ರಾಮನಗರದಲ್ಲಿ ನಿರ್ವಹಣೆ ಇಲ್ಲದೆ ಇ-ಶೌಚಾಲಯಗಳು ಬಂದ್; ನಗರಸಭೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ನಗರದ ಆರು ಕಡೆಗಳಲ್ಲಿ ನಿರ್ಮಾಣ ಮಾಡಿರುವ ಇ-ಶೌಚಾಲಯಗಳು ಸಾಕಷ್ಟು ವಿಶೇಷತೆಯಿಂದ ಕೂಡಿವೆ. ಈ ಶೌಚಾಲಯಗಳು ಪರಿಸರ ಸ್ನೇಹಿ ಹಾಗೂ ಸ್ವಯಂ ಚಾಲಿತ ವ್ಯವಸ್ಥೆಯನ್ನು ಒಳಗೊಂಡಿವೆ. ಸ್ವಯಂ ಸ್ವಚ್ಚತೆ ಮಾಡಿಕೊಳ್ಳಲಿವೆ. ಬಳಕೆದಾರರು ನಿಗದಿತ ದರದ ನಾಣ್ಯವನ್ನು ಹಾಕಿದ ನಂತರ ಬಾಗಿಲು ತಾನೇ ನೇರವಾಗಿ ತೆರೆದುಕೊಳ್ಳಲಿದೆ.

ರಾಮನಗರದಲ್ಲಿ ನಿರ್ವಹಣೆ ಇಲ್ಲದೆ ಇ-ಶೌಚಾಲಯಗಳು ಬಂದ್; ನಗರಸಭೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ರಾಮನಗರದಲ್ಲಿ ನಿರ್ವಹಣೆ ಇಲ್ಲದೆ ಇ-ಶೌಚಾಲಯಗಳು ಬಂದ್
Follow us
TV9 Web
| Updated By: preethi shettigar

Updated on: Jun 25, 2021 | 6:53 PM

ರಾಮನಗರ: ಜನರ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ ಕೆಲವೊಂದಿಷ್ಟು ಸರ್ಕಾರದ ಯೋಜನೆಗಳು ಹೆಸರಿಗೆ ಮಾತ್ರ ಜಾರಿಗೆ ಬಂದಿರುತ್ತದೆ. ಅವುಗಳ ಸರಿಯಾದ ಬಳಕೆಗೆ ಅವಕಾಶವಿರುವುದಿಲ್ಲ ಮತ್ತು ಸಾರ್ವಜನಿಕರು ಕೂಡ ಇಂತಹ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಸದ್ಯ ರಾಮನಗರದಲ್ಲಿಯೂ ಸರ್ಕಾರದ ಯೋಜನೆಯೊಂದು ಹಳ್ಳ ಹಿಡಿದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಇ-ಶೌಚಾಲಯಗಳು ಸದ್ಯ ಅಧಿಕಾರಿಗಳು ನಿರ್ಲಕ್ಷದಿಂದ ನಿರ್ವಹಣೆ ಇಲ್ಲದೆ ಬಂದ್ ಆಗಿವೆ. ಇ-ಶೌಚಾಲಯಗಳ ನಿರ್ಮಾಣಕ್ಕೆ ವಿನಿಯೋಗಿಸಿದ್ದ ಲಕ್ಷಾಂತರ ರೂಪಾಯಿ ಹಣ ಪೋಲಾಗುತ್ತಿದೆ ಎಂದು ಜನರು ವಿರೋಧಿಸಿದ್ದಾರೆ.

ರಾಮನಗರದಲ್ಲಿ ಜನರ ಉಪಯೋಗಕ್ಕೆಂದು ನಿರ್ಮಾಣ ಮಾಡಿರುವ ಇ-ಶೌಚಾಲಯಗಳು ನಿರ್ವಹಣೆಯೇ ಇಲ್ಲದೆ ಹಾಳಾಗಿವೆ. ಇವುಗಳ ನಿರ್ಮಾಣಕ್ಕೆಂದು ಲಕ್ಷಾಂತರ ರೂಪಾಯಿ ವ್ಯಯಿಸುದ್ದು, ಉಪಯೋಗಕ್ಕೆ ಬಾರದಂತೆ ಆಗಿದೆ. ರಾಮನಗರ ನಗರದಲ್ಲಿ ಸುಮಾರು 6 ಕಡೆಗಳಲ್ಲಿ ನಗರಸಭೆಯ 14ನೇ ಹಣಕಾಸು ಯೋಜನೆಯ ಅಡಿ ಇ-ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಶೌಚಾಲಯಕ್ಕೂ ಸುಮಾರು 7ರಿಂದ 8 ಲಕ್ಷ ರೂಪಾಯಿಗಳನ್ನ ವ್ಯಯಿಸಲಾಗಿದೆ.

ಬೆಂಗಳೂರಿನ ಎನ್. ಕೆ.ಮೆಟಲ್​ಶೀಟ್ ಸಂಸ್ಥೆಯು ಈ ಶೌಚಾಲಯಗಳನ್ನು ನಿರ್ಮಾಣ ಮಾಡಿತ್ತು. ಪ್ರಾರಂಭದಲ್ಲಿ ನಿರ್ವಹಣೆಯನ್ನು ಕಂಪನಿ ಮಾಡಿದ್ದು, ನಂತರ ಈ ಜವಾಬ್ದಾರಿಯನ್ನು ನಗರಸಭೆ ವಹಿಸಬೇಕಿತ್ತು. ಆದರೆ ನಗರಸಭೆ ಇದರ ನಿರ್ವಹಣೆ ಮಾಡದೆ ಇರುವುದರಿಂದ ಎಲ್ಲ ಶೌಚಾಲಯಗಳು ಮುಚ್ಚಿವೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಸಾರ್ವಜನಿಕರು ಶೌಚಾಲಯಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ಇದೆ ಎಂದು ಸ್ಥಳೀಯರಾದ ವಿನೋದ್ ತಿಳಿಸಿದ್ದಾರೆ.

ನಗರದ ಆರು ಕಡೆಗಳಲ್ಲಿ ನಿರ್ಮಾಣ ಮಾಡಿರುವ ಇ-ಶೌಚಾಲಯಗಳು ಸಾಕಷ್ಟು ವಿಶೇಷತೆಯಿಂದ ಕೂಡಿವೆ. ಈ ಶೌಚಾಲಯಗಳು ಪರಿಸರ ಸ್ನೇಹಿ ಹಾಗೂ ಸ್ವಯಂ ಚಾಲಿತ ವ್ಯವಸ್ಥೆಯನ್ನು ಒಳಗೊಂಡಿವೆ. ಸ್ವಯಂ ಸ್ವಚ್ಚತೆ ಮಾಡಿಕೊಳ್ಳಲಿವೆ. ಬಳಕೆದಾರರು ನಿಗದಿತ ದರದ ನಾಣ್ಯವನ್ನು ಹಾಕಿದ ನಂತರ ಬಾಗಿಲು ತಾನೇ ನೇರವಾಗಿ ತೆರೆದುಕೊಳ್ಳಲಿದೆ. ಒಳಗೆ ವಿದ್ಯುತ್ ದೀಪ, ಪುಟ್ಟ ಫ್ಯಾನ್, ಮೂರು ನಿಮಿಷ ಶೌಚಾಲಯ ಬಳಸಿದರೆ 1.5 ಲೀಟರ್ ಹರಿಯುತ್ತದೆ. ಇಷ್ಟೆಲ್ಲ ವ್ಯವಸ್ಥೆ ಈ ಶೌಚಾಲಯದಲ್ಲಿ ಇದೆ. ಆದರೆ ಇಂತಹ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಅಧಿಕಾರಿಗಳು ಬಂದ್ ಮಾಡಿದ್ದಾರೆ.

ಇನ್ನು ಈ ಬಗ್ಗೆ ಸಂಬಂಧಪಟ್ಟ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಬ್ರಮಣ್ಯ ಅವರನ್ನು ಕೇಳಿದರೆ ಸಣ್ಣಪುಟ್ಟ ನಿರ್ವಹಣೆಯ ಕಾರ್ಯಗಳು ಚಾಲ್ತಿಯಲ್ಲಿವೆ. ಹೀಗಾಗಿ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಇ-ಶೌಚಾಲಯಗಳು ಜನರ ಉಪಯೋಗಕ್ಕೆ ಬಾರದ ಬಂದ್ ಆಗಿದೆ. ಇನ್ನಾದರೂ ರಾಮನಗರ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದ್ದು, ಜನರಿಗೆ ನೆರವಾಗುವ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ:

ಅಕಿರಾ ಮಿಯಾವಾಕಿ ಕಿರು ಅರಣ್ಯ ಪದ್ಧತಿ ಅನುಷ್ಠಾನ: ಅರಣ್ಯ ಬೆಳೆಸುವ ಯೋಜನೆಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ 

BBMP Budget 2021-22: ತೆರಿಗೆ ಹೆಚ್ಚಳ ಇಲ್ಲ, ಕೆ.ಆರ್. ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತ.. ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ