ರೂಪಾಂತರ ವೈರಸ್ ಆತಂಕ: ಆ ವ್ಯಕ್ತಿ ಇನ್ನೂ ನಾಪತ್ತೆ
ಬ್ರಿಟನ್ನಿಂದ ಧಾರವಾಡಕ್ಕೆ ಬಂದಿದ್ದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈಗಾಗಲೇ ಒಟ್ಟು 37 ಜನರು ಬ್ರಿಟನ್ನಿಂದ ಜಿಲ್ಲೆಗೆ ಬಂದಿದ್ದಾರೆ.
ಧಾರವಾಡ: ಬ್ರಿಟನ್ನ ರೂಪಾಂತರ ವೈರಸ್ ಆತಂಕ ಹಿನ್ನೆಲೆ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಬ್ರಿಟನ್ನಿಂದ ಧಾರವಾಡಕ್ಕೆ ಬಂದಿದ್ದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈಗಾಗಲೇ ಒಟ್ಟು 37 ಜನರು ಬ್ರಿಟನ್ನಿಂದ ಜಿಲ್ಲೆಗೆ ಬಂದಿದ್ದಾರೆ. ಆ ಪೈಕಿ 36 ಜನರ ಪರೀಕ್ಷೆ ನೆಗೆಟಿವ್ ಬಂದಿದೆ.
ಸದ್ಯ ನಾಪತ್ತೆಯಾಗಿರುವ ವ್ಯಕ್ತಿಯ ಟೆಸ್ಟ್ ಮಾತ್ರ ಬಾಕಿ ಉಳಿದಿದ್ದು, ಆತನ ಮೊಬೈಲ್ ನಂಬರ್ ಕೂಡಾ ಟ್ರೇಸ್ ಆಗುತ್ತಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.