
ದಿವಂಗತ ಕೆ ಮಲ್ಲಪ್ಪನವರ ಸವಿನೆನೆಪುಗಾಗಿ ಅಂತರ್ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಪೈಲ್ವಾನ್ ವೀರೇಶ್ ಅಭಿಮಾನಿ ಬಳಗದ ವತಿಯಿಂದ ಆಯೋಜನೆ ಮಾಡಲಾಗಿತ್ತು

24 ಜೋಡಿ ಜಂಗಿ ಕುಸ್ತಿ, ಬಯಲು ಕುಸ್ತಿ ಪಂದ್ಯಾವಳಿಯನ್ನು ನಡೆಸಿದ್ದರು. ತೂಕದ ಮೇಲೆ ಜೊತೆ ಮಾಡಿ ಕುಸ್ತಿಯನ್ನು ಆಡಿಸಲಾಗುತ್ತದೆ. ಹೀಗೆ ನಿರಂತರವಾಗಿ ಕಸರತ್ತು ಮಾಡುತ್ತಿರುವ ಯುವಕರಿಗೆ ಪ್ರಶಸ್ತಿ ಇರುತ್ತದೆ.

ಈ ಪಂದ್ಯವಾಳಿಯಲ್ಲಿ ಮಹಾರಾಷ್ಟ್ರದಿಂದ ಕುಸ್ತಿಪಟುಗಳು ಭಾಗವಹಿಸಿದ್ದಾರೆ. ಬಾಗಲಕೋಟೆ. ಶಿವಮೊಗ್ಗ. ಹಾವೇರಿ, ಬೆಳಗಾವಿ, ಗದಗ, ಬಳ್ಳಾರಿ ಇನ್ನೂ ವಿವಿಧ ಜಿಲ್ಲೆಗಳ ಕುಸ್ತಿಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ದಾವಣಗೆರೆ ಪೈಲ್ವಾನರು ಎಂದರೆ ಮೈಸೂರು ದಸರಾದಲ್ಲಿ ಪ್ರಸಿದ್ಧಿ ಪಡೆದವರು. ಜೊತೆಗೆ ಗಲ್ಲಿಗೊಂದು ಗರಡಿ ಮನೆ ಈ ನಗರದಲ್ಲಿವೆ. ಇಂತಹ ನಗರದ ಕುಸ್ತಿ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.

ದಾವಣಗೆರೆ ನಗರದಲ್ಲಿ ಕುಸ್ತಿ ಕಲಿತವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಉದಾಹರಣೆಗಳಿವೆ. ಹೀಗಾಗಿ ದಾವಣಗೆರೆ ಕುಸ್ತಿ ಇತಿಹಾಸ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುತ್ತಿದೆ.

ಹಳ್ಳಿಗಳಿಂದ ಬರುವ ಹುಡುಗರನ್ನು ಮಮತೆಯಿಂದ ಕುಸ್ತಿ ಪಟುವಾಗಿ ಬೆಳೆಸುತ್ತಿದ್ದಾರೆ. ಈ ಹಾಸ್ಟೇಲ್ನ ರಫೀಕ್ ಕೋಳಿ ಎಂಬ ಕುಸ್ತಿ ಪಟು ಕೂಡ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕುಸ್ತಿ ತರಬೇತುದಾರರಾದ ಶಿವಾನಂದ ಹೇಳಿದ್ದಾರೆ.

ದಾವಣಗೆರೆಯಲ್ಲಿ ಚಾರ್ಲಿ ಪೈಲ್ವಾನ್ ಸೇರಿದ ದೊಡ್ಡ ಇತಿಹಾಸವೇ ಇರುವ ಕುಸ್ತಿ ಪೈಲ್ವಾನ್ಗಳಿದ್ದಾರೆ. ಇವರಿಗಾಗಿಯೇ ಕುಸ್ತಿ ಜೀರ್ಣೋದ್ಧಾರ ಸಮಿತಿ ಸಹ ಇಲ್ಲಿದೆ.

ಕಳೆದ ದಸರಾದಲ್ಲಿ ಇಲ್ಲಿನ ಕ್ರೀಡಾಪಟು ದಸರಾ ಕೆಸರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ದಿವಂಗತ ಕೆ ಮಲ್ಲಪ್ಪನವರು ಸಹ ಕುಸ್ತಿಪಟ್ಟುವಾಗಿದ್ದರು, ಅಲ್ಲದೇ ನೂರಾರು ಕುಸ್ತಿ ಪಟುಗಳಿಗೆ ಕುಸ್ತಿ ಕಲಿಸಿ ಕುಸ್ತಿ ಆಡಿಸಿದ್ದರು. ದಿವಂಗತ ಕೆ ಮಲ್ಲಪ್ಪನವರ ಸವಿನೆನೆಪಿಗಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದಾರೆ.