ಬಾಗಲಕೋಟೆ: 415 ಚೀಲ ತೊಗರಿ ಬೇಳೆ ಮಾರಿ ತಲೆಮರೆಸಿಕೊಂಡಿದ್ದ ಇಬ್ಬರು ಅರೆಸ್ಟ್
ಬಾಗಲಕೋಟೆಯ ನವನಗರದ ಎಪಿಎಂಸಿ ಯಾರ್ಡನಲ್ಲಿರುವ ರಾಕೇಶ ಗುಜ್ಜರ ಎನ್ನುವವರ ಅಡತಿ ಅಂಗಡಿಯಿಂದ ತೊಗರಿಬೇಳೆ ಚೀಲಗಳನ್ನು ಲಾರಿಯಲ್ಲಿ ಹೊತ್ತೊಯ್ದಿದ್ದರು.
ಬಾಗಲಕೋಟೆ: ಸುಮಾರು 415 ಚೀಲ ತೊಗರಿ ಬೇಳೆಯನ್ನು ಮಾರಿ ತಲೆಮರಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಾಗಲಕೋಟೆಯ ನವನಗರ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಅಂಕುಶ ರಾಠೋಡ ಮತ್ತು ದಿನೇಶ್ ಜಾಧವ್ ಬಂಧಿತ ಆರೋಪಿಗಳು. 17 ಲಕ್ಷ ರೂ. ಮೌಲ್ಯದ 415 ಚೀಲ ತೊಗರಿ ಬೇಳೆಯನ್ನು ಹೊತ್ತೊಯ್ದಿದ್ದರು. ರಾಕೇಶ ಗುಜ್ಜರ ಎಂಬುವವರ ಅಂಗಡಿಯಿಂದ ಹೊತ್ತೊಯ್ದಿದ್ದರು. ನಂತರ ಸಂತೆಯಲ್ಲಿ ಮಾರಾಟ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಬಾಗಲಕೋಟೆಯ ನವನಗರದ ಎಪಿಎಂಸಿ ಯಾರ್ಡನಲ್ಲಿರುವ ರಾಕೇಶ ಗುಜ್ಜರ ಎನ್ನುವವರ ಅಡತಿ ಅಂಗಡಿಯಿಂದ ತೊಗರಿಬೇಳೆ ಚೀಲಗಳನ್ನು ಲಾರಿಯಲ್ಲಿ ಹೊತ್ತೊಯ್ದಿದ್ದರು. 60ಕೆ.ಜಿ ತೂಕದ 17ಲಕ್ಷಕ್ಕೂ ಅಧಿಕ ಮೌಲ್ಯದ 415 ಚೀಲಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗಿದ್ದರು. ಛತ್ತಿಸ್ಗಡ್ ರಾಜ್ಯದ ರಾಯಪೂರಕ್ಕೆ ತಲುಪಿಸಬೇಕಾಗಿತ್ತು. ಆದರೆ ತಲುಪಿಸಬೇಕಾಗಿದ್ದ ಜಾಗಕ್ಕೆ ತಲುಪಿಸದೇ ಸಂತೆಯಲ್ಲಿ ಮಾರಾಟ ಮಾಡಿಕೊಂಡು ಆರೋಪಿಗಳು ತಲೆ ಮರೆಸಿಕೊಂಡಿದ್ದರು.
415 ಚೀಲಗಳಲ್ಲಿ 245 ಚೀಲಗಳನ್ನು ಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಬಾಕಿ ಉಳಿದ 170 ಚೀಲಗಳು ಹಾಗೂ 245 ಚೀಲಗಳನ್ನ ಮಾರಾಟ ಮಾಡಿ ಬಂದ 8 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವನಗರದ ಸಿಪಿಐ ಎಸ್ಎಂ ಆವಜಿ ಹಾಗೂ ತಂಡದಿಂದ ಆರೋಪಿಗಳನ್ನ ಬಂಧಿಸಲಾಗಿದೆ. ನವನಗರ ಠಾಣೆಯಲ್ಲಿ ಅಕ್ಟೋಬರ್ 20 ರಂದು ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ
ಚಿಕ್ಕಬಳ್ಳಾಪುರದ ಮಿಟ್ಟಹಳ್ಳಿಯಲ್ಲಿ ಮತ್ತೆ ಭೂಮಿಯಿಂದ ಬಂತು ಭಾರಿ ಶಬ್ದ!