ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಜಾಮೀನು ಅರ್ಜಿ ವಜಾ ಮಾಡಿದ ವಿಶೇಷ ಕೋರ್ಟ್​!

|

Updated on: Jun 26, 2024 | 4:07 PM

ಹೊಳೆನರಸೀಪುರಲ್ಲಿ ದಾಖಲಾಗಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್​ ಬಿಗ್ ಶಾಕ್ ಕೊಟ್ಟಿದೆ. ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಾಲಯವು ವಜಾ ಮಾಡಿದೆ.

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಜಾಮೀನು ಅರ್ಜಿ ವಜಾ ಮಾಡಿದ ವಿಶೇಷ ಕೋರ್ಟ್​!
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು, (ಜೂನ್ 26): ಹಾಸನ ಜೆಡಿಎಸ್​​ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಂಡಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಜ್ವಲ್ ರೇವಣ್ಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು. ಆದ್ರೆ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು (ಜೂನ್ 26) ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊದಲನೇ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು. ಈ ಅರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಜಾಮೀನು ಆದೇಶವನ್ನು ಕಾಯ್ದಿಸಿತ್ತು. ಆದ್ರೆ, ಇಂದು ವಿಶೇಷ ಕೋರ್ಟ್‌ನ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಪ್ರಜ್ವಲ್ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನಿನ ನಿರೀಕ್ಷೆಯಲ್ಲಿದ್ದ ಪ್ರಜ್ವಲ್​ ರೇವಣ್ಣಗೆ ನಿರಾಸೆಯಾಗಿದೆ. ಇನ್ನು ಜಾಮೀನಿಗಾಗಿ ಪ್ರಜ್ವಲ್​ ಹೈಕೋರ್ಟ್​ ಮೆಟ್ಟಿಲೇರಬೇಕಿದೆ.

ಇದನ್ನೂ ಓದಿ: ಸಂತ್ರಸ್ತೆಯ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪ: ಪ್ರಜ್ವಲ್​​, ಪ್ರೀತಂ ಗೌಡ ವಿರುದ್ಧ ಎಫ್​ಐಆರ್​

ಮೊನ್ನೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪರಪ್ಪನ ಅಗ್ರಹಾರ ಜೈಲಿನದ್ದ  ಪ್ರಜ್ವಲ್​ನನ್ನು ಮೂರನೇ ಪ್ರಕರಣದಲ್ಲಿ ಎಸ್​ಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ ಇಂದು (ಬುಧವಾರ)  ಪ್ರಜ್ವಲ್​ನನ್ನು ಹೊಳೆನರಸೀಪುರಕ್ಕೆ ಕರೆದೊಯ್ದು H.D.ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ಮಾಡಿದರು. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿರುವ ರೇವಣ್ಣರ ಚೆನ್ನಾಂಬಿಕಾ ‌ನಿವಾಸದಲ್ಲಿ ಸ್ಥಳ ಮಹಜರು ಮುಗಿಸಿದ ಎಸ್​ಐಟಿ ಅಧಿಕಾರಿಗಳು, ಪ್ರಜ್ವಲ್​ನನ್ನು ಕರೆದುಕೊಂಡು ಬೆಂಗಳೂರಿನತ್ತ ಹೊರಟಿದ್ದಾರೆ.

ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ ನ್ಯಾಯಾಲಯವು, ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರನ್ನು ಜೂನ್ 29ರವರೆಗೂ  ಎಸ್​ಐಟಿ ಕಸ್ಟಡಿಗೆ ನೀಡಿದೆ.  ಹೀಗಾಗಿ ಪ್ರಜ್ವಲ್​ ರೇವಣ್ಣ ಅವರು ಇನ್ನೂ ಮೂರು ದಿನಗಳ ಕಾಲ ಎಸ್​ಐಡಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:52 pm, Wed, 26 June 24