ರೈತರು ಅಕ್ಷರ ಕಲಿಯದಿದ್ದರೂ ದೇಶಕ್ಕೆ ಅನ್ನ ಹಾಕುತ್ತಾರೆ; ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 08, 2020 | 5:41 PM

ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಹೇಳಿಕೆಗೆ ಅರ್ಥವಿಲ್ಲ. ಅಷ್ಟಿದ್ದರೆ ನಿರ್ಮಲಾ ಸೀತಾರಾಂ ಎಪಿಎಂಸಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಹೇಳಿದ್ದೇಕೆ? ಸಚಿವರು ಈ ಸಂದರ್ಭದಲ್ಲಿ ಅಂತಹ ಹೇಳಿಕೆ ಕೊಟ್ಟಿದ್ದೇಕೆ?

ರೈತರು ಅಕ್ಷರ ಕಲಿಯದಿದ್ದರೂ ದೇಶಕ್ಕೆ ಅನ್ನ ಹಾಕುತ್ತಾರೆ; ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕಾಂಗ್ರೆಸ್ ಪಕ್ಷ ರೈತರ ದಾರಿ ತಪ್ಪಿಸುತ್ತಿದೆ ಎಂಬ ಗೃಹಸಚಿವ ಬಸವರಾಜ ಬೊಮ್ಮಾಯಿ ಆರೊಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ರೈತರು ಅಕ್ಷರ ಕಲಿಯದಿದ್ದರೂ ದೇಶಕ್ಕೆ ಅನ್ನ ಹಾಕುತ್ತಾರೆ. ರೈತರು ತುಂಬಾ ಬುದ್ಧಿವಂತರಿದ್ದಾರೆ ಅವರನ್ನು ಯಾರೂ ದಾರಿ ತಪ್ಪಿಸಲಿಕ್ಕಾಗುವುದಿಲ್ಲ ಎಂದು ವಿಧಾನಸಭೆಯಲ್ಲಿ ತಿರುಗೇಟು ನೀಡಿದ್ದಾರೆ.

ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಹೇಳಿಕೆಗೆ ಅರ್ಥವಿಲ್ಲ. ಅಷ್ಟಿದ್ದರೆ ನಿರ್ಮಲಾ ಸೀತಾರಾಮನ್ ಎಪಿಎಂಸಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಹೇಳಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಪರಿಶೀಲಿಸುವುದಾಗಿ ಸಮಜಾಯಿಷಿ ನೀಡಿದರು.

ಕೇರಳ ಮಾದರಿಯ ವಿಧೇಯಕ ಬೇಕು
ಕೇರಳ ಮಾದರಿಯಲ್ಲಿ ರೈತರ ಪರ ವಿಧೇಯಕ ತರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕೇರಳದ ವಿಧೇಯಕವನ್ನು ಗಮನಿಸಿ. ಕರ್ನಾಟಕದ ರೈತರನ್ನು ಕಾಪಾಡಲು ಅಂಥದ್ದೇ ವಿಧೇಯಕದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಿ.8ರ ಭಾರತ್ ಬಂದ್​ಗೆ ಕಾಂಗ್ರೆಸ್ ಸಂಪೂರ್ಣ​ ಬೆಂಬಲ: ಪವನ್ ಖೇರಾ