ಹಾವೇರಿ: ರೋಡ್ ಡಿವೈಡರ್​ಗೆ ಫಾರ್ಚ್ಯೂನರ್ ಡಿಕ್ಕಿ, ಬೆಂಗಳೂರಿನತ್ತ ಹೊರಟವ ತಲುಪಿದ್ದು ಮಾತ್ರ ಮಸಣಕ್ಕೆ..

  • KUSHAL V
  • Published On - 11:17 AM, 28 Nov 2020
ಹಾವೇರಿ: ರೋಡ್ ಡಿವೈಡರ್​ಗೆ ಫಾರ್ಚ್ಯೂನರ್ ಡಿಕ್ಕಿ, ಬೆಂಗಳೂರಿನತ್ತ ಹೊರಟವ ತಲುಪಿದ್ದು ಮಾತ್ರ ಮಸಣಕ್ಕೆ..
ಅಪಘಾತಕ್ಕೆ ಈಡಾದ ಫಾರ್ಚ್ಯೂನರ್ ಕಾರ್​

ಹಾವೇರಿ: ರೋಡ್ ಡಿವೈಡರ್​ಗೆ ಫಾರ್ಚ್ಯೂನರ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರೋ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ. ಅವಘಡದಲ್ಲಿ ವಾಹನದಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿವೆ.

ಘಟನೆಯಲ್ಲಿ ಬೆಂಗಳೂರು ಮೂಲದ ನದೀಮ್ (39) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಾಳುಗಳಾದ ಮಂಜುನಾಥ (31) ಮತ್ತು ಸುನೀಲರನ್ನು (30) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದವರು ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿನತ್ತ ತೆರಳುತ್ತದ್ದರು ಎಂದು ತಿಳಿದುಬಂದಿದೆ.