ವಕ್ಫ್ ಬೋರ್ಡ್ ವಿವಾದ: ವಕ್ಫ್ ಆಸ್ತಿ ಕುರಿತು ಸಚಿವ ಜಮೀರ್ ಸ್ಪಷ್ಟನೆ
ವಕ್ಫ್ ಭೂಮಿಯ 17,000 ಎಕರೆ ಒತ್ತುವರಿಯಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಒಟ್ಟು 1,12,000 ಎಕರೆ ವಕ್ಫ್ ಆಸ್ತಿಯಲ್ಲಿ 23,000 ಎಕರೆ ಮಾತ್ರ ಉಳಿದಿದೆ. ಈ ಒತ್ತುವರಿಯನ್ನು ತೆರವುಗೊಳಿಸಲು ವಕ್ಫ್ ಅದಾಲತ್ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಮನಗರ, ನವೆಂಬರ್ 09: ವಕ್ಫ್ಗೆ ದಾನಿಗಳು ದಾನ ಮಾಡಿ ಒಟ್ಟು ಆಸ್ತಿ 1 ಲಕ್ಷ 12 ಸಾವಿರ ಎಕರೆ ಎಂದು ಸಚಿವ ಜಮೀರ್ ಅಹಮದ್ ಖಾನ್ (zameer ahmed Khan) ಸ್ಪಷ್ಟನೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಪ್ರಚಾರ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಅದರಲ್ಲಿ ಎಲ್ಲವೂ ಹೋಗಿ 23 ಸಾವಿರ ಎಕರೆ ಉಳಿದಿದೆ. ಆ ಪೈಕಿ 17 ಸಾವಿರ ಎಕರೆ ಒತ್ತುವರಿ ಆಗಿದೆ ಎಂದು ತಿಳಿಸಿದ್ದಾರೆ.
17 ಸಾವಿರ ಎಕರೆ ಒತ್ತುವರಿ ತೆರವಿಗೆ ವಕ್ಫ್ ಅದಾಲತ್ ಮಾಡಿದ್ದೇನೆ. ಒತ್ತುವರಿ ಆಗಿರುವ ವಕ್ಫ್ ಆಸ್ತಿ ತೆರವಿನ ಬಗ್ಗೆ 2024ರ ಲೋಕಸಭಾ ಬಿಜೆಪಿ ಪ್ರಣಾಳಿಕೆಯಲ್ಲೇ ಹೇಳಿದ್ದಾರೆ. ಇನ್ನು ಕೆಎಂಡಿಸಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರೇ, ಅದು ಅಲ್ಲಾನ ಆಸ್ತಿ. ಅದರ ಒತ್ತುವರಿ ತೆರವು ಮಾಡಬೇಕು ಅಂದಿದ್ದರು. ಹಾಗಾಗಿ ಅಲ್ಲಾನ ಬಳಿ ಹೋಗಿ ನೀವು ಉತ್ತರ ಕೊಡಬೇಕಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಸಿದ್ದರಾಮಯ್ಯನವರೇ? ಪ್ರಲ್ಹಾದ್ ಜೋಶಿ
ಯಾರು ಯಾರು ವಕ್ಫ್ ಆಸ್ತಿ ಕಬಳಿಸಿದ್ದಾರೋ ಅದನ್ನು ತೆರವು ಮಾಡಬೇಕು. ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಅವರೇ ಹೇಳಿದ್ದಾರೆ. ಯಾರ ಆಸ್ತಿಯೂ ಯಾರಿಂದಲೂ ತೆಗೆದುಕೊಳ್ಳುವುದಕ್ಕೆ ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಇನ್ನು ಇತ್ತೀಚೆಗೆ ವಕ್ಫ್ ಇಲಾಖೆ ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ ಕರ್ನಾಟಕದಲ್ಲಿ ಸುಮಾರು 47,470 ಎಕರೆ ಆಸ್ತಿ ವಕ್ಫ್ ಮಂಡಳಿಗೆ ಸೇರಿದೆ.
‘ಒಂದಿಂಚೂ ಭೂಮಿ ವಕ್ಫ್ ಪಾಲಾಗಲ್ಲ’
ವಿಜಯಪುರ ಜಿಲ್ಲೆಯಲ್ಲಿ ಒಂದಿಂಚು ಭೂಮಿ ವಕ್ಫ್ ಪಾಲಾಗಲ್ಲ ಅಂತಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ರೈತರ, ಮಠಗಳ, ಮುಸಲ್ಮಾನರ ಜಮೀನು ವಕ್ಫ್ ಪಾಲಾಗಲ್ಲ. ಸಿಎಂ ಸಹ ಇದೇ ನಿಟ್ಟಿನಲ್ಲಿ ಸ್ಪಷ್ಟ ಆದೇಶ ನೀಡಿದ್ದಾರೆ. 12,000 ಎಕರೆ ವಕ್ಫ್ ಗೆಜೆಟ್ ನೋಟಿಫಿಕೇಷನ್ ಆದ್ರೂ ಇನಾಮ್ ಹಾಗೂ ಭೂ ಸುಧಾರಣೆ ಕಾಯ್ದೆಯಲ್ಲಿವೆ. ಅದನ್ನ ಹಿಂಪಡೆಯಲ್ಲ ಎಂದು ಕಂದಾಯ ಸಚಿವರು ಹೇಳಿದ್ದಾರೆ. ಇಂಡಿ ತಹಶೀಲ್ದಾರ್ ತಪ್ಪು ಮಾಡಿದ್ದಾರೆ, ಕ್ರಮ ಆಗುತ್ತೆ ಎಂದು ಹೇಳಿದ್ದಾರೆ. ವಕ್ಫ್ ಹೋರಾಟ ಬಿಎಸ್ ಯಡಿಯೂರಪ್ಪ ವರ್ಸಸ್ ಅದರ್ಸ್ ನಾಟಕ ಮಂಡಳಿ. ಇದು ಆಂತರಿಕ ತಿಕ್ಕಾಟ, ವಕ್ಫ್ ಕಡೆ ಬಂದಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Sat, 9 November 24