ಕಂಟ್ರೋಲ್​ಗೆ ಸಿಗದ ಡೆಂಗ್ಯೂ: ಬೆಂಗಳೂರಿನಲ್ಲಿ 10 ಸಾವಿರ ಗಡಿ ದಾಟಿದ ಪ್ರಕರಣಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 23, 2024 | 3:47 PM

ಕರ್ನಾಟಕದಲ್ಲಿ ಡೆಂಗ್ಯೂ ಆರ್ಭಟಿಸುತ್ತಿದ್ದು, ಜನರ ಜೀವ ಹಿಂಡುತ್ತಿದೆ. ರಾಜ್ಯದಲ್ಲಿ ಡೆಂಗ್ಯೂ ಸೋಂಕಿತರ ಪ್ರಕರಣಗಳು 23,163 ಏರಿಕೆ ಆಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 199 ಡೆಂಗ್ಯೂ ಪ್ರಕರಣಗಳು ಪತ್ತೆ ಆಗಿದ್ದು, 1182 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು 10 ಸಾವಿರ ಗಡಿ ದಾಟಿದೆ.

ಕಂಟ್ರೋಲ್​ಗೆ ಸಿಗದ ಡೆಂಗ್ಯೂ: ಬೆಂಗಳೂರಿನಲ್ಲಿ 10 ಸಾವಿರ ಗಡಿ ದಾಟಿದ ಪ್ರಕರಣಗಳು
ಕಂಟ್ರೋಲ್​ಗೆ ಸಿಗದ ಡೆಂಗ್ಯೂ: ಬೆಂಗಳೂರಿನಲ್ಲಿ 10 ಸಾವಿರ ಗಡಿ ದಾಟಿದ ಪ್ರಕರಣಗಳು
Follow us on

ಬೆಂಗಳೂರು, ಆಗಸ್ಟ್​​ 23: ಕ್ಷಣ ಕ್ಷಣಕ್ಕೂ ಬೆಂಗಳೂರಿನ ಹವಾಮಾನ ಬದಲಾಗುತ್ತಿದೆ. ಹೀಗಾಗಿ ಸಾಕಷ್ಟು ಜನರು ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಸಿಲಿಕಾನ್​ ಸಿಟಿ ಜನರು ಫುಲ್​ ಹೈರಾಣಾಗುವುದರೊಂದಿಗೆ ಹೆದರುವಂತಾಗಿದೆ. ಈ ಮಧ್ಯೆ ನಗರದಲ್ಲಿ ಡೆಂಗ್ಯೂ (dengue) ಪ್ರಕರಣಗಳು 10 ಸಾವಿರ ಗಡಿ ದಾಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ 10511 ಏರಿಕೆ ಆಗಿದೆ.

ಕರ್ನಾಟಕದಲ್ಲಿ ಡೆಂಗ್ಯೂ ಸೋಂಕಿತರ ಪ್ರಕರಣಗಳು 23,163 ಏರಿಕೆ ಆಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 199 ಡೆಂಗ್ಯೂ ಪ್ರಕರಣಗಳು ಪತ್ತೆ ಆಗಿದ್ದು, 1182 ಸಕ್ರಿಯ ಪ್ರಕರಣಗಳಿವೆ. ಇಡಿ ದೇಶದಲ್ಲೇ  ಡೆಂಗ್ಯೂ ಪ್ರಕರಣಗಳು ಹೆಚ್ಚು ಇರುವ ಸಿಟಿಗಳಲ್ಲಿ ಬೆಂಗಳೂರು ಕೂಡಾ ಒಂದಾಗಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆಯ ಟೆನ್ಷನ್​ಗೆ ಕಾರಣವಾಗಿದೆ. ಸದನದಲ್ಲು ಕೂಡಾ ವಿಪಕ್ಷಗಳು ಡೆಂಗ್ಯೂ ಕೇಸ್​ ಹೆಚ್ಚಳದ ಬಗ್ಗೆ ಸರ್ಕಾರ ಮುಜುಗರಕ್ಕೀಡುಮಾಡುವಂತೆ ಮಾಡಿತ್ತು.

ಇದನ್ನೂ ಓದಿ: ಬೆಂಗಳೂರಿನ ಐವರಲ್ಲಿ ಝೀಕಾ ವೈರಸ್ ಪತ್ತೆ​​​, ಗರ್ಭಿಣಿಯರೇ ಎಚ್ಚರ!

ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಬಿಬಿಎಂಪಿ ಅಧಿಕಾರಿಗಳಿಗೆ ಸ್ಪೆಷಲ್ 2 ವಾರಗಳ ಟಾಸ್ಕ್ ನೀಡಿದ್ದರು. ಎರಡು ವಾರದಲ್ಲಿ ಡೆಂಗ್ಯೂ ಕಂಟ್ರೋಲ್​ಗೆ ತರಬೇಕು ಅಂತ ಖಡಕ್​ ಆಗಿ ವಾರ್ನಿಂಗ್ ಕೊಟ್ಟಿದ್ದರು. ಆದರೆ ಡೆಡ್​ಲೈನ್ ಮುಗಿದರೂ ಕೂಡಾ ನಗರದಲ್ಲಿ ಡೆಂಗ್ಯೂ ಕಂಟ್ರೋಲ್​ಗೆ ತರುವಲ್ಲಿ ಅಧಿಕಾರಿಗಳು ಫೇಲ್ಯುವರ್​ ಆ ಅನ್ನೋವ ಪ್ರಶ್ನೆ ಎದುರಾಗಿದೆ.

ದಿನನಿತ್ಯ ನಗರದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಮಹದವೇಪುರದಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್​ ಸೇರಿದಂತೆ ನಗರ ಹೆಚ್ಚು ಹಾಟ್​ಸ್ಪಾಟ್​ಗಳಾಗಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವೈರಲ್ ಇನ್ಫೆಕ್ಷನ್​ ಎಫೆಕ್ಟ್: ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟು!

ಸಾವಿರಾರು ಗಡಿದಾಟಿ ಡೆಂಗ್ಯೂ ಪ್ರಕರಣ ಮುನ್ನುಗುತ್ತಿದೆ. ಈ ಮಧ್ಯೆ ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಐವರಲ್ಲಿ ಝೀಕಾ ವೈರಸ್ ​​​ಸೋಂಕು ಪತ್ತೆಯಾಗಿದೆ. ಝೀಕಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಜಿಗಣಿ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:44 pm, Fri, 23 August 24