ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರು 24 ಅಲ್ಲ 28 ಜನರು, ಸುಳ್ಳು ಹೇಳ್ತಿದೆ ಸರ್ಕಾರ -ಸಿದ್ದರಾಮಯ್ಯ ತರಾಟೆ

ಚಾಮರಾಜನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ.. ಘಟನೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಮಾಹಿತಿ ಪಡೆದಿದ್ದೇವೆ. ನಿನ್ನೆ ಸಚಿವ ಸುಧಾಕರ್ ಸಹ ಅಧಿಕಾರಿಗಳ ಜತೆ ಸಭೆ ಮಾಡಿದ್ದಾರೆ. ಆದರೆ ಸಚಿವ ಸುಧಾಕರ್ ನಿನ್ನೆ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ.

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರು 24 ಅಲ್ಲ 28 ಜನರು, ಸುಳ್ಳು ಹೇಳ್ತಿದೆ ಸರ್ಕಾರ -ಸಿದ್ದರಾಮಯ್ಯ ತರಾಟೆ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಾದ ಘಟನೆ ಸಂಬಂಧ ಸಭೆ ನಡೆಸಿದ ಸಿದ್ದರಾಮಯ್ಯ
Follow us
ಆಯೇಷಾ ಬಾನು
|

Updated on: May 04, 2021 | 2:51 PM

ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಮೃತಪಟ್ಟ ಘಟನೆ ಸಂಬಂಧ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ. ಆಕ್ಸಿಜನ್ ಇಲ್ಲದೆ 28 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿರುವುದು ಶುದ್ಧಸುಳ್ಳು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹಾಗಾದ್ರೆ ಸಿದ್ದರಾಮಯ್ಯ ಹೇಳಿದ್ದೇನು ಚಾಮರಾಜನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ.. ಘಟನೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಮಾಹಿತಿ ಪಡೆದಿದ್ದೇವೆ. ನಿನ್ನೆ ಸಚಿವ ಸುಧಾಕರ್ ಸಹ ಅಧಿಕಾರಿಗಳ ಜತೆ ಸಭೆ ಮಾಡಿದ್ದಾರೆ. ಆದರೆ ಸಚಿವ ಸುಧಾಕರ್ ನಿನ್ನೆ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ. ಚಾಮರಾಜನಗರದಲ್ಲಿ 28 ಜನರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ. ಆದ್ರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಕ್ಸಿಜನ್ ಕೊರತೆಯಾಗಿ 3 ಜನ ಮೃತಪಟ್ಟಿದ್ದಾರೆ ಎಂದಿದ್ದರು. ಅವರು ಹೇಳಿರುವುದು ಶುದ್ಧಸುಳ್ಳು. ಚಾಮರಾಜನಗರಕ್ಕೆ ಪ್ರತಿದಿನ 350 ಆಕ್ಸಿಜನ್ ಸಿಲಿಂಡರ್ ಬೇಕು. ಆದರೆ ಭಾನುವಾರ ಪೂರೈಕೆ ಆಗಿರುವುದು 126 ಸಿಲಿಂಡರ್. ಇದರಿಂದ ಎಲ್ಲ ರೋಗಿಗಳಿಗೆ ಆಕ್ಸಿಜನ್ ಕೊಡುವುದಕ್ಕೆ ಆಗಿಲ್ಲ. ಸಂಜೆಯಿಂದ ರಾತ್ರಿ 12 ಗಂಟೆವರೆಗೆ 24 ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆಂದು ಡೀನ್, ಜಿಲ್ಲಾ ಸರ್ಜನ್, ಜಿಲ್ಲಾಧಿಕಾರಿ ಒಪ್ಪಿಕೊಂಡಿದ್ದಾರೆ. ಆಕ್ಸಿಜನ್ ಪೂರೈಕೆ ಆಗಿಲ್ಲ ಎಂದು ಕೂಡ ಒಪ್ಪಿಕೊಂಡಿದ್ದಾರೆ ಎಂದರು.

350 ಆಕ್ಸಿಜನ್ ಸಿಲಿಂಡರ್ ಅಗತ್ಯವಿತ್ತು, ಆದ್ರೆ ಪೂರೈಕೆ ಆಗಿಲ್ಲ. ಸುಮಾರು 224 ಆಕ್ಸಿಜನ್ ಸಿಲಿಂಡರ್ ಕೊರತೆ ಇತ್ತು. ಇದರಿಂದ ಆಕ್ಸಿಜನ್ ಸಿಗದೆ ರೋಗಿಗಳು ಮೃತಪಟ್ಟಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಸತ್ಯವನ್ನು ಮುಚ್ಚಿಟ್ಟಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಹೇಳಿಕೆಯನ್ನು ಖಂಡಿಸುತ್ತೇನೆ. ರಾಜ್ಯ ಸರ್ಕಾರ ಆಕ್ಸಿಜನ್ ಪೂರೈಕೆ ಮಾಡಬೇಕಾಗಿತ್ತು. ಚಾಮರಾಜನಗರದಲ್ಲಿ ಬಹುತೇಕ ಎಲ್ಲ ಬೆಡ್ ಭರ್ತಿಯಾಗಿದೆ. ಹೊಸ ಸೋಂಕಿತರು ಬಂದರೆ ಯಾವುದೇ ವ್ಯವಸ್ಥೆ ಇಲ್ಲ. ಸರ್ಕಾರ, ಜಿಲ್ಲಾಡಳಿತ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಎಲ್ಲರ ಜತೆ ಚರ್ಚಿಸಿದ್ದೇನೆಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಆದರೆ ಯಾವುದೇ ವ್ಯವಸ್ಥೆ ಮಾಡುತ್ತಿಲ್ಲವೆಂದು ಡಿಸಿ ಹೇಳಿದ್ದಾರೆ. ‘ಇದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯವಾಗಿದೆ’ ಸಾವಿನ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಸುರೇಶ್ ಕುಮಾರ್ ಸಚಿವರಾಗಿ ಮುಂದುವರಿಯಬಾರದು ಮೊದಲು ಮೈಸೂರು ಜಿಲ್ಲೆಗೆ ಆಕ್ಸಿಜನ್ ಪೂರೈಸಬೇಕಂತೆ. ಅದಾದ ನಂತರ ಬೇರೆ ಜಿಲ್ಲೆಗೆ ಪೂರೈಸಲು ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರಂತೆ. ಮೈಸೂರು ಡಿಸಿ ಎಲ್ಲ ವ್ಯವಸ್ಥೆ ಮಾಡಿದ್ದೇವೆಂದು ಹೇಳ್ತಿದ್ದಾರೆ. ಆದರೆ ಯಾವುದೇ ವ್ಯವಸ್ಥೆ ಮಾಡಿಲ್ಲವೆಂದು ಇವರು ಹೇಳ್ತಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಒಂದು ಮಾತನ್ನು ಹೇಳುತ್ತಿದ್ದಾರೆ. ಚಾಮರಾಜನಗರ ಜಿಲ್ಲಾಧಿಕಾರಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ಇದರಲ್ಲಿ ಸತ್ಯ ಯಾವುದೆಂದು ತಿಳಿಯಬೇಕು. ಚಾಮರಾಜನಗರದಲ್ಲಿ 28 ಜನರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ವತಂತ್ರ ತನಿಖೆಯಾಗಬೇಕೆಂದು ಮೃತರಿಗೆ ನ್ಯಾಯ ಸಿಗಬೇಕೆಂದು ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಹೊಣೆಗಾರರಾಗಿದ್ದಾರೆ. ಸುರೇಶ್ ಕುಮಾರ್ ಸಚಿವರಾಗಿ ಮುಂದುವರಿಯಬಾರದು. ಮಾನ ಮರ್ಯಾದೆ ಇದ್ದರೆ ಸಚಿವರಾಗಿ ಮುಂದುವರಿಯಬಾರದು. ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳದೆ ಉದಾಸಿನ ಮಾಡಿತು. ಹೀಗಾಗಿ ರಾಜ್ಯದಲ್ಲಿ ಇಷ್ಟೊಂದು ಸಮಸ್ಯೆಗಳಾಗುತ್ತಿರುವುದು. ಸಮಸ್ಯೆಯಾದಾಗ ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದಾರೆ. ಇವರು ಯಾವ ಕಾರಣಕ್ಕೆ ಉಸ್ತುವಾರಿ ಸಚಿವರಾಗಿರುವುದು. ಇವರಿಗೆ ಮನುಷ್ಯತ್ವ ಅನ್ನೋದೆ ಇಲ್ಲ. ಚಾಮರಾಜನಗರದ ದುರಂತಕ್ಕೆ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕಾರಣ. ಆಕ್ಸಿಜನ್ ಸಿಗದೆ ಮೃತಪಟ್ಟವರೆಲ್ಲಾ ದುಡಿಯುವ ವ್ಯಕ್ತಿಗಳು. ಮೃತಪಟ್ಟವರೆಲ್ಲಾ ಆ ಕುಟುಂಬಗಳಿಗೆ ಆಧರವಾಗಿದ್ದವರು. ಮೃತರ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಬೇಕು. ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ 24 + 4= 28 ಜನ ಸಾವನ್ನಪ್ಪಿರುವುದಕ್ಕೆ ದಾಖಲೆಯಿದೆ. ನಾವು ಎಲ್ಲಾ ಮಾಹಿತಿಯನ್ನು ತೆಗೆದುಕೊಂಡಿದ್ದೇವೆ. ಒಂದು ವಾರದಲ್ಲಿ ಇದು ತನಿಖೆಯಾಗಬೇಕು. ಇದು ಸರ್ಕಾರ ಮಾಡಿರುವ ಕೊಲೆ. ಸ್ವಯಂಪ್ರೇರಿತವಾಗಿ ದೂರು ದಾಖಲಾಗಬೇಕು ಎಂದು ಹೇಳಿದ್ದಾರೆ.

ಡಿಹೆಚ್‌ಒಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆ ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿಗೆ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 53 ಐಸಿಯು ಬೆಡ್‌ಗಳಿವೆ ಎನ್ನುತ್ತಿದ್ದೀರಿ. ಹಾಗಾದ್ರೆ 34 ವೆಂಟಿಲೇಟರ್‌ಗಳು ಮಾತ್ರ ಏಕೆ ಇವೆ. ನೀವು ಸಮಸ್ಯೆಗಳನ್ನು ಮುಚ್ಚಿಡುವುದಕ್ಕೆ ಪ್ರಯತ್ನಿಸಬೇಡಿ. ಐ ಆ್ಯಮ್ ನಾಟ್ ಎ ಡಾಕ್ಟರ್ ಎಂದು ಸಿದ್ದರಾಮಯ್ಯ ಬೆವರಿಳಿಸಿದ್ದಾರೆ.

ಮೆಡಿಕಲ್ ಆಕ್ಸಿಜನ್ ಸಿಗದೆ ರೋಗಿಗಳು ಮೃತಪಟ್ಟಿದ್ದಾರೆ. ಇದು ನಿಮ್ಮ ತಪ್ಪಲ್ಲವಾ, ರಾಜ್ಯ ಸರ್ಕಾರದ ತಪ್ಪಲ್ಲವಾ? ರಾಜ್ಯ ಸರ್ಕಾರ ಏಕೆ ಆಕ್ಸಿಜನ್ ವ್ಯವಸ್ಥೆಯನ್ನ ಮಾಡಲಿಲ್ಲ. ಬಳ್ಳಾರಿಯಿಂದ ಆಕ್ಸಿಜನ್ ಬಂದಿದೆ ಎಂದು ಹೇಳುತ್ತಿದ್ದೀರಿ. ಹಾಗಾದ್ರೆ ನಿಮಗೆ ಮೈಸೂರಿನವರೇ ಆಕ್ಸಿಜನ್ ಪೂರೈಸಲಿಲ್ವಾ? ಎಂಬ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಆಸ್ಪತ್ರೆ ಡೀನ್ ಉತ್ತರಿಸಲಾಗದೆ ತಡಬಡಾಯಿಸಿದ್ದಾರೆ.

ಇದೇ ವೇಳೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಿಮಗೆ ಬೇಕಾಗಿರುವುದು 350 ಆಕ್ಸಿಜನ್ ಸಿಲಿಂಡರ್’ ಆದರೆ ಮೈಸೂರಿನಿಂದ ನಿಮಗೆ ಮೆಡಿಕಲ್ ಆಕ್ಸಿಜನ್ ಬಂದಿಲ್ಲ. ಇದು ವಾಸ್ತವ. ಬಳ್ಳಾರಿಯಿಂದ ಆಕ್ಸಿಜನ್ ಬಂದಿಲ್ಲವೆಂದು ಏಜೆನ್ಸಿ ಹೇಳುತ್ತಿದೆ. ಸದರನ್ ಗ್ಯಾಸ್ ಏಜೆನ್ಸಿ ಖಾಸಗಿಯವರದ್ದು, ಇದು ಡಿಸಿ ಕಂಟ್ರೋಲ್‌ನಲ್ಲಿದ್ಯಾ ಯಾರ ಕಂಟ್ರೋಲ್‌ನಲ್ಲಿದೆ ಎಂದು ಅಧಿಕಾರಿಗಳನ್ನ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್ 19 ನಿಂದ ಮೃತಪಟ್ಟಲ್ಲಿ ಸರ್ಕಾರದ 2 ಲಕ್ಷ ರೂ. ಇನ್ಷೂರೆನ್ಸ್ ಕ್ಲೇಮ್ ಮಾಡುವುದು ಹೇಗೆ?

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್