ಸಿದ್ದೇಶ್ವರ ಶ್ರೀಗಳ ಪ್ರಥಮ ವರ್ಷದ ಗುರು ನಮನ ಕಾರ್ಯಕ್ರಮಕ್ಕೆ ಪ್ರಧಾನಿ ಗೈರು; ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಸಿದ್ದೇಶ್ವರ ಶ್ರೀಗಳ ಪ್ರಥಮ ವರ್ಷದ ಗುರು ನಮನ ಕಾರ್ಯಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಗೈರಾಗುತ್ತಿರುವ ಬಗ್ಗೆ ಕಾರಣ ನೀಡಿ ಮೋದಿ ಪತ್ರ ಬರೆದಿದ್ದು, ಈ ಪತ್ರದಲ್ಲಿ ನುಡಿನಮನ ಸಂದೇಶ ಕಳುಹಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ವಿಜಯಪುರ, ಜ.2: ನಗರದ ಜ್ಞಾನ ಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ (Siddheshwar Shri) ಪ್ರಥಮ ವರ್ಷದ ಗುರು ನಮನ ಕಾರ್ಯಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಗೈರಾಗುತ್ತಿರುವ ಬಗ್ಗೆ ಕಾರಣ ನೀಡಿ ಮೋದಿ ಪತ್ರ ಬರೆದಿದ್ದು, ಈ ಪತ್ರದಲ್ಲಿ ನುಡಿನಮನ ಸಂದೇಶ ಕಳುಹಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.
ಸಿದ್ದೇಶ್ವರ ಶ್ರೀಗಳ ಜೀವನ ತೆರೆದ ಪುಸ್ತಕವಾಣಿಯಾಗಿದೆ. ಶ್ರೀಗಳು ಜನರ ಮನಸ್ಸಿನಲ್ಲಿ ಆಧ್ಯಾತ್ಮದ ಭಾವನೇ ಮೂಡಿಸಿದ್ದಾರೆ. ಶ್ರೀಗಳು ಸಮಾಧಿಯನ್ನು ಸಹ ಮಾಡಬೇಡಿ ಎಂದಿದ್ದಾರೆ. ಇದು ಶ್ರೀಗಳ ಉದಾತ್ತ ಚಿಂತನೆಗೆ ಸಾಕ್ಷಿಯಾಗಿದೆ. ನನ್ನದು ಏನು ಬೇಡ ಎಂದು ಸಿದ್ದೇಶ್ವರ ಶ್ರೀಗಳು ಹೇಳಿದ್ದರು. ಇಂದು ಲಕ್ಷಾಂತರ ಭಕ್ತರು ಶ್ರೀಗಳ ಮಾತನ್ನು ಪಾಲಿಸುತ್ತಿದ್ದಾರೆ. ಶ್ರೀಗಳ ಪುಸ್ತಕವನ್ನು ಪ್ರಧಾನಮಂತ್ರಿಗಳು ಬಿಡುಗಡೆ ಮಾಡಬೇಕಿತ್ತು. ಆದರೆ ಕೊವಿಡ್ ಕಾರಣದಿಂದ ಕಾರ್ಯಕ್ರಮ ನಡೆಯಲಿಲ್ಲ ಎಂದರು.
ಪ್ರಲ್ಹಾದ್ ಜೋಶಿ ಟ್ವೀಟ್
ಗುರುಭ್ಯೋನಮಃ 🙏 ನಡೆದಾಡುವ ದೇವರೆಂದೇ ಪ್ರಸಿದ್ಧರಾದ ವಿಜಯಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ಪ್ರಥಮ ವರ್ಷದ ಪುಣ್ಯಸ್ಮರಣೆಯ ದಿನದ ಅಂಗವಾಗಿ ಇಂದು ವಿಜಯಪುರದಲ್ಲಿ ನಡೆದ “ನುಡಿನಮನ ಮಹೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಿ, ಗುರುಗಳಿಗೆ ಗೌರವದ ನಮನ ಸಲ್ಲಿಸಿದೆನು.
ಪರಮಪೂಜ್ಯರು ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗಾಗಿ… pic.twitter.com/qDT5vu5rkf
— Pralhad Joshi (@JoshiPralhad) January 2, 2024
ಕಾರ್ಯಕ್ರಮದಿಂದ ದೂರ ಉಳಿದ ಶಾಸಕ ಯತ್ನಾಳ್
ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೂರ ಉಳಿದಿದ್ದಾರೆ. ಗುರು ನಮನ ಮಹೋತ್ಸವದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಯತ್ನಾಳ್, ಮಹೋತ್ಸವ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲೂ ಭಾಗಿಯಾಗಿಲ್ಲ. ಇವರ ಬದಲಿಗೆ ಪುತ್ರ ರಾಮನಗೌಡ ಪಾಟೀಲ್ ಭಾಗಿಯಾದರು.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: CM ಸಿದ್ದರಾಮಯ್ಯಗೆ ಆಹ್ವಾನ ನೀಡದ ವಿಚಾರಕ್ಕೆ ಕೇಂದ್ರ ಸಚಿವ ಜೋಶಿ ಕೊಟ್ಟ ಸ್ಪಷ್ಟನೆ ಹೀಗಿದೆ
ಗುರು ನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ರಾಜ್ಯದ ಸಚಿವರು ಹಾಗೂ ಶಾಸಕರು ಭಾಗಿಯಾಗಿದರು. ಆದರೆ, ಸಿದ್ದರಾಮಯ್ಯ ವೇದಿಕೆಗೆ ಆಗಮಿಸುವ ಮುನ್ನವೇ ಪ್ರಲ್ಹಾದ್ ಜೋಶಿ ಭಾಷಣ ಮಾಡಿ ವೇದಿಕೆಯಿಂದ ನಿರ್ಗಮಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ