ಕುಣಿದು ಕುಪ್ಪಳಿಸಿ ಹೊಸ ವರ್ಷ ಬರ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೀರಾ.. ವಿಶೇಷ ಆಚರಣೆಗೆ BBMP ಬ್ರೇಕ್
ಕೊರೊನಾ ವೈರಸ್ನಿಂದಾಗಿ 2020-21ರ ನ್ಯೂ ಇಯರ್ ಸ್ಪೆಷಲ್ ಸೆಲೆಬ್ರೇಷನ್ ಬ್ಯಾನ್ ಮಾಡುವಂತೆ ಬಿಬಿಎಂಪಿ ತೀರ್ಮಾನಿಸಿದೆ.

ಬೆಂಗಳೂರು: ಇನ್ನೇನು ನ್ಯೂ ಇಯರ್ ಬಂದೇ ಬಿಡ್ತು. ಆದರೆ, ಕೊರೊನಾ ಮಹಾಮಾರಿಯ ಆರ್ಭಟ ಮಾತ್ರ ಕಡಿಮೆ ಆಗಿಲ್ಲ. ಈ ನಿಟ್ಟಿನಲ್ಲಿ ನ್ಯೂ ಇಯರ್ ಸ್ಪೆಷಲ್ ಸೆಲೆಬ್ರೇಷನ್ನನ್ನು ಬ್ಯಾನ್ ಮಾಡುವಂತೆ ಬಿಬಿಎಂಪಿ ತೀರ್ಮಾನಿಸಿದೆ.
ಈ ಬಾರಿಯ ಹೊಸ ವರ್ಷದಲ್ಲಿ ಪಬ್ಗಳಲ್ಲಿ ಗುಂಪು, ಗುಂಪಾಗಿ ಡ್ಯಾನ್ಸ್ ಮಾಡುವುದನ್ನು ಬ್ಯಾನ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ರೂಲ್ಸ್ಗೆ ತಕ್ಕಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಹೆಚ್ಚಿನ ಜನ ಸೇರಿಸದೆ ಪಾರ್ಟಿ ನಡೆಸಲು ತಯಾರಿ ನಡೆಸಲಾಗಿದೆ.
ಪಬ್ಗಳಲ್ಲಿ ಮೊದಲ ಆದ್ಯತೆ ಕಪಲ್ಸ್ಗಳಿಗೆ ಎಂದು ತೀರ್ಮಾನಿಸಲಾಗಿದ್ದು, ಒಂದು ಟೇಬಲ್ನಿಂದ ಮತ್ತೊಂದು ಟೇಬಲ್ಗೆ ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಲಾಗುತ್ತೆ. ನಿಂತು ಡ್ಯಾನ್ಸ್ ಮಾಡಲು ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗುಂಪುಕಟ್ಟಿ ಡ್ಯಾನ್ಸ್ ಮಾಡುವುದು ಮತ್ತು ಡಿಜೆಗಳನ್ನು ಆಯೋಜನೆ ಮಾಡದಿರಲು ಪಬ್ಗಳು ತೀರ್ಮಾನಿಸಿವೆ.
ನಿಮ್ಗೆ ನ್ಯೂ ಇಯರ್ ಸೆಲೆಬ್ರೇಷನ್, ಆದ್ರೆ ಪೊಲೀಸರಿಗೆ 2 ಪಾಳಿಯಲ್ಲಿ ಡ್ಯೂಟಿ!
Published On - 3:04 pm, Fri, 18 December 20



