ಪಾದರಾಯನಪುರ ಮತ್ತು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗಿದೆಯಾ ಸಂಬಂಧ?
ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಪಾದರಾಯನಪುರ ಗಲಾಟೆಗೂ ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿ ಗಲಭೆಗೂ ಸಂಬಂಧ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಈ ಎರಡು ಏರಿಯಾಗಳು ಹಲವು ಕೇಸ್ಗಳಲ್ಲಿ ಪಾಲು ಹೊಂದಿವೆ. ಅಚ್ಚರಿ ಎಂಬಂತೆ ಈ ಏರಿಯಾಗಳು ಅದರದ್ದೇ ಆದ ಕೋಡ್ ಲಿಂಕ್ ಹೊಂದಿವೆ. ಪಾದರಾಯನಪುರವನ್ನು ಗೋವಾ ಅಂತ, ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿಯನ್ನು ಮುಂಬೈ ಎಂಬ ಹೆಸರಿನಲ್ಲೇ ಹೆಚ್ಚು ಫೇಮಸ್ ಆಗಿವೆ. ಈ ಏರಿಯಾಗಳಲ್ಲಿ ಶೇ.70ಕ್ಕೂ ಹೆಚ್ಚು ಮುಸ್ಲಿಂ ಸಮುದಾಯವರೇ ವಾಸ […]

ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಪಾದರಾಯನಪುರ ಗಲಾಟೆಗೂ ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿ ಗಲಭೆಗೂ ಸಂಬಂಧ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಈ ಎರಡು ಏರಿಯಾಗಳು ಹಲವು ಕೇಸ್ಗಳಲ್ಲಿ ಪಾಲು ಹೊಂದಿವೆ.
ಅಚ್ಚರಿ ಎಂಬಂತೆ ಈ ಏರಿಯಾಗಳು ಅದರದ್ದೇ ಆದ ಕೋಡ್ ಲಿಂಕ್ ಹೊಂದಿವೆ. ಪಾದರಾಯನಪುರವನ್ನು ಗೋವಾ ಅಂತ, ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿಯನ್ನು ಮುಂಬೈ ಎಂಬ ಹೆಸರಿನಲ್ಲೇ ಹೆಚ್ಚು ಫೇಮಸ್ ಆಗಿವೆ. ಈ ಏರಿಯಾಗಳಲ್ಲಿ ಶೇ.70ಕ್ಕೂ ಹೆಚ್ಚು ಮುಸ್ಲಿಂ ಸಮುದಾಯವರೇ ವಾಸ ಮಾಡುತ್ತಿದ್ದಾರೆ. ಪಾದರಾಯನಪುರ ಗಲಾಟೆಯಲ್ಲಿ ಡಿ.ಜೆ ಹಳ್ಳಿ-ಕೆ.ಜೆ ಹಳ್ಳಿ ಜನರ ಹೆಸರು ಕೇಳಿ ಬಂದಿತ್ತು.
ಹಾಗೂ ಡಿ.ಜೆ ಹಳ್ಳಿ-ಕೆ.ಜೆ ಹಳ್ಳಿ ಘಟನೆನಲ್ಲಿ ಪಾದರಾಯನಪುರ ಜನರ ಲಿಂಕ್ ಇದೆ. ಗೋವಾ-ಮುಂಬೈ ಹೆಸರಿನಲ್ಲಿ ಒಂದೇ ಸಮುದಾಯದವರಿಂದ ಪುಂಡಾಟ ನಡೀತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಒಂದೇ ಸಂಘಟನೆ ಹೆಸರಿನಲ್ಲಿ ಹಲವೆಡೆ ಗಲಭೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.