ಲೈಂಗಿಕ ದೌರ್ಜನ್ಯ ಆರೋಪ: ವಿದೇಶದಲ್ಲಿರುವ ಪ್ರಜ್ವಲ್​​ನನ್ನು ಆರ್ಥಿಕವಾಗಿ ಕಟ್ಟಿಹಾಕಲು SIT ಮಾಸ್ಟರ್​​ ಪ್ಲ್ಯಾನ್

| Updated By: ವಿವೇಕ ಬಿರಾದಾರ

Updated on: May 18, 2024 | 10:32 AM

ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಇದೀಗ, ಪ್ರಜ್ವಲ್​ ರೇವಣ್ಣ ಅವರ ಬ್ಯಾಂಕ್​ ಖಾತೆಗೆ ಬೆಂಗಳೂರಿನಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ದೊರೆತಿದೆ.

ಲೈಂಗಿಕ ದೌರ್ಜನ್ಯ ಆರೋಪ: ವಿದೇಶದಲ್ಲಿರುವ ಪ್ರಜ್ವಲ್​​ನನ್ನು ಆರ್ಥಿಕವಾಗಿ ಕಟ್ಟಿಹಾಕಲು SIT ಮಾಸ್ಟರ್​​ ಪ್ಲ್ಯಾನ್
ಪ್ರಜ್ವಲ್​ ರೇವಣ್ಣ
Follow us on

ಬೆಂಗಳೂರು, ಮೇ 18: ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿಶೇಷ ತನಿಖಾ ದಳ (SIT) ಮೋಸ್ಟ್​​ ವಾಂಟೆಡ್​ ಲಿಸ್ಟ್​ನಲ್ಲಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪಿ ಪ್ರಜ್ವಲ್​ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ. ಇತ್ತ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಈಗಾಗಲೆ ನೋಟಿಸ್ ನೀಡಿದ್ದರೂ ಕೂಡ ಪ್ರಜ್ವಲ್​ ರೇವಣ್ಣ ಮಾತ್ರ ಹಾಜರಾಗುತ್ತಿಲ್ಲ. ವಿದೇಶದಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಪ್ರಜ್ವಲ್​ ರೇವಣ್ಣ ಅವರನ್ನು ಆರ್ಥಿಕವಾಗಿ ಕಟ್ಟಿಹಾಕಲು ಎಸ್​ಐಟಿ ಪ್ಲ್ಯಾನ್ ಮಾಡಿದೆ.

ವಿದೇಶದಲ್ಲಿರುವ ಪ್ರಜ್ವಲ್​ ರೇವಣ್ಣ ಅವರ ಖಾತೆಗೆ ಬೆಂಗಳೂರಿನಿಂದ ಲಕ್ಷಾಂತರ ಹಣ ವರ್ಗಾವಣೆಯಾಗಿದೆ ಎಂದು ಮಾಹಿತಿ ಎಸ್​ಐಟಿ ಅಧಿಕಾರಿಗಳಿಗೆ ದೊರೆತಿದೆ. ಹೀಗಾಗಿ ಹಣ ವರ್ಗಾವಣೆಯಾಗದಂತೆ ತಡೆಯಲು ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಪ್ರಜ್ವಲ್​ ರೇವಣ್ಣ ಅವರ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

2 ಬಾರಿ ವಿಮಾನ ಟಿಕೆಟ್​ ಕ್ಯಾನ್ಸಲ್​

ಪ್ರಜ್ವಲ್​ ರೇವಣ್ಣ ಈಗಾಗಲೇ 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

ಪ್ರಜ್ವಲ್​ ಪೆನ್​ಡ್ರೈ ರೆಡಿ ಮಾಡಿದ್ದು ಡಿಕೆ ಶಿವಕುಮಾರ್

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌. ಹ್ಯಾಂಡಲ್​ ಮಾಡಲು ನಾಲ್ವರು ಸಚಿವರ ಸಮಿತಿ ರಚಿಸಿದ್ದರು. ಅಲ್ಲದೆ ಪೆನ್​ಡ್ರೈವ್​ ಹಂಚಿಕೆ ಮಾಡಿದ್ದು ಹೆಚ್​ಡಿ ಕುಮಾರಸ್ವಾಮಿ ಅಂತ ಹೇಳಲು ನನಗೆ 100 ಕೋಟಿ ಆಫರ್​ ನೀಡಿದ್ದರು ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಜರ್ಮಿನಿಯಿಂದ ಲಂಡನ್‌ಗೆ ಪರಾರಿಯಾದ ಪ್ರಜ್ವಲ್​ ರೇವಣ್ಣ

ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದವ ಬಂಧನ

ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯನ್ನು ಕುದುರೆಮುಖ ಠಾಣೆ ಪೊಲೀಸರು ಬಂಧಿಸಿದ್ದರು. ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ ಆರೋಪಿ. ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದನು. ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪ್ರಜ್ವಲ್​ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:13 am, Sat, 18 May 24