ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿಲ್ಲ: ಸಿಎಂ ಯಡಿಯೂರಪ್ಪ

Karnataka Leadership: ಈವರೆಗೆ ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ಏನಾದರೂ ಸೂಚನೆ ಕೊಟ್ಟರೆ ನಡೆದುಕೊಳ್ಳುತ್ತೇವೆ. ಪಕ್ಷದ ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇವೆಎಂದು ಅವರು ಸ್ಪಷ್ಟನೆ ನೀಡಿದರು.

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿಲ್ಲ: ಸಿಎಂ ಯಡಿಯೂರಪ್ಪ
Edited By:

Updated on: Jun 03, 2021 | 8:12 PM

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಇರುವ ಸುದ್ದಿಗಳೆಲ್ಲವೂ ಊಹಾಪೋಹವಾಗಿದ್ದು, ಇಂತಹ ಯಾವುದೇ ವಿಚಾರಗಳು ನಮ್ಮ ಕಣ್ಣು ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದರು. ನಾಯಕತ್ವ ವಿಚಾರದಲ್ಲಿ ಕೇಂದ್ರ ಯಾವುದೇ ‌ಸೂಚನೆ ನೀಡಿಲ್ಲ. ಈವರೆಗೆ ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ಏನಾದರೂ ಸೂಚನೆ ಕೊಟ್ಟರೆ ನಡೆದುಕೊಳ್ಳುತ್ತೇವೆ. ಪಕ್ಷದ ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇವೆಎಂದು ಅವರು ಸ್ಪಷ್ಟನೆ ನೀಡಿದರು.

ಕರ್ನಾಟಕದಲ್ಲಿ ಲಾಕ್​ಡೌನ್ ಮುಂದುವರಿಕೆ ಮತ್ತು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 1 ವಾರ ಲಾಕ್​ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದು, ಜೂನ್ 14ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲದೇ 500 ಕೋಟಿ ರೂಪಾಯಿಗಳ ಲಾಕ್​ಡೌನ್ ಪ್ಯಾಕೇಜ್​ನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮೀನುಗಾರರಿಗೆ, ಮುಜರಾಯಿ ಇಲಾಖೆ ನೋಂದಾಯಿತ ಅರ್ಚಕರು, ಮಸೀದಿಗಳ ಧಾರ್ಮಿಕ ಪೂಜಾರಿಗಳು, ಚಲನಚಿತ್ರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಪ್ಯಾಕೇಜ್ ಘೋಷಿಸಲಾಗಿದೆ.

ಎರಡನೇ ಹಂತದಲ್ಲಿ ಸುಮಾರು ₹500 ಕೋಟಿ ಪ್ಯಾಕೇಜ್​ ಘೋಷಿಸಿರುವ ಸಿಎಂ ಯಡಿಯೂರಪ್ಪ, ತಲಾ 3000ದಂತೆ ಮಗ್ಗಗಳ ಕಾರ್ಮಿಕರಿಗೆ, ಚಲನಚಿತ್ರ, ದೂರದರ್ಶನ ಕಲಾವಿದರಿಗೆ ತಲಾ ₹3000, ಮೀನುಗಾರರಿಗೆ ತಲಾ 3000 ರೂ, ಅರ್ಚಕರು, ಅಡುಗೆ ಕೆಲಸಗಾರರಿಗೆ ತಲಾ ₹3000, ಸಿ ವರ್ಗದ ದೇವಸ್ಥಾನದ ಅರ್ಚಕರು, ಅಡುಗೆ ಕೆಲಸ, ಸಹಾಯಕರು, ಮಸೀದಿ ಫೇಶಿಮಾಂ, ಮೌಂಜನ್​ಗೆ ತಲಾ ₹3000 ಆಶಾ ಕಾರ್ಯಕರ್ತೆಯರಿಗೂ ತಲಾ ತಲಾ ₹3000, ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ತಲಾ ₹2000, ಶಾಲಾ ಮಕ್ಕಳಿಗೆ ಜೂನ್, ಜುಲೈನಲ್ಲಿ ಹಾಲಿನ ಪುಡಿ ನೀಡಿಕೆ, ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ತಲಾ 5000 ರೂ. ಸಹಾಯ ಧನ ಘೋಷಿಸಿದ್ದಾರೆ.

ಪಾಸಿಟಿವಿಟಿ ರೇಟ್​ ಶೇ.5ಕ್ಕಿಂತ ಕಡಿಮೆಯಾದರೆ ರಿಲೀಫ್ ನೀಡಲಾಗುವುದು. ಲಾಕ್​ಡೌನ್​ ನಿಯಮಗಳನ್ನು ಸಡಿಲ ಮಾಡಲಾಗುವುದು. ಜನರು ಸಹಕರಿಸಿದರೆ ಲಾಕ್​ಡೌನ್​ ಸಡಿಲಿಸಲಾಗುವುದು. ಆದರೆ ಒಂದು ವಾರ ಯಾವುದೇ ಬದಲಾವಣೆ ಇಲ್ಲ ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ: ಸಚಿವ ಎಸ್​ ಟಿ ಸೋಮಶೇಖರ್ 

‘ಕೇಂದ್ರ ಸರ್ಕಾರವೇ ಕೊವಿಡ್​ 19 ಲಸಿಕೆ ಖರೀದಿಸಿ ಪೂರೈಕೆ ಮಾಡಲಿ..’-ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಒಡಿಶಾ ಸಿಎಂ

(Party High Command makes no decision on leadership change says CM Yediyurappa)