್ಟರೆ ನಾನು ಪ್ರಸ್ಥ ಕಾರ್ಯವನ್ನು ಮಾಡಿಕೊಳ್ಳುತ್ತೇನೆ, ಇಲ್ಲವಾದಲ್ಲಿ ನಾನು ಮತ್ತೊಂದು ಮದುವೆಯನ್ನು ಮಾಡಿಕೊಳ್ಳುತ್ತೆನೆ ಎಂದು ಪತಿ ಕಿರಣ್ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ, ತವರು ಮನೆಗೆ ಹೊರಟು ಹೋಗುವಂತೆ ಬೈದು ದೈಹಿಕವಾಗಿ ಹಿಂಸೆ ನೀಡಿದ್ದ. ಇನ್ನು ಇತ SSLC ಓದಿ, MBA ಓದಿದ್ದೇನೆ, ನನಗೆ MG ರೋಡ್ ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸವಿದೆ ಎಂದು ನಂಬಿಸಿದ್ದರಂತೆ.

ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ದಾಖಲು

ಇನ್ನು ನನಗೆ ಆಗಿರುವ ಅನ್ಯಾಯಕ್ಕೆ ಮಹಿಳಾ ಆಯೋಗದಲ್ಲಿ ದೂರು ಕೊಟ್ಟರೂ ಕೌನ್ಸಿಲ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆ ಪತಿ ಕಿರಣ್, ಮಾವ ಸೀನಾಪ್ಪ, ಅತ್ತೆ ಶಶಿಕಲಾ, ಸಂಬಂಧಿ ಮನೋಜೆ ವಿರುದ್ಧ ನವ ವಿವಾಹಿತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನೆಲಮಂಗಲ ಟೌನ್ ಠಾಣೆಯಲ್ಲಿ ಕಲಂ 342.498(ಎ),506 ಐಪಿಸಿ,ಜೊತೆಗೆ 3 ಮತ್ತು 4 ಡಿಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Sun, 4 August 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್