AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi Interview: ರಾತ್ರೋರಾತ್ರಿ ಪತ್ವಾ ಹೊರಡಿಸಿ ಮುಸ್ಲಿಮರನ್ನ ಒಬಿಸಿ ಮಾಡಿದ್ದಾರೆ: ಮೋದಿ ಕಿಡಿ

ಪ್ರಧಾನಿ ಮೋದಿ ಸಂದರ್ಶನ: ದೇಶದ ನಂಬರ್ 1 ನ್ಯೂಸ್ ನೆಟ್​ವರ್ಕ್​ ಟಿವಿ9ನ ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ಗುಜರಾತಿ, ಮರಾಠಿ ಮತ್ತು ಬಾಂಗ್ಲಾ ಭಾಷೆ ಚಾನೆಲ್​ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶನ ನೀಡಿದರು. ಕನ್ನಡ ಚಾನೆಲ್​ನಿಂದ ರಂಗನಾಥ್ ಭಾರಧ್ವಾಜ್ ಸಹ ಮೋದಿ ಅವರ ಸಂದರ್ಶನ ಮಾಡಿದ್ದು, ಈ ವೇಳೆ ಕರ್ನಾಟಕದಲ್ಲಿ ಮುಸ್ಲಿಮರಿಗೆ ಓಬಿಸಿ ಮೀಸಲಾತಿ ನೀಡಿರುವ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

TV9 Web
| Edited By: |

Updated on:May 02, 2024 | 10:29 PM

Share

ನವದೆಹಲಿ/ಬೆಂಗಳೂರು, (ಮೇ.02): ಲೋಕಸಭಾ ಚುನಾವಣೆಯಲ್ಲಿ(Loksabha Elections 2024) ಪ್ರಧಾನಿ ನರೇಂದ್ರ ಮೋದಿ (Narednra Modi) ಅವರು ಕಾಂಗ್ರೆಸ್ (Congress) ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ಪ್ರಚಾರದ ವೇಳೆ ಕರ್ನಾಟಕದಲ್ಲಿ ಮುಸ್ಲಿಮರಿಗೆ (Muslim) ಒಬಿಸಿ ಮೀಸಲಾತಿ ನೀಡಿರುವುದನ್ನು  ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಟಿವಿ9 ಸಂದರ್ಶನದಲ್ಲೂ ಸಹ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ನೀಡಿರುವುದನ್ನು ಪ್ರಸ್ತಾಪಿ, ಅಧಿಕಾರದ ತುಷ್ಠೀಕರಣಕ್ಕಾಗಿ ಒಬ್ಬರು ಸಂವಿಧಾನವನ್ನ ಉಪಯೋಗ ಮಾಡಿಕೊಂಡ್ರು. ಇನ್ನೊಬ್ಬರು ವೋಟ್​ಬ್ಯಾಂಕ್​ ರಾಜಕಾರಣಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಮಸ್ಲಿಮರಿಗೆ ಮೀಸಲಾತಿ ನೀಡಿರುವ ಬಗ್ಗೆ ಮಾತನಾಡಿದ ಮೋದಿ,  SC,ST,OBC ಅವರಿಗೆ ಸಂವಿಧಾನದ ಮೂಲಕ ಮೀಸಲಾತಿ ಸಿಕ್ಕಿದೆ. ಇದನ್ನ ಕಸಿದುಕೊಳ್ಳಲು ವಿವಿಧ ಮಾರ್ಗವನ್ನ ಹುಡುಕಲಾಗುತ್ತಿದ್ದು, ಅವರು (ಕಾಂಗ್ರೆಸ್) ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಮುಂದಾಗಿದ್ದಾರೆ. ಯಾವಾಗ ಸಂವಿಧಾನ ರಚನೆ ಆಯ್ತೋ, ತಿಂಗಳು ಗಟ್ಟಲೇ ಚರ್ಚೆ ನಡೆದಿದ್ದು, ದೇಶದ ತಜ್ಞರು, ಪಂಡಿತರು ಚರ್ಚೆ ಮಾಡಿ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಬಾರದೆಂದು ಹೇಳಿದ್ದರು. ಆದ್ರೆ ಇವರು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಯಾಕೆ ಓಡಾಡುತ್ತಿದ್ದಾರೆ.

ಇದನ್ನೂ ಓದಿ: PM Modi Interview: 25 ವರ್ಷದ ರಾಜಕೀಯದಲ್ಲಿ ನನಗೆ ಒಂದೂ ಕಪ್ಪು ಚುಕ್ಕಿ ಅಂಟಿಲ್ಲ; ಪ್ರಧಾನಿ ಮೋದಿ

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ. ಕರ್ನಾಟಕದಲ್ಲಿ ಏನ್ ಮಾಡಿದ್ರು, ಅವರು ರಾತ್ರೋರಾತ್ರಿ  ಪತ್ವಾ ಹೊರಡಿಸಿ  ಎಲ್ಲಾ ಮುಸ್ಲಿಮರನ್ನು OBC ಮಾಡಿದ್ದಾರೆ. ಶೇ27ರಷ್ಟು ಒಬಿಸಿಗೆ ಮೀಸಲಾತಿ ಇತ್ತೋ, ಅದರ ದೊಡ್ಡ ಪಾಲುದಾರರು ಮುಸ್ಲಿಮರು ಆಗಿದ್ದಾರೆ. ಇವರ ಅರ್ಥದಲ್ಲಿ ಸಂವಿಧಾನ ಒಂದು ಇವರಿಗೆ ಆಟವಾಗಿದೆ ಕಾಂಗ್ರೆಸ್​ ನಡೆಯನ್ನು ಕಟುವಾಗಿ ಟೀಕಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 pm, Thu, 2 May 24

Follow Us
TV9 Web
TV9 Web

TV9 Kannada

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು