ಶಿಂಡೇನಹಳ್ಳಿಯಲ್ಲಿ ಅಪರೂಪದ ಬಿಳಿ ಗೂಬೆ ಮರಿಗಳ ರಕ್ಷಣೆ
ರೈತ ಚಂದ್ರಮೌಳಿ ಅವರ ಫಾರ್ಮ್ ಹೌಸ್ಲ್ಲಿದ್ದ ಅಪರೂಪದ ಬಿಳಿ ಗೂಬೆ ಮರಿಗಳನ್ನು ಹೆಚ್. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.

ಮೈಸೂರು: ರೈತ ಚಂದ್ರಮೌಳಿ ಅವರ ಫಾರ್ಮ್ ಹೌಸ್ಲ್ಲಿದ್ದ ಅಪರೂಪದ ಬಿಳಿ ಗೂಬೆ ಮರಿಗಳನ್ನು ಹೆಚ್. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.
ತಾಯಿ ಸಾವನ್ನಪ್ಪಿದ ನಂತರ ಮರಿಗಳು ಅನಾಥವಾಗಿದ್ದವು. ಮರಿಗಳು ಸ್ವತಂತ್ರವಾಗಿ ಬದುಕುವ ತನಕ ಅವುಗಳಿಗೆ ರಕ್ಷಣೆ ನೀಡಿ, ನಂತರದಲ್ಲಿ ಮರಿಗಳನ್ನು ಅದರ ಸ್ವಸ್ಥಾನಕ್ಕೆ ಬಿಡಲು ಶಿಂಡೇನಹಳ್ಳಿಯ ಸ್ನೇಕ್ ಶ್ಯಾಂ ಅವರ ಪುತ್ರ ಸೂರ್ಯ ಕೀರ್ತಿ ಮುಂದಾಗಿದ್ದಾರೆ.

ಅಪರೂಪದ ಬಿಳಿ ಗೂಬೆ ಮರಿಗಳು
ಮೈಸೂರಿನಲ್ಲಿ ಪುನುಗು ಬೆಕ್ಕು ರಕ್ಷಣೆ:
ಆಹಾರ ಅರಸಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದದಿಂದ ಬಂದಂತಹ ಪುನುಗು ಬೆಕ್ಕನ್ನು ರಕ್ಷಿಸಲಾಗಿದೆ. ಬೆಕ್ಕು ಬೆಟ್ಟದ ಪಾರ್ಕಿಂಗ್ ಜಾಗದಲ್ಲಿ ಸುಳಿದಾಡುತ್ತಿತ್ತು. ಇದನ್ನು ಕಂಡ ಸ್ನೇಕ್ ಕುಮಾರ್ ಬೆಕ್ಕನ್ನು ಹಿಡಿದು ಮರಳಿ ಅದರ ವಾಸಸ್ಥಾನವಾದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

ಪುನುಗು ಬೆಕ್ಕು ರಕ್ಷಿಸಿ ಮರಳಿ ವಾಸಸ್ಥಾನಕ್ಕೆ ತಲುಪಿಸಿದ ಸ್ನೇಕ್ ಕುಮಾರ್



