Shivamogga Blast: ಜಮೀನು ಮೂಲ ಮಾಲೀಕ ಅವಿನಾಶ್ ಕುಲಕರ್ಣಿ ಬಂಧನ
ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಂಬಂಧಿಸಿ ಅಕ್ರಮ ಕಲ್ಲುಗಣಿಗಾರಿಕೆಗೆ ಜಿಲೆಟಿನ್ ಪೂರೈಸುತ್ತಿದ್ದ ನರಸಿಂಹ, ಕ್ರಷರ್ ಪಾಲುದಾರನಾಗಿದ್ದ ಸುಧಾಕರ್ ಮತ್ತು ಈಗ ಮಾಲೀಕ ಅವಿನಾಶ್ ಕುಲಕರ್ಣಿ ಅರೆಸ್ಟ್ ಆಗಿದ್ದಾರೆ.
ಶಿವಮೊಗ್ಗ: ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಂಬಂಧಿಸಿ ಜಮೀನು ಮೂಲ ಮಾಲೀಕ ಅವಿನಾಶ್ ಕುಲಕರ್ಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಧಿಸಲಾಗಿದೆ.
ಅಕ್ರಮ ಕಲ್ಲುಗಣಿಗಾರಿಕೆಗೆ ಜಿಲೆಟಿನ್ ಪೂರೈಸುತ್ತಿದ್ದ ನರಸಿಂಹ, ಕ್ರಷರ್ ಪಾಲುದಾರನಾಗಿದ್ದ ಸುಧಾಕರ್ ಮತ್ತು ಈಗ ಮಾಲೀಕ ಅವಿನಾಶ್ ಕುಲಕರ್ಣಿ ಅರೆಸ್ಟ್ ಆಗಿದ್ದಾರೆ. ಇನ್ನು ಇದು ಸಾಮಾನ್ಯ ಸ್ಫೋಟವಲ್ಲ, ರಣಭೀಕರವಾಗಿದ ಸ್ಫೋಟ ‘ಜಿಲೆಟಿನ್’ ಸ್ಫೋಟದ ತೀವ್ರತೆಗೆ ಕಬ್ಬಿಣ ಕೂಡ ಪೀಸ್ ಪೀಸ್ ಆಗಿದೆ. ಸುಮಾರು 500 ಮೀಟರ್ ದೂರಕ್ಕೆ ಲಾರಿ ಬಿಡಿ ಭಾಗಗಳು ಬಿದ್ದಿವೆ. ಲಾರಿ ಚಕ್ರದ ಬಳಿಯ ರಾಡ್ಗಳು ಸ್ಫೋಟದ ತೀವ್ರತೆಗೆ ಛಿದ್ರ ಛಿದ್ರವಾಗಿವೆ.
ಪ್ರಕರಣದ ಉನ್ನತಮಟ್ಟದ ತನಿಖೆಗೆ ಆದೇಶ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗ ಜಿಲೆಟಿನ್ ಸ್ಫೋಟ: JDS ಮುಖಂಡ ನರಸಿಂಹ, ಗುತ್ತಿಗೆದಾರ ಸುಧಾಕರ್ ಅರೆಸ್ಟ್
Published On - 9:19 am, Fri, 22 January 21