ರೂಪದರ್ಶಿಯ ನಿಗೂಢ ಸಾವು: ಮಾಡಲಿಂಗ್ ಆಸೆಯೇ ಆ ವಿದ್ಯಾರ್ಥಿನಿಯ ಬದುಕಿಗೆ ಮುಳುವಾಯಿತಾ?

ಪ್ರೇಕ್ಷಾಳಿಗೆ ಫ್ಯಾಶನ್ ಲೋಕದ ಮೇಲೆ ಇನ್ನಿಲ್ಲದ ಆಸೆ ಇತ್ತು. ಆಕೆಯ ಇನ್ಸ್ಟಾಗ್ರಾಮ್ ಪ್ರೊಫೈಲ್ ತಡಕಾಡಿದ್ದರು ಅಲ್ಲೂ ಅಷ್ಟೇ ಮಾಡೆಲಿಂಗ್ ಜಗತ್ತಿನ ಆಸೆಗಳ ಬಗ್ಗೆ ಬರೆದುಕೊಂಡಿದ್ದಾಳೆ. ಜೊತೆಗೆ ಮಿಸ್ ಟೀನ್ ತುಳುನಾಡು ಸ್ಪರ್ಧೆಯ ಟಾಪ್ 5 ಫೈನಲಿಸ್ಟ್​ಗಳ ಪೈಕಿ ಈ ಪ್ರೇಕ್ಷಾ ಕೂಡ ಒಬ್ಬಳಾಗಿದ್ದಳು.

ರೂಪದರ್ಶಿಯ ನಿಗೂಢ ಸಾವು: ಮಾಡಲಿಂಗ್ ಆಸೆಯೇ ಆ ವಿದ್ಯಾರ್ಥಿನಿಯ ಬದುಕಿಗೆ ಮುಳುವಾಯಿತಾ?
ಪ್ರೇಕ್ಷಾ ಮತ್ತು ಯತಿನ್​ರಾಜ್​ ಗಟ್ಟಿ
Follow us
preethi shettigar
|

Updated on:Mar 12, 2021 | 4:39 PM

ದಕ್ಷಿಣ ಕನ್ನಡ: ರೂಪದರ್ಶಿಯೂ ಆಗಿದ್ದ, ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ಎರಡು ದಿನಗಳ ಹಿಂದೆ ನಡೆದಿದೆ. ಸಾವಿನ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಮೂವರು ಯುವಕರನ್ನು ವಿಚಾರಿಸಿದ್ದು, ಚೆಲುವೆಗೆ ಹದಿಹರೆಯದ ಪ್ರೀತಿಯ ನಂಟಿತ್ತು ಎನ್ನುವುದು ಬೆಳಕಿಗೆ ಬಂದಿದೆ. 

ಮಂಗಳೂರಿನ ಹೊರವಲಯದ ಕುಂಪಲ ಬಳಿಯ ಆಶ್ರಯ ಕಾಲೋನಿ ನಿವಾಸಿ 17 ವರ್ಷ ವಯಸ್ಸಿನ ಪ್ರೇಕ್ಷಾ ಬುಧವಾರ ನಿಗೂಢವಾಗಿ ಸಾವನ್ನಪ್ಪಿದ್ದಳು. ಉಳ್ಳಾಲ ಪೊಲೀಸರು ಈ ಪ್ರಕರಣ ಭೇದಿಸಲು ಮೂವರು ಯವಕರನ್ನು ವಶಕ್ಕೆ ಪಡೆದಿದ್ದಾರೆ. ಆಗ ಪ್ರೇಕ್ಷಾಳಿಗೆ ಯತಿನ್ರಾಜ್ ಗಟ್ಟಿ ಎಂಬ ಒಬ್ಬ ಪ್ರಿಯಕರ ಇದ್ದ ಎನ್ನುವುದು ತಿಳಿದಿದೆ. ಸದ್ಯ ಪ್ರೇಕ್ಷಾ ಸಾವಿನ ಬಳಿಕ ಮನೆಯ ಬಳಿ ಯತಿನ್ರಾ​ಜ್ ಗಟ್ಟಿ ಸುತ್ತಾಡುತ್ತಿದ್ದ ಎನ್ನುವ ಕಾರಣಕ್ಕೆ ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರೇಕ್ಷಾಳ ಮನೆಯ ಬಳಿ ಸಾವಿಗೂ ಮುನ್ನ ಯತಿ​ನ್ರಾ​ಜ್ ಗಟ್ಟಿ, ಸುಹಾನ್ ಮತ್ತು ಸೌರಭ್ ಇದ್ದರು ಎಂದು ತಿಳಿದು ಬಂದಿದ್ದು, ಪೊಲೀಸ್ ತನಿಖೆ ವೇಳೆ ಈ ಮೂವರು ಹೇಳಿರುವ ಪ್ರಕಾರ ಆಕೆಗೆ ಮಾಡೆಲಿಂಗ್ ಮಾಡಲು ಮನೆಯವರು ಮತ್ತು ಯತಿನ್ರಾ​ಜ್ ಇಬ್ಬರು ವಿರೋಧ ವ್ಯಕ್ತಪಡಿಸಿದ್ದು, ಈ ಕಾರಣಕ್ಕೆ ಕಳೆದ 10 ದಿನಗಳಿಂದ ಪ್ರೇಕ್ಷಾ ಡಿಪ್ರೆಶನ್​ಗೆ ಹೋಗಿದ್ದಳು. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಕಾಲ್ ಮಾಡಿ ಹೇಳಿದ್ದು, ಈ ಕಾರಣಕ್ಕೆ ತನ್ನ ಸ್ನೇಹಿತರೊಂದಿಗೆ ಆಕೆಯನ್ನು ರಕ್ಷಿಸಲು ಮನೆ ಬಳಿ ಹೋಗಿದ್ದೆ ಎಂದು ಯತಿನ್​ರಾಜ್ ಗಟ್ಟಿ ಹೇಳಿದ್ದಾನೆ.

magalore suicide

ಪ್ರೇಕ್ಷಾ ಮತ್ತು ಯತಿನ್​ರಾಜ್​ ಗಟ್ಟಿ

ಪ್ರೇಕ್ಷಾಳಿಗೆ ಫ್ಯಾಶನ್ ಲೋಕದ ಮೇಲೆ ಇನ್ನಿಲ್ಲದ ಆಸೆ ಇತ್ತು. ಆಕೆಯ ಇನ್​ಸ್ಟಾಗ್ರಾಮ್ ಪ್ರೊಫೈಲ್ ತಡಕಾಡಿದರೆ ಅಲ್ಲೂ ಅಷ್ಟೇ ಮಾಡೆಲಿಂಗ್ ಜಗತ್ತಿನ ಆಸೆಗಳ ಬಗ್ಗೆ ಬರೆದುಕೊಂಡಿದ್ದಾಳೆ. ಜೊತೆಗೆ ಮಿಸ್ ಟೀನ್ ತುಳುನಾಡು ಸ್ಪರ್ಧೆಯ ಟಾಪ್ 5 ಫೈನಲಿಸ್ಟ್​ಗಳ ಪೈಕಿ ಈ ಪ್ರೇಕ್ಷಾ ಕೂಡ ಒಬ್ಬಳಾಗಿದ್ದಳು. ಇನ್ನು ಮನೆಯವರು ಈಗ ಚೆನ್ನಾಗಿ ಓದು ಎಂದು ಮಾಡೆಲಿಂಗ್ ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇತ್ತ ನಿನ್ನೆ ಫೋಟೊ ಶೂಟ್ ಗೆ ಹೋಗುವುದಕ್ಕೆ ಬೇಡ ಎಂದು ಯತಿನ್​​ರಾಜ್ ಕೂಡ ವಿರೋಧಿಸಿದ್ದ ಇದರಿಂದ ಮನಸ್ಸಿಗೆ ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ.

ಇನ್ನು ಫ್ಯಾಶನ್ ಲೋಕದಲ್ಲಿ ಪರಿಚಯವಾದ 6 ಜನರ ಲಿಸ್ಟ್ ಕೂಡ ಸಿದ್ಧವಾಗಿದ್ದು, ಅವರನ್ನು ಕೂಡ ವಿಚಾರಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ. ಅವರಿಂದ ಏನಾದರೂ ಟಾರ್ಚರ್ ಇತ್ತ ಎನ್ನುವ ಬಗ್ಗೆಯೂ ತನಿಖೆ ನಡೆದಿದೆ. ಆದರೆ ರೂಪದರ್ಶಿಯೊಬ್ಬಳ ಸಾವಿನ ಹಿಂದಿನ ಕಾರಣ ಮಾತ್ರ ಇನ್ನೂ ಕೂಡ ರಹಸ್ಯವಾಗಿಯೆ ಉಳಿದಿದೆ. ತನಿಖೆ ಪೂರ್ಣವಾದ ಬಳಿಕ ಈ ಸಾವಿಗೆ ನಿಖರವಾದ ಕಾರಣ ಏನು ಎನ್ನುವುದು ಹೊರಬರಬೇಕಿದೆ ಅಷ್ಟೇ.

ಇದನ್ನೂ ಓದಿ: Indrakumar Suicide: ತಮಿಳು ಕಿರುತೆರೆ ನಟ ಇಂದ್ರಕುಮಾರ್​ ಆತ್ಮಹತ್ಯೆ; ಗೆಳೆಯನ ಮನೆಯಲ್ಲಿ ಶವ ಪತ್ತೆ

Published On - 4:37 pm, Fri, 12 March 21