ಸಾರಿಗೆ ಬಸ್, ಟಂಟಂ ಮಧ್ಯೆ ಡಿಕ್ಕಿ: ಒಬ್ಬ ಸ್ಥಳದಲ್ಲೇ ಸಾವು
ಸಾರಿಗೆ ಬಸ್, ಟಂಟಂ ಮಧ್ಯೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಬಳಿ ಸಂಭವಿಸಿದೆ. 60 ವರ್ಷದ ಶರಣಪ್ಪ ಮಾಲಿ ಪಾಟೀಲ್ ಮೃತ ದುರ್ದೈವಿ.

ಅಪಘಾತದ ಭೀಕರ ದೃಶ್ಯಗಳು
ಕಲಬುರಗಿ: ಸಾರಿಗೆ ಬಸ್, ಟಂಟಂ ಮಧ್ಯೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಬಳಿ ಸಂಭವಿಸಿದೆ. 60 ವರ್ಷದ ಶರಣಪ್ಪ ಮಾಲಿ ಪಾಟೀಲ್ ಮೃತ ದುರ್ದೈವಿ.
ಮೃತ ವ್ಯಕ್ತಿ ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಇನ್ನು, ಘಟನೆಯಲ್ಲಿ 8 ಜನರಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟಂಟಂ ಡೋಣಗಾಂವದಿಂದ ನರಬೋಳಿಗೆ ಹೊರಟಿದ್ದು ಇತ್ತ ಸಾರಿಗೆ ಬಸ್ ಜೇವರ್ಗಿಯಿಂದ ಚಿತ್ತಾಪುರದತ್ತ ಹೊರಟಿತ್ತು ಎಂದು ಹೇಳಲಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಗೆ ಹೊರಟ್ಟಿದ್ದ ಮಿನಿ ಬಸ್ ಪಲ್ಟಿ: ಪ್ರಯಾಣಿಕ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ
Published On - 2:34 pm, Fri, 18 December 20