ಪ್ರಜ್ವಲ್ ಪೆನ್‌ಡ್ರೈವ್‌ ಕೇಸ್: ಜೆಡಿಎಸ್​ನ ಮತ್ತೋರ್ವ ಶಾಸಕನ ಹೆಸರು ತಳುಕು

| Updated By: ಗಂಗಾಧರ​ ಬ. ಸಾಬೋಜಿ

Updated on: May 12, 2024 | 7:10 PM

ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಆರೋಪಿ ನವೀನ್‌ ಗೌಡ ಫೇಸ್‌ಬುಕ್‌ ಖಾತೆಯಿಂದ ಸ್ಫೋಟಕ ಪೋಸ್ಟ್‌ ಮಾಡಲಾಗಿದೆ. ನನಗೆ ಏಪ್ರಿಲ್‌ 20ರಂದು ಪೆನ್‌ಡ್ರೈವ್ ಸಿಕ್ಕಿತ್ತು. ಪೆನ್‌ಡ್ರೈವ್‌ನ್ನು ಅರಕಲಗೂಡು ಶಾಸಕ ಎ.ಮಂಜುಗೆ ಕೊಟ್ಟಿದ್ದೆ ಎಂದು ಪೋಸ್ಟ್‌ ಮಾಡಲಾಗಿದ್ದು, ಸದ್ಯ ಪ್ರಕರಣದಲ್ಲಿ ಜೆಡಿಎಸ್​​ನ ಮತ್ತೋರ್ವ ಶಾಸಕನ ಹೆಸರು ತಳುಕು ಹಾಕಿಕೊಂಡಿದೆ.

ಪ್ರಜ್ವಲ್ ಪೆನ್‌ಡ್ರೈವ್‌ ಕೇಸ್: ಜೆಡಿಎಸ್​ನ ಮತ್ತೋರ್ವ ಶಾಸಕನ ಹೆಸರು ತಳುಕು
ಪ್ರಜ್ವಲ್ ಪೆನ್ ಡ್ರೈವ್ ಕೇಸ್, ಜೆಡಿಎಸ್ ನ ಮತ್ತೋರ್ವ ಶಾಸಕನ ಹೆಸರು ತಳುಕು
Follow us on

ಹಾಸನ, ಮೇ 12: ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೆಡಿಎಸ್​​ನ ಮತ್ತೋರ್ವ ಶಾಸಕನ ಹೆಸರು ತಳುಕು ಹಾಕಿಕೊಂಡಿದೆ. ಆ ಮೂಲಕ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಈ ಕುರಿತಾಗಿ ಆರೋಪಿ ನವೀನ್‌ ಗೌಡ ಫೇಸ್‌ಬುಕ್‌ ಖಾತೆಯಿಂದ ಸ್ಫೋಟಕ ಪೋಸ್ಟ್‌ ಮಾಡಲಾಗಿದೆ. ‘ನನಗೆ ಏಪ್ರಿಲ್‌ 20ರಂದು ಪೆನ್‌ಡ್ರೈವ್ ಸಿಕ್ಕಿತ್ತು. ಪೆನ್‌ಡ್ರೈವ್‌ನ್ನು ಅರಕಲಗೂಡು ಶಾಸಕ ಎ.ಮಂಜುಗೆ (A. Manju) ಕೊಟ್ಟಿದ್ದೆ. ಏ.21ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೆ. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದಂತೆ ವಿಡಿಯೋ ವೈರಲ್ ಹಿಂದೆ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದೆಂದು’ ಪೋಸ್ಟ್‌ ಹಾಕಲಾಗಿದೆ. ಸದ್ಯ ಆರೋಪಿ ನವೀನ್ ಗೌಡ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

ನವೀನ್ ಗೌಡ ಯಾರು ಅಂತಾನೇ ನನಗೆ ಗೊತ್ತಿಲ್ಲ: ಶಾಸಕ ಎ.ಮಂಜು

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶಾಸಕ ಎ.ಮಂಜು, ನವೀನ್ ಗೌಡ ಯಾರು ಅಂತಾನೇ ನನಗೆ ಗೊತ್ತಿಲ್ಲ. ನನಗೆ ಪೆನ್​ಡ್ರೈವ್ ಕೊಟ್ಟ ಅಂದ್ಮೇಲೆ ಎಲ್ಲರಿಗೂ ಅವನೇ ಹಂಚಿರುತ್ತಾನೆ. ಹಾಗಾಗಿ SIT ಅಧಿಕಾರಿಗಳು ಮೊದಲು ನವೀನ್​ಗೌಡನನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.

ರಸ್ತೆಗಳು, ಪಾರ್ಕ್, ಅಂಗಡಿ ಮುಂಗಟ್ಟು ಮುಂದೆ ಪೆನ್​ಡ್ರೈವ್ ಎಸೆದಿದ್ದರು. ಊರಿಗೆಲ್ಲ ಪೆನ್​ಡ್ರೈವ್ ಹಂಚಿದ ಮೇಲೆ ನನಗೆ ಕೊಟ್ಟೆ ಎಂದು ಹೇಳಿದ್ದೇನೆ. ನಾನು ಹೆಚ್.ಡಿ.ದೇವೇಗೌಡ ಕುಟುಂಬಕ್ಕೆ ಹತ್ತಿರವಾದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ವಿಡಿಯೋ ಪ್ರಕರಣ: ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನ ಬಗ್ಗೆ ಬಿಗ್ ಅಪ್ಡೇಟ್

ಮಾರುತಿ ಕಲ್ಯಾಣ ಮಂಟಪಕ್ಕೆ ನಾನು ಮದುವೆಗೆ ಹೋಗಿದ್ದಂತು ನಿಜ. ನವೀನ್ ಗೌಡ ಯಾರು ಎಂದು ನನಗೆ ಗೊತ್ತಿಲ್ಲ. ಹೆಚ್.ಡಿ.ರೇವಣ್ಣ ಬಂಧನ ಖಂಡಿಸಿ ನಾವು ಮೊದಲ ಬಾರಿಗೆ ಪ್ರತಿಭಟನೆ ಮಾಡಿದ ಮೇಲೆ ಅಪಪ್ರಚಾರ ಮಾಡಲಾಗುತ್ತಿದೆ. ನನಗೆ ಕೊಟ್ಟಿದ್ದೇನೆ ಅಂದ್ಮೇಲೆ ಬೇರೆಯವರಿಗೂ ಅವನೇ ಹಂಚಿರುತ್ತಾನೆ. ಕೂಡಲೇ ಎಸ್ಐಟಿ ಅಧಿಕಾರಿಗಳು ನವೀನ್ ಗೌಡನನ್ನು ಬಂಧಿಸಬೇಕು. ನನಗೆ ಮಾಹಿತಿಯಿರುವ ಪ್ರಕಾರ JDS ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ಆದರೆ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಎಲ್ಲ ಪಕ್ಷಗಳನ್ನು ನೋಡಿದ್ದೇನೆ, ಪ್ರಸ್ತುತ ಜನತಾ ದಳದಲ್ಲಿದ್ದೇನೆ. ಕಷ್ಟ ಕಾಲದಲ್ಲಿ ಹೆಚ್.ಡಿ.ದೇವೇಗೌಡರ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ​ ವಿಡಿಯೋ ಕೇಸ್​ ಹೊಸ ತಿರುವು: ಪ್ರೀತಂಗೌಡ ಆಪ್ತರು ಎಸ್​ಐಟಿ ವಶಕ್ಕೆ

ಯಾರೇ ಆದರೂ ಇಂತಹ ಕುತಂತ್ರ, ಮಾನಹಾನಿ ಕೆಲಸ ಮಾಡಬಾರದು. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವುದರಿಂದ ಕೇಸ್ ಹಾಕುವೆ. ನವೀನ್ ಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ. ಎಸ್ಐಟಿ ಮೇಲೆ ನಂಬಿಕೆ ಬರಬೇಕೆಂದರೆ ನವೀನ್ ಗೌಡನನ್ನು ಬಂಧಿಸಲಿ. ಇಲ್ಲದಿದ್ದರೆ ರಾಜ್ಯ ಸರ್ಕಾರ ಕೇಸ್​ನ ತನಿಖೆಯನ್ನು ಸಿಬಿಐಗೆ ಕೊಡಬೇಕು. ಸಿಎಂ ಸಿದ್ದರಾಮಯ್ಯ ಈ ಹಿಂದೆ ಹಲವು ಕೇಸ್ ಸಿಬಿಐ ತನಿಖೆಗೆ ನೀಡಿದ್ದರು. ಪೆನ್​ಡ್ರೈವ್ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:53 pm, Sun, 12 May 24