ಆಪರೇಷನ್ ಹಸ್ತದ ಭೀತಿ; ಪಕ್ಷದ ಶಾಸಕ, ಮುಖಂಡರೊಡನೆ ಸಭೆ ನಡೆಸಿದ ದೇವೇಗೌಡ ಮತ್ತು ಕುಮಾರಸ್ವಾಮಿ

|

Updated on: Jan 13, 2025 | 11:38 AM

ಜೆಡಿಎಸ್ ನಾಯಕರನ್ನು ಕಾಂಗ್ರೆಸ್​ಗೆ ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ನಾಯಕರು ತೊಡಗಿರುವುದು ಖಂಡಿತ ಗಾಳಿಸುದ್ದಿಯಲ್ಲ. ಇದರ ಸುಳಿವು ಕುಮಾರಸ್ವಾಮಿಗೆ ಮೊದಲಿಂದಲೂ ಇದೆ. ಗುರುಮಠಕಲ್ ಶಾಸಕ ಶರಣಗೌಡ ಕಂದ್ಕೂರ್ ಜೆಡಿಎಸ್ ಪಕ್ಷವನ್ನು ಹೆಚ್ಚುಕಡಿಮೆ ತೊರೆದೇಬಿಟ್ಟಿದ್ದರು. ನಿಖಿಲ್ ಕುಮಾರಸ್ವಾಮಿಯನ್ನು ರಾಜ್ಯಾಧ್ಯಕ್ಷ ಮಾಡುವ ಮಾತಿನಿಂದಲೂ ಜೆಡಿಎಸ್ ನಾಯಕರು ಅಸಮಾಧಾನಗೊಂಡಿದ್ದಾರೆ.

ಬೆಂಗಳೂರು: ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅನುಭವಿಸಿದ ದಯನೀಯ ಸೋಲು ಜೆಡಿಎಸ್ ಪಕ್ಷಕ್ಕೆ ಮರ್ಮಾಘಾತ ನೀಡಿದ್ದು ಸುಳ್ಳಲ್ಲ. ಪಕ್ಷದ ಕೆಲ ಶಾಸಕರು ವಿಚಲಿತರಾಗಿ ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸುತ್ತಿರುವ ವಿಷಯ ಕೂಡ ಚರ್ಚೆಯಾತ್ತಿದೆ. ಇದೇ ಹಿನ್ನೆಲೆಯಲ್ಲಿ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನಿನ್ನೆ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಶಾಸಕರ ಮತ್ತು ನಾಯಕರ ಸಭೆಯೊಂದನ್ನು ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಆಪರೇಷನ್ ಹಸ್ತ ವರ್ಕೌಟ್ ಅಗಲ್ಲ, ತಮ್ಮ ಶಾಸಕರು ಖರೀದಿಗಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಅಪಾರ ಅನುಭವ ಇರುವ ದೇವೇಗೌಡ ಮತ್ತು ಕುಮಾರಸ್ವಾಮಿ ಪಕ್ಷದ ಅಧ್ಯಕ್ಷನನ್ನು ಆಯ್ಕೆ ಮಾಡುತ್ತಾರೆ: ಜಿಟಿ ದೇವೇಗೌಡ