ಕೇರಳದಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಬಂದ್; ಮಂಗಳೂರಿನಲ್ಲಿ ಹೆಚ್ಚಿದ ಆತಂಕ

ಕೇರಳದ ಪಾಲಕ್ಕಾಡ್ ಮತ್ತು ಕಾರ್ನಾಡಿನಿಂದ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಆದರೆ ಅದನ್ನು ಈಗ ಇದ್ದಕ್ಕಿದ್ದ ಹಾಗೆ ನಿಲ್ಲಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಕೇರಳಿಂದ ಬಂದ ಆಕ್ಸಿಜನ್ ರಿಫಿಲ್ ಸಪ್ಲೇಯಾಗುತ್ತಿತ್ತು. ಆದರೆ ಇದನ್ನು ಕೇರಳ ಕಂಪೆನಿಗಳು ಬಂದ್ ಮಾಡಿದೆ.

ಕೇರಳದಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಬಂದ್; ಮಂಗಳೂರಿನಲ್ಲಿ ಹೆಚ್ಚಿದ ಆತಂಕ
ಆಕ್ಸಿಜನ್ ಸಿಲಿಂಡರ್ (ಪ್ರಾತಿನಿಧಿಕ ಚಿತ್ರ)
Follow us
preethi shettigar
|

Updated on: May 04, 2021 | 3:12 PM

ಮಂಗಳೂರು: ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಸಾವಿನ ಸಂಖ್ಯೆಯಲ್ಲೂ ಕೂಡ ಏರಿಕೆಯಾಗಿದೆ. ಇಷ್ಟೇ ಅಲ್ಲದೇ ಚಾಮರಾಜನಗರ ಜಿಲ್ಲೆಯಲ್ಲಿ ಆದ ದುರುಂತ ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಆಕ್ಸಿಜನ್ ಪೂರೈಕೆಯಾಗದೆ ಇನ್ನು ಅದೆಷ್ಟು ದುರುಂತಗಳನ್ನು ನೋಡಬೇಕೋ ಎನ್ನುವ ಸದ್ಯ ಆತಂಕ ಸೃಷ್ಟಿಯಾಗಿದೆ. ಈ ಆತಂಕ್ಕೆ ಪ್ರಮುಖ ಕಾರಣ ಈಗಾಗಲೇ ಕರ್ನಾಟಕಕ್ಕೆ ಇತರ ರಾಜ್ಯಗಳಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್​ಅನ್ನು ನಿಲ್ಲಿಸಲಾಗಿದೆ ಎನ್ನುವ ಕೂಗು ಕೇಳಿ ಬಂದಿರುವುದೇ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸದ್ಯದ ಪರಿಸ್ಥಿತಿಯಲ್ಲಿ 15 ಟನ್​ನಷ್ಟು ಆಕ್ಸಿಜನ್ ರಿಕ್ವಾರ್ಮೆಂಟ್ ಇದೆ. ಆದರೆ ಈಗ ಇಲ್ಲಿರೋದು ಕೇವಲ 15 ಟನ್ ಆಕ್ಸಿಜನ್. ಅಂದರೆ 24 ಗಂಟೆಗಳಿಗಾಗುವಷ್ಟು ಆಕ್ಸಿಜನ್ ಮಾತ್ರ ಲಭ್ಯವಿದೆ. ಪ್ರತಿನಿತ್ಯ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಈ ಕಾರಣದಿಂದ ಯಾವುದೇ ಆತಂಕ ಇರಲಿಲ್ಲ. ಆದರೆ ಈ ಮಧ್ಯೆ ಆದ ಒಂದು ಬೆಳವಣಿಗೆ ಈಗ ಕರಾವಳಿ ಭಾಗಕ್ಕೆ ಆತಂಕ ಉಂಟು ಮಾಡುವಂತೆ ಮಾಡಿದೆ.

ಕೇರಳದ ಪಾಲಕ್ಕಾಡ್ ಮತ್ತು ಕಾರ್ನಾಡಿನಿಂದ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಆದರೆ ಅದನ್ನು ಈಗ ಇದ್ದಕ್ಕಿದ್ದ ಹಾಗೆ ನಿಲ್ಲಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಕೇರಳಿಂದ ಬಂದ ಆಕ್ಸಿಜನ್ ರಿಫಿಲ್ ಸಪ್ಲೇಯಾಗುತ್ತಿತ್ತು. ಆದರೆ ಇದನ್ನು ಕೇರಳ ಕಂಪೆನಿಗಳು ಬಂದ್ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಮ್ಮ ಪ್ರಭಾವ ಬಳಸಿ ಕಳೆದ ಒಂದಷ್ಟು ದಿನದಿಂದ ಆಕ್ಸಿಜನ್ ತರಿಸುತ್ತಿದ್ದರು. ಆದರೆ ಈಗ ಅವರಿಗೂ ಕಂಪನಿಗಳು ಸಹಕಾರ ನೀಡುತ್ತಿಲ್ಲ. ಕರ್ನಾಟಕಕ್ಕೆ 20 ಟನ್ ಪೂರೈಕೆ ಮಾಡುವಂತೆ ಆದೇಶವಾಗಿದೆ. ಆದ್ದರಿಂದ ನಿಮ್ಮ ಸರ್ಕಾರದಿಂದ ಅನುಮತಿ ಕೇಳಿ ಆಕ್ಸಿಜನ್ ಪಡೆಯಿರಿ ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಆಕ್ಸಿಜನ್ ಪ್ರತಿನಿತ್ಯ ಬಳ್ಳಾರಿಯಿಂದ ಬರುತ್ತಿದೆ. ಅದರಿಂದಲೇ ಸಂಬಾಳಿಸಲಾಗುತ್ತಿದೆ. ಇಷ್ಟು ದಿನಗಳ ಕಾಲ ಖಾಸಗಿ ಆಸ್ಪತ್ರೆಯವರಿಗೂ ಸರಿಯಾಗಿ ಆಕ್ಸಿಜನ್ ಪೂರೈಕೆ ಇತ್ತು. ಆದರೆ ಇನ್ನು ಮುಂದೆ ಕೆ.ಪಿ.ಎಮ್.ಇ ನಲ್ಲಿ ರಿಜಿಸ್ಟರ್ ಮಾಡಿ ನೇರವಾಗಿ ಸರ್ಕಾರದಿಂದ ಆಕ್ಸಿಜನ್ ಪಡೆದುಕೊಳ್ಳಬೇಕು ಎಂದು ಆದೇಶವಾಗಿದೆ. ಆದ್ದರಿಂದ ಆಕ್ಸಿಜನ್ ಪರಿಸ್ಥಿತಿ ಇನ್ನು ಕೂಡ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇದ್ರ ಹೇಳಿದ್ದಾರೆ.

ಈ ಮಧ್ಯೆ ಜಿಲ್ಲಾಡಳಿತ ಮತ್ತು ಇಲ್ಲಿನ ಜನಪ್ರತಿನಿಧಿಗಳು ಕೇರಳದಿಂದ ಆಕ್ಸಿಜನ್ ಪೂರೈಕೆ ಬಂದ್ ಆಗಿರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಹೆಚ್ಚುವರಿ ಆಕ್ಸಿಜನ್​ಗೆ ಬೇಡಿಕೆ ಇಟ್ಟಿದ್ದಾರೆ. ಸದ್ಯ ಕರಾವಳಿ ಭಾಗಕ್ಕೆ ಇತರ ಜಿಲ್ಲೆಗಳಿಂದ ಕೂಡ ರೋಗಿಗಳು ಬರುತ್ತಾರೆ. ಆದರೆ ಬೇರೆ ಬೇರೆ ರಾಜ್ಯಗಳಿಂದ ಪೂರೈಕೆ ಮಾಡುತ್ತಿದ್ದ ಆಕ್ಸಿಜನ್ ಪೂರೈಕೆ ಕೂಡ ಬಂದ್ ಆಗಿದೆ. ಸದ್ಯ ಈ ಎಲ್ಲವನ್ನು ಸರಿಯಾಗಿ ನಿಭಾಯಿಸುವ ಜವಬ್ದಾರಿ ಸರ್ಕಾರ ಮತ್ತು ಜಿಲ್ಲಾಢತದ್ದಾಗಿದೆ.

ಇದನ್ನೂ ಓದಿ:

ಕೊರೊನಾ: ತುಮಕೂರಿನಲ್ಲಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಬಲಿ, ನೇಣು ಬಿಗಿದುಕೊಂಡು ಶ್ರೀರಂಗಪಟ್ಟಣದಲ್ಲಿ ಮತ್ತೊಬ್ಬ ಸಾವು

ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್‌ ನೀಡಲು ನಿರ್ಧಾರ: ಸಂಸದೆ ಸುಮಲತಾ

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ