AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದವಿ, ಸ್ನಾತಕೋತ್ತರ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸಿದ್ಧರಾಗಿ: ಜ.15ರಿಂದ ಆಫ್​ಲೈನ್ ಕ್ಲಾಸ್​

ಇಷ್ಟುದಿನ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್​, ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಆಫ್​ಲೈನ್ ಕ್ಲಾಸ್​ಗಳು ನಡೆಯುತ್ತಿದ್ದವು. ಇದೀಗ ಎಲ್ಲ ವಿದ್ಯಾರ್ಥಿಗಳೂ ಕಾಲೇಜಿಗೆ ಹೋಗಲು ಸಿದ್ಧರಾಗಬೇಕಿದೆ.

ಪದವಿ, ಸ್ನಾತಕೋತ್ತರ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸಿದ್ಧರಾಗಿ: ಜ.15ರಿಂದ ಆಫ್​ಲೈನ್ ಕ್ಲಾಸ್​
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ
Lakshmi Hegde
| Edited By: |

Updated on: Jan 11, 2021 | 3:31 PM

Share

ಬೆಂಗಳೂರು: ಕೊವಿಡ್​ ಕಾರಣದಿಂದ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕಗಳು ನಿಧಾನವಾಗಿ ಪ್ರಾರಂಭವಾಗಿದೆ. ಈಗಾಗಲೇ 10-12ನೇ ತರಗತಿವರೆಗೆ ಆಫ್​ಲೈನ್​ ಕ್ಲಾಸ್​ಗಳು ಶುರುವಾಗಿದ್ದು, ವಿದ್ಯಾಗಮವೂ ಮರು ಆರಂಭಗೊಂಡಿದೆ.

ಹಾಗೇ ಜನವರಿ 15ರಿಂದ ಪದವಿ ಮತ್ತು ಸ್ನಾತಕೋತ್ತರ ಮೊದಲ-ದ್ವೀತೀಯ ವರ್ಷದ ವಿದ್ಯಾರ್ಥಿಗಳಿಗೂ ಆಫ್​ಲೈನ್​ ಕ್ಲಾಸ್​ ಶುರುವಾಗಲಿದೆ. ಈ ಬಗ್ಗೆ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್​ ಮಾಹಿತಿ ನೀಡಿದ್ದಾರೆ. ಎಂಜಿನಿಯರಿಂಗ್​, ಡಿಪ್ಲೋಮಾ ತರಗತಿಗಳೂ ಪ್ರಾರಂಭಗೊಳ್ಳಲಿವೆ. ಇಷ್ಟುದಿನ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್​, ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಆಫ್​ಲೈನ್ ಕ್ಲಾಸ್​ಗಳು ನಡೆಯುತ್ತಿದ್ದವು. ಇದೀಗ ಎಲ್ಲ ವಿದ್ಯಾರ್ಥಿಗಳೂ ಕಾಲೇಜಿಗೆ ಹೋಗಲು ಸಿದ್ಧರಾಗಬೇಕಿದೆ.

ಸಚಿವ ಸ್ಥಾನ ಸಿಗದೇ ಇದ್ದರೂ ಪರವಾಗಿಲ್ಲ, ರಾಜ್ಯದ ಅಭಿವೃದ್ಧಿಯೇ ನನ್ನ ಕನಸು ಎಂದ ಯತ್ನಾಳ್