ವಿದ್ಯಾರ್ಥಿನಿಯರನ್ನು ಚುಡಾಯಿಸ್ತಿದ್ದ ರೋಡ್ ರೋಮಿಯೋಗೆ ಸಾರ್ವಜನಿಕರಿಂದ ಗೂಸಾ
ತುಮಕೂರು: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸ್ತಿದ್ದವನಿಗೆ ಸಾರ್ವಜನಿಕರು ಭಾರಿ ಗೂಸಾ ನೀಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ಪಟ್ಟಣದಲ್ಲಿ ನಡೆದಿದೆ. ಇಲ್ಲೊಬ್ಬ ರೋಡ್ ರೋಮಿಯೋ ತಿಪಟೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ನಿಂತು ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ರೋಡ್ ರೋಮಿಯೋಗೆ ಧರ್ಮದೇಟು ನೀಡಿದ್ದಾರೆ. ಮತ್ತೆ ಈ ರೋಮಿಯೋ ಯಾವ ಹೆಣ್ಣುಮಕ್ಕಳಿಗೂ ಈ ರೀತಿ ಚುಡಾಯಿಸುವ ಕೆಲಸಕ್ಕೆ ಹೋಗದ ರೀತಿ ಚಳಿ ಬಿಡಿಸಿದ್ದಾರೆ. ಈ ಪ್ರಕರಣ ತಿಪಟೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Follow us on
ತುಮಕೂರು: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸ್ತಿದ್ದವನಿಗೆ ಸಾರ್ವಜನಿಕರು ಭಾರಿ ಗೂಸಾ ನೀಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ಪಟ್ಟಣದಲ್ಲಿ ನಡೆದಿದೆ. ಇಲ್ಲೊಬ್ಬ ರೋಡ್ ರೋಮಿಯೋ ತಿಪಟೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ನಿಂತು ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ.
ಇದನ್ನು ಗಮನಿಸಿದ ಸಾರ್ವಜನಿಕರು ರೋಡ್ ರೋಮಿಯೋಗೆ ಧರ್ಮದೇಟು ನೀಡಿದ್ದಾರೆ. ಮತ್ತೆ ಈ ರೋಮಿಯೋ ಯಾವ ಹೆಣ್ಣುಮಕ್ಕಳಿಗೂ ಈ ರೀತಿ ಚುಡಾಯಿಸುವ ಕೆಲಸಕ್ಕೆ ಹೋಗದ ರೀತಿ ಚಳಿ ಬಿಡಿಸಿದ್ದಾರೆ. ಈ ಪ್ರಕರಣ ತಿಪಟೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.