ಈರುಳ್ಳಿಗೆ ದರ ಏರಿಕೆ ಪೆಟ್ಟು; ಮನೆಗಳಲ್ಲಿ ಈರುಳ್ಳಿ ಹಚ್ಚಲು ಗೃಹಿಣಿಯರು ಹಿಂದೇಟು!

ಅತಿಹೆಚ್ಚು ಈರುಳ್ಳಿ ಬೆಳೆಯುವ ಕರ್ನಾಟಕದಲ್ಲೇ ಈರುಳ್ಳಿ ದುಬಾರಿಯಾಗಿದೆ. ಕೆಜಿಗೆ 40 ರಿಂದ 50 ರೂಪಾಯಿ ಇದ್ದ ಈರುಳ್ಳಿ ರೇಟ್ ಈಗ 100 -130 ರೂಪಾಯಿಗೆ ಏರಿಕೆಯಾಗಿದೆ. ಕೆಲವು ಭಾಗಗಳಲ್ಲಿ ಹೆಚ್ಚು ಮಳೆಯಾಗಿ ಈರುಳ್ಳಿ ಬೆಳೆ ಕೊಚ್ಚಿ ಹೋಗಿವೆ. ಮತ್ತೆ ಕೆಲವು ಕಡೆ ಕಡಿಮೆ ಮಳೆಯಾಗಿ ಈರುಳ್ಳಿ ಬೆಳೆ ಸರಿಯಾಗಿ ಬೆಳೆದಿಲ್ಲ.

ಈರುಳ್ಳಿಗೆ ದರ ಏರಿಕೆ ಪೆಟ್ಟು; ಮನೆಗಳಲ್ಲಿ ಈರುಳ್ಳಿ ಹಚ್ಚಲು ಗೃಹಿಣಿಯರು ಹಿಂದೇಟು!
ಸಾಧು ಶ್ರೀನಾಥ್​ Edited By:

Updated on: Oct 09, 2026 | 10:54 PM

ಬೆಂಗಳೂರು: ಈರುಳ್ಳಿ ದರ ದಿನೇ ದಿನೇ ಗಗನಕ್ಕೇರುತ್ತಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಏರುತ್ತಿರುವ ಈರುಳ್ಳಿ ರೇಟ್ ಕೇಳಿ ಜನ ಪುಲ್ ಶಾಕ್‌ ಆಗ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ವರ್ಷ ಉಂಟಾದ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆಹಾನಿಯಾಗಿದೆ. ಈರುಳ್ಳಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಆಗಿದೆ ಈ ಹಿನ್ನೆಲೆ ಬೆಲೆ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೊತೆ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ.

ಅತೀ ವೃಷ್ಠಿ, ಅನಾವೃಷ್ಠಿಯಿದಾಗಿ ಹೀಗೆಲ್ಲ..
ಅತಿಹೆಚ್ಚು ಈರುಳ್ಳಿ ಬೆಳೆಯುವ ಕರ್ನಾಟಕದಲ್ಲೇ ಈರುಳ್ಳಿ ದುಬಾರಿಯಾಗಿದೆ. ಕೆಜಿಗೆ 40 ರಿಂದ 50 ರೂಪಾಯಿ ಇದ್ದ ಈರುಳ್ಳಿ ರೇಟ್ ಈಗ 100 -130 ರೂಪಾಯಿಗೆ ಏರಿಕೆಯಾಗಿದೆ. ಕೆಲವು ಭಾಗಗಳಲ್ಲಿ ಹೆಚ್ಚು ಮಳೆಯಾಗಿ ಈರುಳ್ಳಿ ಬೆಳೆ ಕೊಚ್ಚಿ ಹೋಗಿವೆ. ಮತ್ತೆ ಕೆಲವು ಕಡೆ ಕಡಿಮೆ ಮಳೆಯಾಗಿ ಈರುಳ್ಳಿ ಬೆಳೆ ಸರಿಯಾಗಿ ಬೆಳೆದಿಲ್ಲ.

ನೆರೆ ಮತ್ತು ಹೆಚ್ಚಿನ ಮಳೆಯಿಂದ ಈರುಳ್ಳಿ ಸಮಸ್ಯೆ ಹೆಚ್ಚಾಗಿದೆ. ಕರ್ನಾಟಕದ ಹೊಸ ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಇನ್ನೂ ಡಿಸೆಂಬರ್ ಕೊನೆಯ ವರೆಗೂ ಈರುಳ್ಳಿ ಬೆಲೆ ಇದೇ ರೀತಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. ಈರುಳ್ಳಿ ಖರೀದಿಸಲು ಚಿಂತಿಸುವಂತಾಗಿದೆ.

ದರದರ ಏರಿದೆ ಈರುಳ್ಳಿ ದರ! ಹಾಗಾಗಿ ಈರುಳ್ಳಿ ಹಚ್ಚಲು ಗೃಹಿಣಿಯರು ಹಿಂದೆಮುಂದೆ ನೋಡುತ್ತಿದ್ದಾರೆ. ಹೆಚ್ಚು ಬೆಲೆ ಕೊಟ್ಟು ಈರುಳ್ಳಿ ತಿನ್ನೋದು ಬೇಡ ಎಂದು ಇದ್ದಬದ್ದ ತರಕಾರಿಗಳಲ್ಲೇ ಅಡುಗೆ ಮಾಡಿ, ತಮ್ಮ ಬದ್ಧತೆ ಮೆರೆಯುತ್ತಿದ್ದಾರೆ.

Published On - 9:37 am, Thu, 28 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us