Kannada News Karnataka PMDDK Scheme: PMDDKY implementation in Haveri and Gadag; Modi will be launching the scheme
PMDDK Yojana: ಹಾವೇರಿ ಮತ್ತು ಗದಗದಲ್ಲಿ ಪಿಎಂಡಿಡಿಕೆವೈ ಅನುಷ್ಠಾನ; ಯೋಜನೆಗೆ ಚಾಲನೆ ನೀಡಲಿರುವ ಮೋದಿ
ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ನಾಳೆ (ಅ.11) ಈ ಯೋಜನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನ ಹೆಚ್ಚಳ ಹಾಗೂ ವಿವಿಧ ದವಸ ಧಾನ್ಯ ಬೆಳೆಯುವಿಕೆ,ನೀರಾವರಿ ಸೌಲಭ್ಯ, ರೈತರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಹಣಕಾಸು ನೆರವು ದೊರೆಯಲಿದೆ.
ಹಾವೇರಿ ಮತ್ತು ಗದಗದಲ್ಲಿ ಪಿಎಂಡಿಡಿಕೆವೈ ಅನುಷ್ಠಾನ; ಯೋಜನೆಗೆ ಮೋದಿಯಿಂದ ಚಾಲನೆ
ಹಾವೇರಿ, ಗದಗ, ಅಕ್ಟೊಬರ್ 10: ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ (PMDDKY) ಅನುಷ್ಠಾನಗೊಳ್ಳಲಿದ್ದು, ನಾಳೆ (ಅ.11) ಈ ಯೋಜನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ದೇಶಾದ್ಯಂತ ಆಯ್ದ 100 ಜಿಲ್ಲೆಗಳಲ್ಲಿ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜಿಸುವುದು ಯೋಜನೆಯ ಗುರಿ. ಈ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನ ಹೆಚ್ಚಳ ಹಾಗೂ ವಿವಿಧ ದವಸ ಧಾನ್ಯ ಬೆಳೆಯುವಿಕೆ, ನೀರಾವರಿ ಸೌಲಭ್ಯ, ರೈತರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಹಣಕಾಸು ನೆರವು ದೊರೆಯಲಿದೆ.
ಏನಿದು ಪಿಎಂಡಿಡಿಕೆವೈ?
ಪಿಎಂಡಿಡಿಕೆವೈ ಸುಗ್ಗಿಯ ನಂತರ ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ದವಸ ಧಾನ್ಯಗಳ ದಾಸ್ತಾನು ನಿರ್ಮಾಣ ಮಾಡುವುದು ಸೇರಿ ಸಮಗ್ರ ಕೃಷಿ ಅಭಿವೃದ್ಧಿ ಉದ್ದೇಶಗಳನ್ನು ಹೊಂದಿದೆ. ಈ ಯೋಜನೆಗೆ ಹಾವೇರಿಯ ಕೃಷಿ ವಿದ್ಯಾಲಯ ಕೇಂದ್ರದಲ್ಲಿ ನಾಳೆ ಪಿಎಂ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ಕೇವಲ ಹಾವೇರಿ, ಗದಗ ಮಾತ್ರವಲ್ಲದೇ ದೇಶದ 100 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಪಿಎಂ ಧನ್ ಧಾನ್ಯ ಕೃಷಿ ಯೋಜನೆಗೆ ಒಂದು ವರ್ಷಕ್ಕೆ 24,000 ಕೋಟಿ ರೂ ವಿನಿಯೋಗಿಸಲು ಸಂಪುಟ ಒಪ್ಪಿಗೆ ನೀಡಿದೆ. ಕೃಷಿ ಉತ್ಪನ್ನತೆ, ಬೆಳೆದಟ್ಟನೆ ಮತ್ತು ಸಾಲದ ಹರಿವು ಈ ಮೂರು ಅಂಶಗಳಲ್ಲಿ ಹಿಂದುಳಿದಿರುವ ಜಿಲ್ಲೆಗಳು ಈ ಸ್ಕೀಮ್ನಲ್ಲಿ ಇರಲಿವೆ.
ಕೃಷಿ ಉತ್ಪಾದನೆ ಹೆಚ್ಚಳ: ಕಡಿಮೆ ಉತ್ಪಾದನೆ ಹೊಂದಿರುವ 100 ಕೃಷಿ ಜಿಲ್ಲೆಗಳಲ್ಲಿ ಸುಧಾರಿತ ತಂತ್ರಜ್ಞಾನ, ಉತ್ತಮ ನೀರಾವರಿ ಸೌಲಭ್ಯಗಳು ಮತ್ತು ಗುಣಮಟ್ಟದ ಕಚ್ಚಾ ವಸ್ತುಗಳನ್ನು ಒದಗಿಸುವ ಮೂಲಕ ಕೃಷಿ ಇಳುವರಿಯನ್ನು 20-30% ಹೆಚ್ಚಿಸುವುದು.
ರೈತರ ಆದಾಯ ವೃದ್ಧಿ: 2030ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು.
ಯೋಜನೆಗಳ ಒಗ್ಗೂಡಿಸುವಿಕೆ: ಈ ಯೋಜನೆಯು ಪ್ರತ್ಯೇಕ ಬಜೆಟ್ ಹೊಂದಿರದೇ 11 ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ 36 ಕೇಂದ್ರ ಯೋಜನೆಗಳನ್ನು ಒಗ್ಗೂಡಿಸುವುದು.
ರೈತರಿಗೆ ಆರ್ಥಿಕ ಭದ್ರತೆ: ಪಿಎಂ-ಕಿಸಾನ್, ಪಿಎಂ ಫಸಲ್ ಬಿಮಾ ಯೋಜನೆ ಮತ್ತು ಪಿಎಂ ಕೃಷಿ ಸಿಂಚಾಯಿ ಯೋಜನೆಯಂತಹ ಜನಪ್ರಿಯ ಯೋಜನೆಗಳನ್ನು ಇದು ಒಳಗೊಂಡಿದೆ.
ಆದ್ಯತಾ ಜಿಲ್ಲೆಗಳ ಆಯ್ಕೆ: ಈ ಯೋಜನೆಯು ಕಡಿಮೆ ಉತ್ಪಾದನೆ ಮತ್ತು ಕಡಿಮೆ ಸಾಲ ವಿತರಣೆಯ ಮಾನದಂಡಗಳ ಮೇಲೆ 100 ಜಿಲ್ಲೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸುತ್ತದೆ. ಕರ್ನಾಟಕದ ಹಾವೇರಿ ಮತ್ತು ಗದಗ ಜಿಲ್ಲೆಗಳು ಈ ಯೋಜನೆಯಡಿಯಲ್ಲಿ ಆಯ್ಕೆಯಾಗಿವೆ.
ಸುಸ್ಥಿರ ಕೃಷಿ ಪದ್ಧತಿಗಳು: ಮಣ್ಣಿನ ಆರೋಗ್ಯ ಮತ್ತು ನೀರಿನ ಸಂಪನ್ಮೂಲಗಳನ್ನು ರಕ್ಷಿಸಲು ಸುಸ್ಥಿರ ಕೃಷಿ ಪದ್ಧತಿಗಳು, ಸಾವಯವ ಕೃಷಿ, ಮತ್ತು ಬೆಳೆ ವೈವಿಧ್ಯೀಕರಣಕ್ಕೆ ಉತ್ತೇಜನ ನೀಡುವುದು.
ಬೆಳೆ ನಂತರದ ನಿರ್ವಹಣೆ: ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಸಂಗ್ರಹಣೆ, ಶೀತಲ ಘಟಕಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಮೂಲಕ ಬೆಳೆ ನಂತರದ ನಷ್ಟವನ್ನು 5% ಕ್ಕಿಂತ ಕಡಿಮೆ ಮಾಡುವುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ