ಪ್ರಜ್ವಲ್ ವಿಡಿಯೋ ಕೇಸ್​: ದೇವರಾಜೇಗೌಡ, ಕಾರ್ತಿಕ್​ ಗೌಡಗೆ ಮತ್ತೆ SIT ನೋಟಿಸ್​

|

Updated on: May 09, 2024 | 9:24 AM

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಮತ್ತು ಪ್ರಜ್ವಲ್​ ಮಾಜಿ ಕಾರು ಚಾಲಕ ಕಾರ್ತಿಕ್​ ಗೌಡಗೆ SIT ಮತ್ತೆ ನೋಟಿಸ್​ ನೀಡಿದೆ. ಇತ್ತೀಚೆಗೆ ಕೆಲ ದಾಖಲೆ ಬಿಡುಗಡೆ ಮಾಡಿದ್ದ ದೇವರಾಜೇಗೌಡ, ಕೆಲವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ತಮ್ಮ ಬಳಿ ಇರುವ ದಾಖಲೆಗಳನ್ನು ತರುವಂತೆ ಎಸ್​ಐಟಿ ಸೂಚನೆ ನೀಡಿದೆ.

ಪ್ರಜ್ವಲ್ ವಿಡಿಯೋ ಕೇಸ್​: ದೇವರಾಜೇಗೌಡ, ಕಾರ್ತಿಕ್​ ಗೌಡಗೆ ಮತ್ತೆ SIT ನೋಟಿಸ್​
ಪ್ರಜ್ವಲ್ ವಿಡಿಯೋ ಕೇಸ್​: ದೇವರಾಜೇಗೌಡ, ಕಾರ್ತಿಕ್​ ಗೌಡಗೆ ಮತ್ತೆ SIT ನೋಟಿಸ್​
Follow us on

ಬೆಂಗಳೂರು, ಮೇ 09: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಹಿರಂಗವಾಗಿ ಒಂದಷ್ಟು ದಾಖಲೆ ಬಿಡುಗಡೆ ಮಾಡಿದ್ದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ (Devarajegowda) ಇದೀಗ ಮತ್ತೊಂದು ಸಂಕಷ್ಟು ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಮತ್ತೊಮ್ಮೆ ನೋಟಿಸ್​ ನೀಡಿದೆ. ಆ ಮೂಲಕ ದೇವರಾಜೇಗೌಡಗೆ SIT ಉರುಳು ಸುತ್ತಿಕೊಳ್ಳತ್ತಿದ್ಯಾಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡಗೂ ನೋಟಿಸ್ ನೀಡಲಾಗಿದೆ.

ದೇವರಾಜೇಗೌಡ ಇತ್ತೀಚೆಗೆ ಒಂದಷ್ಟು ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಮಾಧ್ಯಮಗಳ ಮುಂದೆ ಕೆಲವರ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಎಸ್ಐಟಿಯಿಂದ ದೇವರಾಜೇಗೌಡಗೆ ನೊಟೀಸ್​ ನೀಡಿದ್ದು, ತಮ್ಮ ಬಳಿ ಇರುವ ಮತ್ತಷ್ಟು ಸಾಕ್ಷ್ಯಾಧಾರಗಳು, ಫೋಟೋಸ್, ಆಡಿಯೋ ತರಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ದೇವರಾಜೇಗೌಡರ ಪ್ರಕಾರ ಪೆನ್ ಡ್ರೈವ್ ಕೇಸಲ್ಲಿ ಕಾಂಗ್ರೆಸ್ ಟಾರ್ಗೆಟ್ ಯಾರು ಗೊತ್ತಾ?

ಮತ್ತೊಂದು ಕಡೆ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ  ಕಾರ್ತಿಕ್ ಗೌಡಗೂ ನೋಟಿಸ್​ ನೀಡಲಾಗಿದೆ. ಹೀಗಾಗಿ ಇಬ್ಬರನ್ನೂ ಎಸ್ಐಟಿ ಮತ್ತೊಂದು ಸುತ್ತಿನ ತೀವ್ರ ವಿಚಾರಣೆ ಮಾಡಲಿದ್ದಾರೆ.

ನಿನ್ನೆ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ದೇವರಾಜೇಗೌಡ, ಈ ಪ್ರಕರಣದ ಸೂತ್ರಧಾರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ಬಹಿರಂಗ ಚರ್ಚೆಗೂ ಡಿಕೆ ಶಿವಕುಮಾರ್​ನ್ನು ಆಹ್ವಾನಿಸಿದ್ದರು. ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್​ ತಮ್ಮನ್ನು ಭೇಟಿಯಾಗಿದ್ದು ಹಾಗೂ ಡಿಕೆ ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದರು. ಹಾಗೇ ಸಿಐಟಿ ತಂಡದ ಮೇಲೂ ಸಹ ಗಂಭೀರ ಆರೋಪಗಳನ್ನು ಮಾಡಿದ್ದು, ಈ ಬಗ್ಗೆ ಸಿಬಿಐ ದೂರು ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ವಿಡಿಯೋ ಕೇಸ್​: ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು, ಡಿಕೆಶಿ ಆಡಿಯೋ ರಿಲೀಸ್

ಈ ನಡುವೆ ಪ್ರಜ್ವಲ್ ಪೆನ್​ಡ್ರೈವ್ ರಿಲೀಸ್ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಹಾಸನದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ, ಪುಟ್ಟರಾಜು, ನವೀನ್ ಹಾಗೂ ಚೇತನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾರ್ತಿಕ್ ಇರುವ ಫೋಟೋಗಳನ್ನ ಜೆಡಿಎಸ್ ರಿಲೀಸ್ ಮಾಡಿದೆ.

ವರದಿ: ಪ್ರದೀಪ್​ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:12 am, Thu, 9 May 24