ಮಡಿಕೇರಿಯಲ್ಲಿ ಹಸುಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಹಸುವನ್ನು ಕೊಂದ ದುಷ್ಕರ್ಮಿಗಳನ್ನ ಹಿಡಿಯಲು 50ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ನಾಲ್ಕು ದಿಕ್ಕುಗಳಲ್ಲಿ ಸುತ್ತುವರಿದಿದ್ದರು. ಆದರೆ ಹಿಂದೂ ಕಾರ್ಯಕರ್ತನ ಎದೆಗೆ ಬಂದೂಕು ಇಟ್ಟಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮಡಿಕೇರಿಯಲ್ಲಿ ಹಸುಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಸಾವನ್ನಪ್ಪಿರುವ ಹಸು

ಮಡಿಕೇರಿ: ಹಸುವಿಗೆ ಗುಂಡಿಕ್ಕಿ ಕೊಂದು, ಮಾಂಸವನ್ನು ಹೊತ್ತೊಯ್ದಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಸಂಭವಿಸಿದೆ. ಹಸುವನ್ನು ಕೊಂದ ದುಷ್ಕರ್ಮಿಗಳನ್ನ ಹಿಡಿಯಲು 50ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ನಾಲ್ಕು ದಿಕ್ಕುಗಳಲ್ಲಿ ಸುತ್ತುವರಿದಿದ್ದರು. ಆದರೆ ಹಿಂದೂ ಕಾರ್ಯಕರ್ತನ ಎದೆಗೆ ಬಂದೂಕು ಇಟ್ಟಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಾರದ ಹಿಂದಷ್ಟೇ ಇದೇ ಗ್ರಾಮದಲ್ಲಿ ಗೋ ಹತ್ಯೆ ನಡೆದಿತ್ತು. ಆದರೆ ಇನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಹೀಗಾಗಿ ಪೊಲೀಸರ ವಿರುದ್ಧ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ತಂತಿ ಸ್ಪರ್ಶ, ವ್ಯಕ್ತಿ ದುರ್ಮರಣ
ಮೈಸೂರು: ಟ್ರ್ಯಾಕ್ಟರ್​ಗೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಕೊಳವೆ ಬಾವಿಗೆ ಮೋಟಾರ್ ಅಳವಡಿಸುವಾಗ ಜಿಲ್ಲೆಯ ನಂಜನಗೂಡು ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೋಟಾರ್ ರಿಪೇರಿ ಆಪರೇಟರ್ ಲೋಕೇಶ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಾಯಕ ಮುದ್ದುಮಾದೇಗೌಡಗೆ ಗಂಭೀರ ಗಾಯವಾಗಿದೆ. ರೈತ ನಾಗರಾಜು ಜಮೀನಿಗೆ ಹೊಸದಾಗಿ ಮೋಟರ್ ಅಳವಡಿಸುವ ವೇಳೆ ಅವಘಡ ನಡೆದಿದೆ. ಸದ್ಯ ಈ ಪ್ರಕರಣ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಿಂತ ಕಾರುಗಳ ಮೇಲೆ ಕಲ್ಲು ತೂರಾಟ
ತುಮಕೂರು: ರಸ್ತೆ ಬದಿ ನಿಂತ ಕಾರುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ತುಮಕೂರಿನ ಶ್ರೀರಾಮನಗರ, ಆರ್.ಟಿ ನಗರದಲ್ಲಿ 10ಕ್ಕೂ ಹೆಚ್ಚು ಕಾರುಗಳ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯಕ್ಕೆ ಕಾರು ಮಾಲೀಕರು ಬೆಚ್ಚಿಬಿದ್ದಿದ್ದಾರೆ.

car damage

ಕಾರಿನ ಗ್ಲಾಸ್​ ಪುಡಿ ಪಡಿಯಾಗಿದೆ

ಇದನ್ನೂ ಓದಿ

ಅಪಘಾತದಲ್ಲಿ ಮೃತಪಟ್ಟ ಮರಿ ಕುದುರೆಗಾಗಿ ಹಂಬಲಿಸಿದ ತಾಯಿ ಕುದುರೆ; ಸಂಜೆವರೆಗೂ ರಸ್ತೆಯಲ್ಲೇ ನಿಂತ ದೃಶ್ಯ ಮೊಬೈಲ್​ನಲ್ಲಿ ಸೆರೆ

ದಾವಣಗೆರೆಯಲ್ಲಿ ಒಂದು ಮಗುವಿಗೆ MIS-C ಸೋಂಕಿನ ಲಕ್ಷಣ ಪತ್ತೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಮಾಹಿತಿ

(perpetrators have shot and killed the cow in Madikeri)

Click on your DTH Provider to Add TV9 Kannada