ಬೆಣ್ಣೆನಗರಿ: 150 ಎಕರೆ ಜಮೀನು ಪುಕ್ಸಟ್ಟೆಯಾಗಿ ಸಿಗ್ತಿದೆ ಅಂತಾ ಸುದ್ದಿ ಕೇಳಿ ಓಡೋಡಿ ಬಂದ ಜನರು, ಮುಂದೇನಾಯ್ತು?

ಪುಕ್ಸಟ್ಟೆ ಜಾಗ ಸಿಗುತ್ತಿದೆ ಎಂಬ ವದಂತಿ ನಂಬಿ ಜನರು ಮರುಳಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ನಡೆದಿದೆ. ಪುಕ್ಸಟ್ಟೆ ಜಾಗ ಪಡೆಯಲು ಜನರು ಓಡೋಡಿ ಬಂದ ಘಟನೆ ಬೆಳಕಿಗೆ ಬಂದಿದೆ.

ಬೆಣ್ಣೆನಗರಿ: 150 ಎಕರೆ ಜಮೀನು ಪುಕ್ಸಟ್ಟೆಯಾಗಿ ಸಿಗ್ತಿದೆ ಅಂತಾ ಸುದ್ದಿ ಕೇಳಿ ಓಡೋಡಿ ಬಂದ ಜನರು, ಮುಂದೇನಾಯ್ತು?
ಜಮೀನು ಪುಕ್ಸಟ್ಟೆಯಾಗಿ ಸಿಗ್ತಿದೆ ಅಂತಾ ಸುದ್ದಿ ಕೇಳಿ ಓಡೋಡಿ ಬಂದ ಜನರು
Follow us
KUSHAL V
|

Updated on: Jan 31, 2021 | 4:42 PM

ದಾವಣಗೆರೆ: ಪುಕ್ಸಟ್ಟೆ ಜಾಗ ಸಿಗುತ್ತಿದೆ ಎಂಬ ವದಂತಿ ನಂಬಿ ಜನರು ಮರುಳಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ನಡೆದಿದೆ. ಪುಕ್ಸಟ್ಟೆ ಜಾಗ ಪಡೆಯಲು ಜನರು ಓಡೋಡಿ ಬಂದ ಘಟನೆ ಬೆಳಕಿಗೆ ಬಂದಿದೆ.

ಏನಿದು ‘ಪುಕ್ಸಟ್ಟೆ’ ಪ್ರಕರಣ? ಅಂದ ಹಾಗೆ, ಚಿಕ್ಕುಲಿಕೆರೆ ಗ್ರಾಮದ ಬಳಿ ಸುಮಾರು 150 ಎಕರೆ ಜಮೀನನ್ನು ಉಚಿತವಾಗಿ ಹಂಚಲಾಗುತ್ತಿದೆ ಎಂಬ ವದಂತಿ ಕೇಳಿಬಂದಿತ್ತು. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುರಸಭೆ ಸದಸ್ಯರು ಹೇಳಿದ್ದಾರೆ ಎಂಬ ಈ ಸುಳ್ಳು ಸುದ್ದಿ ಸಿಕ್ಕಾಪಟ್ಟೆ ರೌಂಡ್ಸ್​ ಹೊಡಿಯೋಕೆ ಶುರುಮಾಡಿತು.

ಇದನ್ನು ನಂಬಿದ ಕೆಲವರು, ಪಾಪ, ಹೊಡೀತಪ್ಪಾ ಲಾಟರಿ ಅಂತಾ ಖಾಲಿ ಜಾಗಕ್ಕೆ ಬೇಲಿ ಹಾಕಲು ಎದ್ನೋ ಬಿದ್ನೋ ಅಂತಾ ಅಲ್ಲಿಗೆ ಓಡೋಡಿ ಬಂದರು. ಆದರೆ, ಸುಳ್ಳು ಸುದ್ದಿಯನ್ನ ನಂಬಿ ಓಡೋಡಿ ಬಂದಿದ್ದ ಜನರಿಗೆ ಅಲ್ಲಿ ಶಾಕ್​ ಕಾದಿತ್ತು.

ಹೌದು, ಖಾಲಿ ಜಾಗದಲ್ಲಿ ಬೇಲಿ ಹಾಕಲು ಮುಂದಾಗಿದ್ದ ಜನರನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲಿ ಜಮೀನು ಹಂಚಿಕೆ ಮಾಡ್ತಿಲ್ಲ. ಎಲ್ಲರೂ ಹೋಗಿ ಅಂತಾ ಜನರನ್ನ ವಾಪಸ್ ಕಳಿಸಿದರು. ಆಗ, ಕೈಗೆ ಸಿಕ್ಕ ಜಮೀನು ಬೇಲಿ ಹಾಕಲು ಸಿಗಲಿಲ್ಲ ಎಂದು ಜನರು ಬೇಸರಗೊಂಡು ಹೊರಟುಹೋದರು.

ಲಾಠಿಚಾರ್ಜ್ ಖಂಡಿಸಿ ಠಾಣೆಯ ಮುಂದೆ ಧರಣಿ: ಶಾಸಕ ಶರತ್ ಬಚ್ಚೇಗೌಡ ಸೇರಿ 15 ಜನರ ವಿರುದ್ಧ FIR

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ