AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Interview with PM Modi: ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮೋದಿ ವಾಗ್ದಾಳಿ

ಪ್ರಧಾನಿ ಮೋದಿ ಸಂದರ್ಶನ: ದೇಶದ ನಂಬರ್ 1 ನ್ಯೂಸ್ ನೆಟ್​ವರ್ಕ್​ ಟಿವಿ9ನ ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ಗುಜರಾತಿ, ಮರಾಠಿ ಮತ್ತು ಬಾಂಗ್ಲಾ ಭಾಷೆ ಚಾನೆಲ್​ಗಳ ಸಂಪಾದಕರು ಪ್ರಧಾನಿ ಮೋದಿಯವರ ಸಂದರ್ಶನ ನಡೆಸಿದ್ದು, ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಮುಸ್ಲಿಮರಿಗೆ ಓಬಿಸಿ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:May 02, 2024 | 10:51 PM

Share

ನವದೆಹಲಿ/ಬೆಂಗಳೂರು, (ಮೇ 02): ಲೋಕಸಭಾ ಚುನಾವಣೆ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಂಬರ್ 1 ನ್ಯೂಸ್ ನೆಟ್​ವರ್ಕ್​ ಟಿವಿ9ನ ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ಗುಜರಾತಿ, ಮರಾಠಿ ಮತ್ತು ಬಾಂಗ್ಲಾ ಭಾಷೆ ಚಾನೆಲ್​ಗಳಿಗೆ ಸಂದರ್ಶನ ನೀಡಿದರು. ಕನ್ನಡ ಚಾನೆಲ್​ನಿಂದ ರಂಗನಾಥ್ ಭಾರಧ್ವಾಜ್ ಸಹ ಮೋದಿ ಅವರ ಸಂದರ್ಶನ ಮಾಡಿದ್ದು, ಈ ವೇಳೆ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆ ಮೋದಿ ಮಾತನಾಡಿದರು, ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ವೋಟ್ ಬ್ಯಾಂಕ್ ಸಲುವಾಗಿ ಮುಸ್ಲಿಮರಿಗೆ ಓಬಿಸಿ ಮೀಸಲಾತಿ ನೀಡಿದ್ದಾರೆ ಎಂದು ಕಿಡಿಕಾರಿದರು.

ಪ್ರಶ್ನೆ: ಕರ್ನಾಟಕದಲ್ಲಿ ಐದು ಗ್ಯಾರಂಟಿ, ಐದು ಗ್ಯಾರಂಟಿಯಿಂದ ದೇಶಾದ್ಯಂತ 25 ಗ್ಯಾರಂಟಿ ವರೆಗೂ ಬಂದಿದ್ದಾರೆ. ಮುಂದೆ ಏನಾಗಬಹುದು?

ನರೇಂದ್ರ ಮೋದಿ: ಯಾವಾಗ ಅವರದ್ದು ಏನೂ ನಡೆಯೋದಿಲ್ಲ ಎಂದು ಗೊತ್ತಾಗುತ್ತದೆಯೋ ಆಗ ಜನರ ಗಮನ ಬೇರೆಡೆ ಸೆಳೆಯಲು ಹೊಸ ಹೊಸ ವಿಷಯಗಳನ್ನ ಜೋಡಿಸುತ್ತಾರೆ. ಹೀಗಾಗಿ ಅವರು, ನೀವು ನೋಡಿರಬಹುದು. ಒಂದು ಮಗು ನಿಮ್ಮ ಕನ್ನಡಕವನ್ನ ಕೈಯಲ್ಲಿ ಹಿಡಿಕೊಂಡಿದ್ರೆ, ಆಗ ನಿಮಗೆ ಅನಿಸುತ್ತದೆ ಆ ಮಗು ಕೈಯಲ್ಲಿ ಹಿಡಿದ ಕನ್ನಡಕವನ್ನ ಒಡೆದು ಹಾಕಬಹುದೆಂದು. ಆಗ ನೀವೇನು ಮಾಡ್ತೀರಿ, ಆ ಮಗುವಿನ ಮುಂದೆ ಒಂದು ಬಾಲ್ ತಂದು ಎದುರಿಗೆ ಇಡುತ್ತೀರಿ. ಆಗ ಮಗು ಕನ್ನಡಕವನ್ನ ಬಿಟ್ಟು ಬಾಲ್​ಅನ್ನ ಹಿಡಿದುಕೊಳ್ಳುತ್ತದೆ. ಇವರು(ಕಾಂಗ್ರೆಸ್) ಇದೇ ರೀತಿ ಮನಸ್ಥಿತಿಯ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ದೇಶದ ಜನರು ತುಂಬಾ ತಿಳಿವಳಿಕೆ ಉಳ್ಳವರಾಗಿದ್ದಾರೆ ಎನ್ನುವುದ ಕಾಂಗ್ರೆಸ್​ನವರಿಗೆ ಗೊತ್ತಿಲ್ಲ. ಇವರ ಪ್ರತಿಯೊಂದು ಆಟವನ್ನೂ ಬಲ್ಲವರಾಗಿದ್ದಾರೆ. ಅವರು ಐದು ಗ್ಯಾರಂಟಿ ತರಲಿ, 25 ಗ್ಯಾರಂಟಿ ತರಲಿ, 75 ಗ್ಯಾರಂಟಿ ತರಲಿ. ಏನೇ ಅಸಂಬದ್ಧ ಕೆಲಸ ಮಾಡಲಿ ಅದು ಜನ ಮನ ಗೆಲ್ಲುವುದಿಲ್ಲ. ಕೇವಲ ಇದಕ್ಕಾಗಿ ಟಿವಿಗಳಲ್ಲಿ ಅವರಿಗೆ ಜಾಗ ಸಿಗಬಹುದು. ಆದ್ರೆ ಜಮೀನಿನಲ್ಲಿ ಸಿಗಲ್ಲ. ಜನರ ಮನಸ್ಸಿನಲ್ಲಿ ಇದಕ್ಕೆ ಜಾಗ ಸಿಗುವುದಿಲ್ಲ ಎಂದು ಕಾಂಗ್ರೆಸ್​ ಗ್ಯಾರಂಟಿಗಳ ವಿರುದ್ಧ ಹರಿಹಾಯ್ದರು.

ಇನ್ನೊಂದೆಡೆ ಅವರು ಯಾವ ಯಾವ ರೀತಿ ಗ್ಯಾರಂಟಿ ಕೊಟ್ಟಿದ್ದಾರೆ ಅಂದ್ರೆ, ಒಂದು ಜಾಗದಲ್ಲಿ, ಒಂದು ಚುನಾವಣೆಯಲ್ಲಿ ಅವರು ತಾರೀಖನ್ನ ಎಣಿಸಿ ಒಂದು, ಎರಡು ಈ ರೀತಿ 10 ದಿನದಲ್ಲಿ ಇದಾಗುತ್ತದೆ ಎಂದು ಹೇಳಿದ್ದಾರೆ. ಆದ್ರೆ ಐದು ವರ್ಷ ಅಲ್ಲಿ ಅವರದ್ದೇ ಸರ್ಕಾರ ಇತ್ತು ಆದ್ರೆ ಅವರು ಹೇಳಿದ್ದು ಆಗಲೇ ಇಲ್ಲ. ಹೀಗಾಗಿ ಜನರಿಗೆ ಅವರ ಬಗ್ಗೆ ಅವಿಶ್ವಾಸ ಮೂಡುತ್ತದೆ. ದೌರ್ಭಾಗ್ಯ ಏನಂದ್ರೆ ಸಾರ್ವಜನಿಕ ಜೀವನದಲ್ಲಿ, ರಾಜಕೀಯ ನಾಯಕರ ಶಬ್ಧಗಳ ತಾಕತ್ತು ಈ ಮಟ್ಟದಲ್ಲಿ ಅಂತ್ಯವಾಗಿದೆ ಅಂದ್ರೆ, ನಮ್ಮ ಜನರು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಅವರ ಮಟ್ಟಕ್ಕೆ ನಾನು ಇಲ್ಲ. ನಾನು ಏನ್ ಹೇಳುತ್ತೇನೋ ಅದನ್ನ ಮಾಡುತ್ತಿದ್ದೀನಿ ಎಂದರು.

ರಂಗನಾಥ್ ಭಾರಧ್ವಾಜ್: ನೀವು ಹೇಳಿದ್ರಿ ಇದು ಟ್ರೇಲರ್, ಪಿಕ್ಚರ್ ಇನ್ನೂ ಬಾಕಿ ಇದೆ ಎಂದು. ಈ ಪಿಕ್ಚರ್​ನಲ್ಲಿ ಏನೇನಿದೆ.

ನರೇಂದ್ರ ಮೋದಿ: ಅವರು (ಕಾಂಗ್ರೆಸ್) ನಿದ್ದೆ ಇಲ್ಲದೇ ಇರೋ ರೀತಿ ಆಗುವುದಕ್ಕೆ ಕಾರಣ ಏನಂದ್ರೆ. ನಾನೂ ಈಗಲೂ ನಂಬುತ್ತೇನೆ ಏನಂದ್ರೆ, ಇಷ್ಟೊಂದು ದೊಡ್ಡ ದೇಶ, 10 ವರ್ಷದಲ್ಲಿ ನಾನು ಏನ್ ಮಾಡಿದ್ದೀನಿ ಅದರಿಂದಾಗಿ ನನಗೆ ವಿಶ್ವಾಸವಿದೆ. ಆದರೆ ನನ್ನ ಯೋಚನೆಯಂತೆ ಮಾಡುವುದಕ್ಕೆ ಇನ್ನೂ ತುಂಬಾ ಇದೆ ಎಂದು ನಾನು ದೇಶಕ್ಕೆ ಹೇಳಲು ಬಯಸುತ್ತೇನೆ. ನೀವು ಮೋದಿ ಅವರನ್ನ ಪ್ರೀತಿಸುತ್ತೀರಿ, ಆಶೀರ್ವಾದ ಮಾಡುತ್ತೀರಿ, ಆದ್ರೆ ಮೋದಿ ನಿದ್ದೆ ಮಾಡುವವರಲ್ಲ, ನಾನು ದೇಶವನ್ನು ಇದಕ್ಕಿಂತ ಮೇಲೆ ಕೊಂಡೊಯ್ಯುತ್ತೇನೆ. ಮತ್ತಷ್ಟು ಹೊಸ ಹೊಸ ಯೋಜನೆಗಳನ್ನ ಜಾರಿ ಮಾಡುತ್ತೇನೆ. ನನಗೆ ಜಗತ್ತಿನಲ್ಲಿ ಹಿಂದೂಸ್ಥಾನದ ಪರ ಜೈ ಕಾರ ಹಾಕಬೇಕು ಅನ್ನೋದಾಗಿದೆ ಎಂದು ಹೇಳಿದರು.

ಟ್ಯಾಂಕರ್ ಹಬ್ ಆಗಿ ಮಾರ್ಪಟ್ಟಿದೆ

ನಾನು ಕರ್ನಾಟಕದ ಪರಿಸ್ಥಿತಿಯನ್ನು ತುಂಬಾ ಗಂಭೀರವಾಗಿ ನೋಡಿದ್ದೇನೆ. ತಂತ್ರಜ್ಞಾನಕ್ಕೆ ಹೆಸರಾಗಿದ್ದ ರಾಜ್ಯ ಈಗ ಟ್ಯಾಂಕರ್ ಹಬ್ ಆಗಿ ಮಾರ್ಪಟ್ಟಿದೆ. ಬೆಂಗಳೂರಿನ ಸ್ಥಿತಿಗತಿಯನ್ನು ಕೇಳಿದಾಗ ಜಗತ್ತಿನಲ್ಲಿ ನಮ್ಮ ಖ್ಯಾತಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ. ಕರ್ನಾಟಕದಲ್ಲಿ ದೊಡ್ಡ ಬಿಕ್ಕಟ್ಟು ಇದೆ. ಸಿಎಂ ಆಗಲು ಆಡಿದ ಮ್ಯೂಸಿಕಲ್ ಚೇರ್ ಆಟದಿಂದ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರ ಬಂದ 2 ತಿಂಗಳ ನಂತರ ಉದ್ಯೋಗಿಗಳಿಗೆ ಸಂಬಳ ನೀಡಲಾಗುತ್ತಿಲ್ಲ. ಛತ್ತೀಸಗಡ, ಕರ್ನಾಟಕ, ತೆಲಂಗಾಣ ಎಟಿಎಂಗಳಾಗುತ್ತಿದ್ದಂತೆಯೇ ತಂತ್ರಜ್ಞಾನಕ್ಕೆ ಹೆಸರಾಗಿದ್ದ ರಾಜ್ಯ ಟ್ಯಾಂಕರ್ ಹಬ್ ಆಗಿ ನೀರಿಗಾಗಿ ಹರಾಜಾಗಿದೆ. ಜಗತ್ತಿನಲ್ಲಿ ನಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂದು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದರು.

Published On - 9:22 pm, Thu, 2 May 24

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್