ತಮಿಳುನಾಡಿನಲ್ಲಿ ಚಿನ್ನಮ್ಮ‌ ಶಶಿಕಲಾಗೆ ‌ಮತ್ತೊಂದು ಶಾಕ್ ನೀಡಿದ ಪಳನಿಸ್ವಾಮಿ ನೇತೃತ್ವದ AIADMK ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:04 PM

Palaniswamy AIADMK government confiscate VK Sasikala land ಸುಪ್ರೀಂ ಕೋರ್ಟ್​ ಆದೇಶದ ಮೇರೆಗೆ ಪಳನಿಸ್ವಾಮಿ ನೇತೃತ್ವದ ರಾಜ್ಯ ಸರಕಾರ ತಮಿಳುನಾಡಿನಾದ್ಯಂತ ಶಶಿಕಲಾ ನಟರಾಜನ್​ಗೆ ಸೇರಿದ ಕೋಟ್ಯಾಂತರ ರೂಪಾಯಿ ಜಮೀನುಗಳ ಜಪ್ತಿ ಮಾಡಿದೆ. ಇತ್ತೀಚಿಗೆ ಚನ್ನೈನಲ್ಲಿ 6 ಕಡೆಗಳಲ್ಲಿ ನೂರಾರು ‌ಕೋಟಿ ಆಸ್ತಿಗಳನ್ನು ಜಪ್ತಿ‌ ಮಾಡಿತ್ತು.

ತಮಿಳುನಾಡಿನಲ್ಲಿ ಚಿನ್ನಮ್ಮ‌ ಶಶಿಕಲಾಗೆ ‌ಮತ್ತೊಂದು ಶಾಕ್ ನೀಡಿದ ಪಳನಿಸ್ವಾಮಿ ನೇತೃತ್ವದ AIADMK ಸರ್ಕಾರ
ಪಳನಿ ಸ್ವಾಮಿ, ಶಶಿಕಲಾ
Follow us on

ಚೆನ್ನೈ: ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಆರ್ಭಟ ತೋರಿಸಲು ಮುಂದಾಗಿದ್ದ ಚಿನ್ನಮ್ಮ‌ ವಿಕೆ ಶಶಿಕಲಾ ನಟರಾಜನ್​ಗೆ ಅಣ್ಣಾ ಡಿಎಂಕೆ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ. ಶಶಿಕಲಾ ಸಂಬಂಧಿಗಳಾದ ಇಳವರಸಿ ಮತ್ತು ‌ಸುಧಾಕರನ್ ‌ಹೆಸರಲ್ಲಿದ್ದ ಭಾರಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ತೂತ್ತುಕುಡಿ ಜಿಲ್ಲೆಯಲ್ಲಿ‌ 800 ಎಕರೆ ಭೂಮಿಯನ್ನು ರಾಜ್ಯ ಸರ್ಕಾರದ ವತಿಯಿಂದ ಜಪ್ತಿ ಮಾಡಲಾಗಿದೆ.

ಸುಪ್ರೀಂ ಕೋರ್ಟ್​ ಆದೇಶದ ಮೇರೆಗೆ ಪಳನಿಸ್ವಾಮಿ ನೇತೃತ್ವದ ರಾಜ್ಯ ಸರಕಾರ ತಮಿಳುನಾಡಿನಾದ್ಯಂತ ಶಶಿಕಲಾ ನಟರಾಜನ್​ಗೆ ಸೇರಿದ ಕೋಟ್ಯಾಂತರ ರೂಪಾಯಿ ಜಮೀನುಗಳ ಜಪ್ತಿ ಮಾಡಿದೆ. ಇತ್ತೀಚಿಗೆ ಚನ್ನೈನಲ್ಲಿ 6 ಕಡೆಗಳಲ್ಲಿ ನೂರಾರು ‌ಕೋಟಿ ಆಸ್ತಿಗಳನ್ನು ಜಪ್ತಿ‌ ಮಾಡಿತ್ತು.

Published On - 4:56 pm, Tue, 9 February 21