Lockdown​ ಮುಗಿಯೋವರೆಗೂ ಆನ್​ಲೈನ್ ಶಿಕ್ಷಣ ಮುಂದುವರಿಯುತ್ತೆ -DCM ಅಶ್ವತ್ಥ್ ನಾರಾಯಣ

| Updated By:

Updated on: Jun 04, 2020 | 4:57 PM

ಬೆಂಗಳೂರು: ಆನ್​ಲೈನ್ ಶಿಕ್ಷಣ ನಮ್ಮಲ್ಲಷ್ಟೇ ಅಲ್ಲ, ದೇಶಾದ್ಯಂತ ನಡೆದಿದೆ. ಲಾಕ್​ಡೌನ್​ ಇರುವವರೆಗೂ ಆನ್​ಲೈನ್ ಶಿಕ್ಷಣ ಖಚಿತ ಎಂದು ವಿಟಿಯು ವಿದ್ಯಾರ್ಥಿಗಳಿಗೆ ಆನ್​ಲೈನ್​ ಮೂಲಕ ಶಿಕ್ಷಣ ನಡೆಸುವ ವಿಚಾರಕ್ಕೆ ಸಂಬಂಧಿಸಿ ಡಿಸಿಎಂ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಆನ್​ಲೈನ್ ಶಿಕ್ಷಣ ನಡೆದಿದೆ. ಲಾಕ್​ಡೌನ್​ ಸಡಿಲಿಕೆ ನಂತರ ಯಥಾಸ್ಥಿತಿ ಶಿಕ್ಷಣ ನಡೆಯುತ್ತೆ. ಜುಲೈನಲ್ಲಿ ಲಾಕ್​ಡೌನ್​ ಸಡಿಲಿಕೆ ಬಳಿಕ ಆಫ್​ಲೈನ್ ಕ್ಲಾಸ್​ ನಡೆಯುತ್ತೆ. ವಿದ್ಯಾರ್ಥಿಗಳ ಏಳಿಗೆಗಾಗಿ ಎಲ್ಲಾ ರೀತಿಯ ಕ್ರಮಕೈಗೊಳ್ಳುತ್ತೇವೆ. ಶಿಕ್ಷಣ ಸಂಸ್ಥೆ ತೆರೆಯಲು ಅನುಮತಿ ನೀಡಿದ ನಂತರ […]

Lockdown​ ಮುಗಿಯೋವರೆಗೂ ಆನ್​ಲೈನ್ ಶಿಕ್ಷಣ ಮುಂದುವರಿಯುತ್ತೆ -DCM ಅಶ್ವತ್ಥ್ ನಾರಾಯಣ
Follow us on

ಬೆಂಗಳೂರು: ಆನ್​ಲೈನ್ ಶಿಕ್ಷಣ ನಮ್ಮಲ್ಲಷ್ಟೇ ಅಲ್ಲ, ದೇಶಾದ್ಯಂತ ನಡೆದಿದೆ. ಲಾಕ್​ಡೌನ್​ ಇರುವವರೆಗೂ ಆನ್​ಲೈನ್ ಶಿಕ್ಷಣ ಖಚಿತ ಎಂದು ವಿಟಿಯು ವಿದ್ಯಾರ್ಥಿಗಳಿಗೆ ಆನ್​ಲೈನ್​ ಮೂಲಕ ಶಿಕ್ಷಣ ನಡೆಸುವ ವಿಚಾರಕ್ಕೆ ಸಂಬಂಧಿಸಿ ಡಿಸಿಎಂ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಕಳೆದ ಎರಡೂವರೆ ತಿಂಗಳಿಂದ ಆನ್​ಲೈನ್ ಶಿಕ್ಷಣ ನಡೆದಿದೆ. ಲಾಕ್​ಡೌನ್​ ಸಡಿಲಿಕೆ ನಂತರ ಯಥಾಸ್ಥಿತಿ ಶಿಕ್ಷಣ ನಡೆಯುತ್ತೆ. ಜುಲೈನಲ್ಲಿ ಲಾಕ್​ಡೌನ್​ ಸಡಿಲಿಕೆ ಬಳಿಕ ಆಫ್​ಲೈನ್ ಕ್ಲಾಸ್​ ನಡೆಯುತ್ತೆ. ವಿದ್ಯಾರ್ಥಿಗಳ ಏಳಿಗೆಗಾಗಿ ಎಲ್ಲಾ ರೀತಿಯ ಕ್ರಮಕೈಗೊಳ್ಳುತ್ತೇವೆ. ಶಿಕ್ಷಣ ಸಂಸ್ಥೆ ತೆರೆಯಲು ಅನುಮತಿ ನೀಡಿದ ನಂತರ ಪಾಠ ಮಾಡಲಾಗುತ್ತೆ. ಪಠ್ಯಕ್ರಮ ಮುಗಿಸಿದ ನಂತರ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.

ಪರೀಕ್ಷೆ ಬರೆಯಲು ಇಷ್ಟಪಡದಿದ್ದರೆ ಕ್ಯಾರಿಓವರ್​ ಮಾಡಬೇಕಾ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ವಿದ್ಯಾರ್ಥಿಗಳು ಎಲ್ಲಿದ್ದರೂ ಹೇಗೆ ಇದ್ದರೂ ಓದಬೇಕು. ಓದುವುದು ನಿಮ್ಮ ಕೆಲಸ, ಪರೀಕ್ಷೆಗೆ ನೀವು ಸಿದ್ಧರಾಗಬೇಕು. ಪದವಿ ವಿದ್ಯಾರ್ಥಿಗಳಿಗೆ ಶೇ.80ರಷ್ಟು ಪಠ್ಯಕ್ರಮ ಮುಗಿದಿದೆ. ಬಿಇ ವಿದ್ಯಾರ್ಥಿಗಳಿಗೆ ಶೇ.30ರಷ್ಟು ಪಠ್ಯಕ್ರಮ ಮುಗಿದಿದೆ ಎಂದು ಟಿವಿ9 ನೇರಪ್ರಸಾರ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ.

Published On - 4:35 pm, Thu, 4 June 20