PM Modi Interview: ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಟಿವಿ9 ಮೂಲಕ ದೇಣಿಗೆ
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜೊತೆ ಟಿವಿ9 ನೆಟ್ವರ್ಕ್ನ (TV9 Network) 6 ಭಾಷೆಗಳ ಸಂಪಾದಕರು ದುಂಡುಮೇಜಿನ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಕೊನೆಯದಾಗಿ ರಂಗನಾಥ್ ಭಾರದ್ವಾಜ್ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಹಂಚಿಕೊಂಡು, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಟಿವಿ9 ಮೂಲಕ ದೇಣಿಗೆ ನೀಡಿದ್ದಾರೆ.
ನವದೆಹಲಿ, ಮೇ.02: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜೊತೆ ಟಿವಿ9 ನೆಟ್ವರ್ಕ್ನ (TV9 Network) 6 ಭಾಷೆಗಳ ಸಂಪಾದಕರು ದುಂಡುಮೇಜಿನ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದಲ್ಲಿ ಟಿವಿ9 ಕನ್ನಡದ ಮುಖ್ಯ ನಿರೂಪಕರಾದ ರಂಗನಾಥ್ ಭಾರದ್ವಾಜ್ ಕೂಡ ಭಾಗವಹಿಸಿದ್ದು, ಈ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಅನೇಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಕೊನೆಯದಾಗಿ ರಂಗನಾಥ್ ಭಾರದ್ವಾಜ್ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ನಾವು ಒಂದು ಸಹಾಯವಾಣಿ ಕಾರ್ಯಕ್ರಮವನ್ನು ಆರಂಭಿಸಿದ್ದೇವೂ, ಒಂದು ದಿನ 82 ವರ್ಷದ ಒಬ್ಬ ವೃದ್ದ ಆಗಮಿಸಿದರು.
ಆ ವೇಳೆ ನಿಮಗೆ ಏನು ಸಹಾಯಬೇಕು ಎಂದು ಆ ವ್ಯಕ್ತಿಯನ್ನು ಕೇಳಿದೆ. ಆಗ ಅವರು ನನಗೆ 500 ರೂ. ಮತ್ತು 10 ರೂಪಾಯಿಯ ನೋಟು ಕೊಟ್ಟು ಹೇಳಿದರು, ‘ದೇಶ ಸಂಕಷ್ಟದಲ್ಲಿದೆ. ನಾವು ನಮ್ಮ ದೇಶವನ್ನು ಸದೃಡ ಮಾಡಬೇಕು ಎಂದರು. ಅದಕ್ಕೊಸ್ಕರ ಈ ಹಣ, ಇದು ಯುವಕರಿಗೆ ಒಂದು ಸಂದೇಶವಾಗಬೇಕು. ಮತ್ತು ಈ ದಿನ ಅವರು ಇಲ್ಲ, ನಮ್ಮ ದುರಾದೃಷ್ಟವಶಾತ್ ಅವರು ಕೆಲ ದಿನಗಳ ನಂತರ ಹೃದಯಾಘಶಾತದಿಂದ ಕೊನೆಯುಸಿರೆಳೆದರು ಎಂದರು.
ಇದೇ ವೇಳೆ ಅದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಾಕುತ್ತೇನೆ ಜೊತೆಗೆ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಹೇಳಿ ಮೋದಿ ಭಾವುಕರಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 pm, Thu, 2 May 24