ಸಾರಿಗೆ ನೌಕರರನ್ನು ಎದುರು ಹಾಕಿಕೊಂಡವರು ಈವರೆಗೂ ಉಳಿದಿಲ್ಲ: ಐಎನ್​ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ

Karnataka Bus Strike: ಯುಗಾದಿ ಹಬ್ಬದ ಒಳಗೆ ಸಮಸ್ಯೆ ಇತ್ಯರ್ಥ ಮಾಡಬೇಕು . ಇಲ್ಲದಿದ್ದರೆ ಮುಷ್ಕರ ಅನಿರ್ದಿಷ್ಟಾವಧಿವರೆಗೆ ಮುಂದುವರಿಸುತ್ತೇವೆ. ನಾಳೆ ಸಾರಿಗೆ ನೌಕರರ ಕುಟುಂಬದವರು ವಿಭಿನ್ನ ಚಳವಳಿ ನಡೆಸಲಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ನೌಕರರನ್ನು ಎದುರು ಹಾಕಿಕೊಂಡವರು ಈವರೆಗೂ ಉಳಿದಿಲ್ಲ: ಐಎನ್​ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ
ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್​ಗಳು
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 11, 2021 | 7:37 PM

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ಈ ಮುಷ್ಕರಕ್ಕೆ ನೀವೇ ಜವಾಬ್ಧಾರರಾಗುತ್ತೀರಿ. ಸರ್ಕಾರ ಎಸ್ಮಾ ಜಾರಿ ಮಾಡಿದರೆ ಮಾಡಲಿ. ಮುಷ್ಕರಕ್ಕೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೆಂಬಲ ಸಿಕ್ಕಿದೆ. ಸಾರಿಗೆ ನಿಗಮಗಳ ನೌಕರರೇ ಹೆದರಬೇಡಿ, ಸಾರಿಗೆ ನೌಕರರನ್ನು ಎದುರು ಹಾಕಿಕೊಂಡವರು ಈವರೆಗೂ ಉಳಿದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ ಎಚ್ಚರಿಕೆ ನೀಡಿದರು. ಅವರು ಸಾರಿಗೆ ನೌಕರರ ಸಭೆ ಮುಕ್ತಾಯಗೊಂಡ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಂಧ್ರದಲ್ಲಿ, ತೆಲಂಗಾಣದಲ್ಲಿ ಮಾಡಿದ್ದಾರೆ. ಅಲ್ಲಿ ಮಾಡಿದ ಮೇಲೆ ನೀವ್ಯಾಕೆ ಮಾಡೋಕೆ ಆಗ್ತಿಲ್ಲ. ಅವರು ಮಾಡಿಲ್ಲ ಅಂದ್ರೆ ನಾವು ಕೇಳ್ತಾ ಇರ್ಲಿಲ್ಲ. 6ನೇ ವೇತನಶ್ರೇಣಿ ಕೊಡ್ತೀವಿ ಅಂತ ಸರ್ಕಾರವೇ ಒಪ್ಪಿಕೊಂಡಿತ್ತು. ಆದರೆ ಈಗ ಕೊಡ್ತಿಲ್ಲ. ಸಂಬಳ ಕೊಡದೇ ಕಿರುಕುಳ ಕೊಡ್ತಿದ್ದೀರಿ. ಸಾರಿಗೆ ನಿಗಮಗಳ ನೌಕರರ ಕುಟುಂಬಗಳು ಸಂಕಷ್ಟದಲ್ಲಿವೆ. ಸಾರಿಗೆ ಸಂಸ್ಥೆ ಕಾರ್ಮಿಕರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಎಸ್ಮಾ ತಂದ್ರೆ ಅವರೇ ಭಸ್ಮವಾಗ್ತಾರೆ ಎಂದು ಸಾರಿಗೆ ನಿಗಮದ ಐಎನ್​ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ ಎಚ್ಚರಿಸಿದರು.

‘ನೌಕರರ ಕಷ್ಟ ನಿಮಗೆ ಗೊತ್ತಾಗ್ತಿಲ್ಲ ಮಿಸ್ಟರ್ ಸವದಿ ಅವರೇ..’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೇಲೆ ಹರಿಹಾಯ್ದ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಯುಗಾದಿ ಹಬ್ಬದ ಒಳಗೆ ಸಮಸ್ಯೆ ಇತ್ಯರ್ಥ ಮಾಡಬೇಕು . ಇಲ್ಲದಿದ್ದರೆ ಮುಷ್ಕರ ಅನಿರ್ದಿಷ್ಟಾವಧಿವರೆಗೆ ಮುಂದುವರಿಸುತ್ತೇವೆ. ನಾಳೆ ಸಾರಿಗೆ ನೌಕರರ ಕುಟುಂಬದವರು ವಿಭಿನ್ನ ಚಳವಳಿ ನಡೆಸಲಿದ್ದಾರೆ ಎಂದು ಆಗ್ರಹಿಸಿದರು.

ನಾಳೆಯಿಂದ ಇವತ್ತು ಓಡಿರುವಷ್ಟೂ ಬಸ್​ಗಳು ಓಡಲ್ಲ. ಸರ್ಕಾರ ಒತ್ತಾಯದಿಂದ ಕಾರ್ಮಿಕರನ್ನು ಕೆಲಸಕ್ಕೆ ಕರೆಸಿಕೊಳ್ಳುತ್ತಿದೆ. ನಾವು ಎಲ್ಲೂ ಬಸ್​ಗಳಿಗೆ ಕಲ್ಲು ಹೊಡೆದಿಲ್ಲ, ಬೆಂಕಿ ಹಚ್ಚಿಲ್ಲ. ನಾವು ಗೌರವಯುತವಾಗಿ ಮುಖ್ಯಮಂತ್ರಿಯನ್ನ ಕೇಳುತ್ತೇವೆ. ನಾವು ಎಲ್ಲೂ ಬಸ್​ಗಳಿಗೆ ಕಲ್ಲು ಹೊಡೆದಿಲ್ಲ, ಬೆಂಕಿ ಹಚ್ಚಿಲ್ಲ. ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿಯೇ ಇದ್ದೇವೆ. ಸರ್ಕಾರ ಇದಕ್ಕೆಲ್ಲ ಪರಿಹಾರವನ್ನು ನೀಡಲೇ ಬೇಕು. ಮುಷ್ಕರ ಅಂತ್ಯ ಮಾಡುವುದು ಸರ್ಕಾರದ ಕೈಯಲ್ಲಿದೆ ಎಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟ ಮಾತು ಜಾರಿ ಮಾಡದೇ ಸರ್ಕಾರ ತಪ್ಪು ಮಾಡುತ್ತಿದೆ. ಮಾರ್ಚ್​​​ 16ರಂದು ಸರ್ಕಾರಕ್ಕೆ ನೋಟಿಸ್​ ಕೊಟ್ಟಿದ್ದೆವು. ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶವನ್ನೂ ಕೊಟ್ಟಿದ್ದೇವೆ. ಸರ್ಕಾರದ ಮಾತುಕತೆಗಳು ವಿಫಲವಾದಾಗ ಚಳುವಳಿಗಳು ಆರಂಭವಾಗಿವೆ. ಸಿಎಂ ಯಡಿಯೂರಪ್ಪ ಅಥವಾ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನಮ್ಮನ್ನು ಚರ್ಚೆಗೆ ಕರೆದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಟೀಕಿಸಿದರು.

ಇದನ್ನೂ ಓದಿ: ನಾಳೆಯಿಂದ ಎಂದಿನಂತೆ ಬಸ್​ಗಳು ಸಂಚರಿಸಲಿವೆ: ಕೆಎಸ್‌ಆರ್‌ಟಿಸಿ ಮುಖ್ಯ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ವಿಶ್ವಾಸ

KSRTC BMTC Strike: ನಾಳೆಯೂ ಮುಂದುವರಿಯಲಿದೆ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್

(One who oppose transport workers who did not survive says INTUC secretary Bore shetty)

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್