Davangere Valmiki Jatre: ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳಿಂದ ಕುರ್ಚಿ, ಸೋಫಾ ಪೀಸ್ ಪೀಸ್
Kiccha Sudeep Fans | ದಾವಣಗೆರೆಯ ರಾಜನಹಳ್ಳಿಯಲ್ಲಿನ ವಾಲ್ಮೀಕಿ ಸಮಾವೇಶದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಈ ವೇಳೆ ತನ್ನ ನೆಚ್ಚಿನ ನಟ ಸುದೀಪ್ ನೋಡಲು ಅಭಿಮಾನಿಗಳು ಮುಗಿಬಿದಿದ್ದು ದೊಡ್ಡ ದಾಂದಲೆಯೇ ನಡೆದಿದೆ.
ದಾವಣಗೆರೆ: ಜಿಲ್ಲೆಯ ರಾಜನಹಳ್ಳಿಯಲ್ಲಿನ ವಾಲ್ಮೀಕಿ ಸಮಾವೇಶದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಈ ವೇಳೆ ತನ್ನ ನೆಚ್ಚಿನ ನಟ ಸುದೀಪ್ ನೋಡಲು ಅಭಿಮಾನಿಗಳು ಮುಗಿಬಿದಿದ್ದು ದೊಡ್ಡ ದಾಂದಲೆಯೇ ನಡೆದಿದೆ. ನೂರಾರು ಕುರ್ಚಿ, ಸೋಫಾ ಸೆಟ್ ಮುರಿದು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಆಗಮಿಸಿದ್ದಾರೆ. ಈ ವೇಳೆ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು ವೇದಿಕೆ ಹತ್ತಿದ್ದಾರೆ. ಈ ವೇಳೆ ಅಭಿಮಾನಿಗಳ ನೂಕು ನುಗ್ಗಾಟದಲ್ಲಿ ಕುರ್ಚಿ, ಸೋಫಾ ಸೆಟ್ ಪೀಸ್ ಪೀಸ್ ಆಗಿದೆ.
ವಾಲ್ಮೀಕಿ ಸಮಾವೇಶದಲ್ಲಿ ಸುದೀಪ್ಗೆ ‘ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ವಾಮೀಜಿಗಳು ನಟ ಸುದೀಪ್ಗೆ ಸನ್ಮಾನ ಮಾಡಿದ್ದಾರೆ. ಆದ್ರೆ ಅಭಿಮಾನಿಗಳ ವರ್ತನೆಯಿಂದಾಗಿ ನಟ ಕೊಂಚ ಬೇಸರಗೊಂಡಿದ್ದಾರೆ.
Davangere valmiki jatre: ವಾಲ್ಮೀಕಿ ಸಮಾವೇಶದಲ್ಲಿ ಮೀಸಲಾತಿ ಬಗ್ಗೆ ಘೋಷಣೆ ಇಲ್ಲ ಎಂದ ಸತೀಶ್ ಜಾರಕಿಹೊಳಿ
Published On - 3:48 pm, Tue, 9 February 21