ಬಿಬಿಎಂಪಿ ಚುನಾವಣೆ ಮುಂದೂಡಲು ಕೋರ್ಟ್​ಗೆ ಅರ್ಜಿ ಹಾಕಿಲ್ಲ; ಶಾಸಕ ಸತೀಶ್ ರೆಡ್ಡಿ ಸ್ಪಷ್ಟನೆ

ಬಿಬಿಎಂಪಿ ಚುನಾವಣೆ ಮುಂದೂಡಲು ಯಾವುದೇ ಅರ್ಜಿ ಹಾಕಿಲ್ಲ, ನನ್ನ ಮತದಾರರನ್ನು ನನ್ನ ಕ್ಷೇತ್ರದಲ್ಲಿ ಉಳಿಸಲು ಕೋರ್ಟ್​ ಮುಂದೆ ಮನವಿ ಇಟ್ಟಿದ್ದೇನೆ ಎಂದು ಶಾಸಕ ಎಂ.ಸತೀಶ್​ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಬಿಬಿಎಂಪಿ ಚುನಾವಣೆ ಮುಂದೂಡಲು ಕೋರ್ಟ್​ಗೆ ಅರ್ಜಿ ಹಾಕಿಲ್ಲ; ಶಾಸಕ ಸತೀಶ್ ರೆಡ್ಡಿ ಸ್ಪಷ್ಟನೆ
ಶಾಸಕ ಎಂ.ಸತೀಸ್ ರೆಡ್ಡಿ
Edited By: Rakesh Nayak Manchi

Updated on: Sep 10, 2022 | 9:29 AM

ಬೆಂಗಳೂರು: ಬಿಬಿಎಂಪಿ ಚುನಾವಣೆ ಹಾಗೂ ವಾರ್ಡ್ ವಿಂಗಡಣೆ ವಿಚಾರದಲ್ಲಿ ಪರ-ವಿರೋಧಗಳು ವ್ಯಕ್ತವಾಗಿದ್ದು, ತಮ್ಮ ಮತದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜನಪ್ರತಿನಿಧಿಗಳು ಇದ್ದಾರೆ. ಆದರೀಗ ಚುನಾವಣೆ ಮುಂದೂಡುವಂತೆ ಕೋರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಅವರು, ಚುನಾವಣೆ ಮುಂದೂಡಲು ಯಾವುದೇ ಅರ್ಜಿ ಹಾಕಿಲ್ಲ, ನನ್ನ ಮತದಾರರನ್ನು ನನ್ನ ಕ್ಷೇತ್ರದಲ್ಲಿ ಉಳಿಸಲು ಕೋರ್ಟ್​ ಮುಂದೆ ಮನವಿ ಇಟ್ಟಿದ್ದೇನೆ ಎಂದಿದ್ದಾರೆ.

ಬಿಬಿಎಂಪಿ ಚುನಾವಣೆ ಮುಂದೂಡಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ವಿಚಾರ ಸಂಬಂಧ ಸ್ಪಷ್ಟನೆ ನೀಡಿದ ಬೊಮ್ಮನಹಳ್ಳಿ ಶಾಸಕ‌ ಸತೀಶ್ ರೆಡ್ಡಿ, ಪಾಲಿಕೆಯ ಚುನಾವಣೆಯನ್ನು ಮುಂದೂಡಲು ಯಾವುದೇ ಅರ್ಜಿ ಹಾಕಿಲ್ಲ. ನನ್ನ ಮತದಾರರನ್ನು ನನ್ನ ಕ್ಷೇತ್ರದಲ್ಲಿ ಉಳಿಸಿಕೊಡಲು ಬಿಬಿಎಂಪಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರ್ಟ್ ಮೊರೆ ಹೋಗಿದ್ದೇನೆ ಎಂದರು.

ತಮ್ಮ ಕ್ಷೇತ್ರದ ಮತದಾರರನ್ನು ತಮ್ಮದೇ ಕ್ಷೇತ್ರದಲ್ಲಿ ಉಳಿಸಿಕೊಡುವಂತೆ ಈ ಹಿಂದೆ ಬಿಬಿಎಂಪಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ಶಾಸಕರು ಮನವಿ ಮಾಡಿದ್ದರು. ಆದರೆ ಮತದಾರರ ಪಟ್ಟಿ ಪರಿಷ್ಕೃತ ಗೊಳಿಸದ ಹಿನ್ನೆಲೆ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸತೀಶ್ ರೆಡ್ಡಿ ಕ್ಷೇತ್ರದಲ್ಲಿ ಸುಮಾರು 7500‌ ಮತದಾರರು ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದಾರೆ.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 am, Sat, 10 September 22

Web contact

TV9 Kannada

Read More
Follow Us