ಬೆಂಗಳೂರಿನಲ್ಲಿ ಕೆಜೆ ಈರುಳ್ಳಿಗೆ ಕೇವಲ 35 ರೂ: ಕೇಂದ್ರ ಸರ್ಕಾರ ಯೋಜನೆಯಿಂದ ಗ್ರಾಹಕರು ಫುಲ್ ಖುಷ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2024 | 9:40 PM

ಈರುಳ್ಳಿ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದಿಂದ (ಎನ್‌ಸಿಸಿಫ್) ನಗರದಾದ್ಯಂತ ಮೊಬೈಲ್ ವ್ಯಾನ್‌ಗಳ ಮೂಲಕ ಗುಣಮಟ್ಟದ ಈರುಳ್ಳಿಯನ್ನು ರಿಯಾಯಿತಿ ದರದಲ್ಲಿ ಕೆ.ಜಿ.ಗೆ 35 ರೂ‌ಗೆ ಮಾರಾಟ ಮಾಡ್ತಿದ್ದಾರೆ.‌ ಇದರಿಂದ ಸಾಮಾನ್ಯ ಜನರಿಗೆ ತುಂಬ ಅನುಕೂಲವಾಗಲಿದೆ.

ಬೆಂಗಳೂರಿನಲ್ಲಿ ಕೆಜೆ ಈರುಳ್ಳಿಗೆ ಕೇವಲ 35 ರೂ: ಕೇಂದ್ರ ಸರ್ಕಾರ ಯೋಜನೆಯಿಂದ ಗ್ರಾಹಕರು ಫುಲ್ ಖುಷ್
ಬೆಂಗಳೂರಿನಲ್ಲಿ ಕೆಜೆ ಈರುಳ್ಳಿಗೆ ಕೇವಲ 35 ರೂ: ಕೇಂದ್ರ ಸರ್ಕಾರ ಯೋಜನೆಯಿಂದ ಗ್ರಾಹಕರು ಫುಲ್ ಖುಷ್
Follow us on

ಬೆಂಗಳೂರು, ಸೆಪ್ಟೆಂಬರ್​ 25: ದಿನದಿಂದ ದಿನಕ್ಕೆ ಈರುಳ್ಳಿಯ (onion) ಬೆಲೆ‌ ಏರಿಕೆಯಾಗುತ್ತಿದ್ದು, ಈರುಳ್ಳಿ‌ ಬೆಲೆ‌ ಏರಿಕೆಗೆ ಗ್ರಾಹಕರು ರೋಸಿ ಹೋಗಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ ಗುಡ್​ನ್ಯೂಸ್ ಕೊಟ್ಟಿದ್ದು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್‌ಸಿಸಿಎಫ್) ಕಡಿಮೆ ಬೆಲೆಗೆ ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.

ರಾಜ್ಯದಲ್ಲಿ‌ ಮಳೆಯಾಗುತ್ತಿರುವ ಪರಿಣಾಮ ಒಂದು ತಿಂಗಳಿನಿಂದ ಈರುಳ್ಳಿ ಬೆಲೆ ಏರಿಕೆಯಾಗಿತ್ತು. ಸದ್ಯ ಒಂದು ಕೆಜಿ ಈರುಳ್ಳಿಗೆ 60 ರಿಂದ‌ 70 ರೂಪಾಯಿ ನಿಗದಿಯಾಗಿದೆ. ಈ ಬೆಲೆ ಏರಿಕೆಯಿಂದಾಗಿ ಗ್ರಾಹಕರು ರೋಸಿ ಹೋಗಿದ್ದರು. ಇದೀಗ ಎನ್​ಸಿಸಿಎಫ್‌ನಿಂದ ಸದ್ಯ ಕಡಿಮೆ ಬೆಲೆಗೆ ಈರುಳ್ಳಿಯನ್ನು ವಿತರಣೆ ಮಾಡಾಲಾಗುತ್ತಿದ್ದು, ಸಾಕಷ್ಟು ಗ್ರಾಹಕರು ಖುಷಿಯಿಂದ ಈರುಳ್ಳಿಯನ್ನ ಖರೀದಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಈರುಳ್ಳಿ ದರ ಏರಿಕೆ ಚಿಂತೆ ಬೇಡ: ಮನೆ ಬಾಗಿಲಿಗೆ ಬರುತ್ತವೆ ಕಡಿಮೆ ಬೆಲೆಗೆ ಈರುಳ್ಳಿ ನೀಡುವ ವ್ಯಾನ್​ಗಳು!

ಹೌದು. ಕೇಂದ್ರ ಸರಕಾರವು ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎ) ಅಡಿ 550 ಉತ್ಪನ್ನಗಳನ್ನು ಗುರುತಿಸಿದ್ದು, ಯಾವ ಉತ್ಪನ್ನದ ಬೆಲೆ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತದೋ ಅಂತಹ ಉತ್ಪನ್ನವನ್ನು ಸಂಗ್ರಹಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಬೆಲೆ ಇಳಿಕೆಗೆ ಸಹಕಾರಿಯಾಗುವ ಮೂಲಕ ಗ್ರಾಹಕರಿಗೆ ಉಂಟಾಗುವ ಹೊರೆಯನ್ನು ಇಳಿಸಲಾಗುತ್ತಿದೆ.

ಅದೇ ರೀತಿ ಇದೀಗ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ದರ 70 ರೂ.ಗೆ ತಲುಪಿದೆ. ಅದರಲ್ಲಿ ಸಣ್ಣ ಗಾತ್ರದ, ಗುಣಮಟ್ಟವಲ್ಲದ ಈರುಳ್ಳಿ 40-50 ರೂ.ಗೆ ಲಭ್ಯವಾಗುತ್ತಿವೆ. ಹೀಗಾಗಿ ಮಹಾರಾಷ್ಟ್ರ, ಮಧ್ಯಪ್ರದೇಶದಿಂದ ಗುಣಮಟ್ಟದ ಈರುಳ್ಳಿಯನ್ನು ಖರೀದಿಸಿ, ದೇಶದ ಮೆಟ್ರೋ ಸಿಟಿಗಳಲ್ಲಿ ವಿತರಣೆ ಮಾಡಲು ಆರಂಭಿಸಿದೆ.

ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಿಂದ ಕೆಜಿ ಗೆ 35 ರೂ. ಯಂತೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವವರೆಗೆ ಮಾರಾಟ ಮುಂದುವರಿಯಲಿದೆ. ಪ್ರತಿದಿನವು ವಿತರಣೆ ಜಾಗವನ್ನ ಗುರುತಿಸಿ ಜನನಿಬಿಡ ಪ್ರದೇಶಗಳಲ್ಲಿ ಒಟ್ಟು 122 ಕಡೆ ವ್ಯಾಪಾರ ಮಾಡಲಾಗುತ್ತಿದ್ದು, ಬೆಲೆ ಕಡಿಮೆ ಕಡಿಮೆಯಾಗುವರೆಗೂ ಈ ವ್ಯಾಪಾರ ಮಾಡಲಾಗುತ್ತದೆಯಂತೆ. ಇನ್ನು ಬೆಳ್ಳಗ್ಗೆ 10 ಗಂಟೆಯಿಂದ‌ ಆಭಂಭವಾಗಿ ಸಂಜೆ 6 ಗಂಟೆಯವರೆಗೂ ಈರುಳ್ಳಿ ವಿತರಣೆ ಇರಲಿದ್ದು, ಮೂರು‌ ದಿನದಿಂದ‌ 18 ಟನ್​ಗೂ ಹೆಚ್ಚು ಈರುಳ್ಳಿ ಸೇಲ್‌ ಆಗಿದೆ ಎಂದು ಎನ್​ಸಿಸಿಎಫ್​ ಸಿಬ್ಬಂದಿ ಮಂಜುನಾಥ್ ಹೇಳಿದ್ದಾರೆ.

ಇದನ್ನೂ ಓದಿ: Onion Price Hike: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆ: ಉತ್ಪಾದನೆ ಭಾರಿ ಕುಸಿತ

ಈರುಳ್ಳಿ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದಿಂದ (ಎನ್‌ಸಿಸಿಫ್) ನಗರದಾದ್ಯಂತ ಮೊಬೈಲ್ ವ್ಯಾನ್‌ಗಳ ಮೂಲಕ ಗುಣಮಟ್ಟದ ಈರುಳ್ಳಿಯನ್ನು ರಿಯಾಯಿತಿ ದರದಲ್ಲಿ ಕೆ.ಜಿ.ಗೆ 35 ರೂ‌ಗೆ ಮಾರಾಟ ಮಾಡ್ತಿದ್ದಾರೆ.‌ ಇದರಿಂದ ಸಾಮಾನ್ಯ ಜನರಿಗೆ ತುಂಬ ಅನುಕೂಲವಾಗಲಿದೆ. ಇಷ್ಡು ದಿನ‌ ಮನೆಗೆ ಈರುಳ್ಳಿ ಖರೀದಿಸಬೇಕು‌ ಅಂದ್ರೇನೆ‌ ಕಣ್ಣೀರು‌ ಬರುತ್ತಿದ್ದು, ಸರ್ಕಾರದಿಂದ ಕಡಿಮೆ ಬೆಲೆಗೆ ಈರುಳ್ಳಿ ವಿತರಣೆ ಆಗುತ್ತಿರುವುದರಿಂದ‌ ತುಂಬ ಅನುಕೂಲವಾಗುತ್ತಿದೆ ಎಮದು ಗ್ರಾಹಕರಾದ ರಾಣಿ ಎಂಬುವವರು ಹೇಳುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.