ಶತಕದ ಸನಿಹದಲ್ಲಿದ್ದ ದಂಪತಿ ಸಾವಿನಲ್ಲೂ ಒಂದಾದ್ರು!

ಕೋಲಾರ: ಪತ್ನಿ ಸಾವಿನ ಬಳಿಕ ಕೆಲವೇ ಗಂಟೆಗಳಲ್ಲಿ ಪತಿಯೂ ಸಾವನ್ನಪ್ಪಿರುವ ಅಪರೂಪದ ಘಟನೆ ಮುಳಬಾಗಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನಡೆದಿದೆ.  ಮುನಿಯಮ್ಮ(85) ಮತ್ತು ವೆಂಕಟೇಶಪ್ಪ(95) ಮೃತ ದಂಪತಿ. ಮುನಿಯಮ್ಮ ಮತ್ತು ವೆಂಕಟೇಶಪ್ಪ ತಮ್ಮ ಮಕ್ಕಳ ಮನೆಯಲ್ಲಿ ವಾಸವಾಗಿದ್ದರು. ಮುನಿಯಮ್ಮ ತಮ್ಮ ಕೊನೇ ಮಗ ಚಿಕ್ಕಬೀರಪ್ಪ ಮನೆಯಲ್ಲಿದ್ದರೆ, ವೆಂಕಟೇಶಪ್ಪ ಮೊದಲ ಮಗ ನಾಗಪ್ಪ ಅವರ ಮನೆಯಲ್ಲಿ ವಾಸವಾಗಿದ್ದರು. ಸಾವಿನಲ್ಲೂ ಒಂದಾದ ದಂಪತಿ:  ಆದ್ರೆ ಇದ್ದಕ್ಕಿದ್ದಂತೆ ಶುಕ್ರವಾರ ಬೆಳಗಿನ ಜಾವ ಏಕಾಏಕಿ ತಮ್ಮನ್ನು ಮುನಿಯಮ್ಮ ಬಳಿಗೆ ಕರೆದುಕೊಂಡು ಹೋಗಲು ವೆಂಕಟೇಶಪ್ಪ ತಿಳಿಸಿದ್ದಾರೆ. […]

ಶತಕದ ಸನಿಹದಲ್ಲಿದ್ದ ದಂಪತಿ ಸಾವಿನಲ್ಲೂ ಒಂದಾದ್ರು!
ಸಾಧು ಶ್ರೀನಾಥ್​

Updated on: Dec 01, 2019 | 7:48 AM

ಕೋಲಾರ: ಪತ್ನಿ ಸಾವಿನ ಬಳಿಕ ಕೆಲವೇ ಗಂಟೆಗಳಲ್ಲಿ ಪತಿಯೂ ಸಾವನ್ನಪ್ಪಿರುವ ಅಪರೂಪದ ಘಟನೆ ಮುಳಬಾಗಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನಡೆದಿದೆ.  ಮುನಿಯಮ್ಮ(85) ಮತ್ತು ವೆಂಕಟೇಶಪ್ಪ(95) ಮೃತ ದಂಪತಿ.

ಮುನಿಯಮ್ಮ ಮತ್ತು ವೆಂಕಟೇಶಪ್ಪ ತಮ್ಮ ಮಕ್ಕಳ ಮನೆಯಲ್ಲಿ ವಾಸವಾಗಿದ್ದರು. ಮುನಿಯಮ್ಮ ತಮ್ಮ ಕೊನೇ ಮಗ ಚಿಕ್ಕಬೀರಪ್ಪ ಮನೆಯಲ್ಲಿದ್ದರೆ, ವೆಂಕಟೇಶಪ್ಪ ಮೊದಲ ಮಗ ನಾಗಪ್ಪ ಅವರ ಮನೆಯಲ್ಲಿ ವಾಸವಾಗಿದ್ದರು.

ಸಾವಿನಲ್ಲೂ ಒಂದಾದ ದಂಪತಿ: 
ಆದ್ರೆ ಇದ್ದಕ್ಕಿದ್ದಂತೆ ಶುಕ್ರವಾರ ಬೆಳಗಿನ ಜಾವ ಏಕಾಏಕಿ ತಮ್ಮನ್ನು ಮುನಿಯಮ್ಮ ಬಳಿಗೆ ಕರೆದುಕೊಂಡು ಹೋಗಲು ವೆಂಕಟೇಶಪ್ಪ ತಿಳಿಸಿದ್ದಾರೆ. ಇನ್ನು ವೆಂಕಟೇಶಪ್ಪ ಬಂದ ಕೆಲವೇ ಗಂಟೆಗಳಲ್ಲಿ ಮುನಿಯಮ್ಮ ಸಾವನ್ನಪ್ಪಿದ್ದಾರೆ. ಪತ್ನಿ ಸಾವಿನ ಆಘಾತದಿಂದ ಹೊರಬರದ ಪತಿ ವೆಂಕಟೇಶಪ್ಪ ಸಹ ಪತ್ನಿ ಶವದ ಬಳಿಯೇ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪಾತಿ ಒಂದಾಗಿದ್ದಾರೆ.

ಈ ವೃದ್ಧ ದಂಪತಿ ಮೊದಲಿನಿಂದಲೂ ಒಟ್ಟಿಗೆ ಸಾಯುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ವಿಜಯಪುರದ ಬಬಲೇಶ್ವರ ಪಟ್ಟಣದಲ್ಲೂ ಇಂತಹದೊಂದ ಘಟನೆ ನಡೆದಿತ್ತು.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us