ನವದೆಹಲಿ/ಬೆಂಗಳೂರು, (ಮೇ.02): ಲೋಕಸಭಾ ಚುನಾವಣೆಯಲ್ಲಿ(Loksabha Elections 2024) ಪ್ರಧಾನಿ ನರೇಂದ್ರ ಮೋದಿ (Narednra Modi) ಅವರು ಕಾಂಗ್ರೆಸ್ (Congress) ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ಪ್ರಚಾರದ ವೇಳೆ ಕರ್ನಾಟಕದಲ್ಲಿ ಮುಸ್ಲಿಮರಿಗೆ (Muslim) ಒಬಿಸಿ ಮೀಸಲಾತಿ ನೀಡಿರುವುದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಟಿವಿ9 ಸಂದರ್ಶನದಲ್ಲೂ ಸಹ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ನೀಡಿರುವುದನ್ನು ಪ್ರಸ್ತಾಪಿ, ಅಧಿಕಾರದ ತುಷ್ಠೀಕರಣಕ್ಕಾಗಿ ಒಬ್ಬರು ಸಂವಿಧಾನವನ್ನ ಉಪಯೋಗ ಮಾಡಿಕೊಂಡ್ರು. ಇನ್ನೊಬ್ಬರು ವೋಟ್ಬ್ಯಾಂಕ್ ರಾಜಕಾರಣಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಮಸ್ಲಿಮರಿಗೆ ಮೀಸಲಾತಿ ನೀಡಿರುವ ಬಗ್ಗೆ ಮಾತನಾಡಿದ ಮೋದಿ, SC,ST,OBC ಅವರಿಗೆ ಸಂವಿಧಾನದ ಮೂಲಕ ಮೀಸಲಾತಿ ಸಿಕ್ಕಿದೆ. ಇದನ್ನ ಕಸಿದುಕೊಳ್ಳಲು ವಿವಿಧ ಮಾರ್ಗವನ್ನ ಹುಡುಕಲಾಗುತ್ತಿದ್ದು, ಅವರು (ಕಾಂಗ್ರೆಸ್) ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಮುಂದಾಗಿದ್ದಾರೆ. ಯಾವಾಗ ಸಂವಿಧಾನ ರಚನೆ ಆಯ್ತೋ, ತಿಂಗಳು ಗಟ್ಟಲೇ ಚರ್ಚೆ ನಡೆದಿದ್ದು, ದೇಶದ ತಜ್ಞರು, ಪಂಡಿತರು ಚರ್ಚೆ ಮಾಡಿ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಬಾರದೆಂದು ಹೇಳಿದ್ದರು. ಆದ್ರೆ ಇವರು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಯಾಕೆ ಓಡಾಡುತ್ತಿದ್ದಾರೆ.
ಇದನ್ನೂ ಓದಿ: PM Modi Interview: 25 ವರ್ಷದ ರಾಜಕೀಯದಲ್ಲಿ ನನಗೆ ಒಂದೂ ಕಪ್ಪು ಚುಕ್ಕಿ ಅಂಟಿಲ್ಲ; ಪ್ರಧಾನಿ ಮೋದಿ
ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ. ಕರ್ನಾಟಕದಲ್ಲಿ ಏನ್ ಮಾಡಿದ್ರು, ಅವರು ರಾತ್ರೋರಾತ್ರಿ ಪತ್ವಾ ಹೊರಡಿಸಿ ಎಲ್ಲಾ ಮುಸ್ಲಿಮರನ್ನು OBC ಮಾಡಿದ್ದಾರೆ. ಶೇ27ರಷ್ಟು ಒಬಿಸಿಗೆ ಮೀಸಲಾತಿ ಇತ್ತೋ, ಅದರ ದೊಡ್ಡ ಪಾಲುದಾರರು ಮುಸ್ಲಿಮರು ಆಗಿದ್ದಾರೆ. ಇವರ ಅರ್ಥದಲ್ಲಿ ಸಂವಿಧಾನ ಒಂದು ಇವರಿಗೆ ಆಟವಾಗಿದೆ ಕಾಂಗ್ರೆಸ್ ನಡೆಯನ್ನು ಕಟುವಾಗಿ ಟೀಕಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 pm, Thu, 2 May 24