AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ವಿಡಿಯೋ ಕೇಸ್​: ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು, ಡಿಕೆಶಿ ಆಡಿಯೋ ರಿಲೀಸ್

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದೀಗ ಈ ವಿಡಿಯೋಗಳನ್ನು ಯಾರು ಬಿಡುಗಡೆ ಮಾಡಿದ್ದ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಉಳಿದಿದೆ. ವಿಡಿಯೋ ರಿಲೀಸ್​ ಸಂಬಂಧ ಕಾಂಗ್ರೆಸ್ ಮತ್ತು ಕುಮಾರಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು, ಡಿಕೆ ಶಿವಕುಮಾರ್ ಅವರು ಮಾತನಾಡಿರುವ ಆಡಿಯೋವೊಂದು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಪ್ರಜ್ವಲ್ ವಿಡಿಯೋ ಕೇಸ್​: ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು, ಡಿಕೆಶಿ ಆಡಿಯೋ ರಿಲೀಸ್
TV9 Web
| Edited By: |

Updated on:May 06, 2024 | 6:45 PM

Share

ಬೆಂಗಳೂರು, ಹಾಸನ, (ಮೇ 06): ಹಾಸನದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ (obscene video) ಪ್ರಕರಣದ ರಾಷ್ಟ್ರಾದ್ಯಂತ ಕಳೆದೊಂದು ವಾರದಿಂದ ಸುದ್ದಿಯಾಗುತ್ತಿದೆ. ಆದ್ರೆ, ಆ ಆಶ್ಲೀಲ ವಿಡಿಯೋಗಳನ್ನು ಮೊದಲು ಯಾರು ಬಿಡುಗಡೆ ಮಾಡಿದ್ದು ಎನ್ನುವುದೇ ನಿಗೂಢವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದು, ಈ ಪ್ರಕರಣದ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದಿದ್ದಾರೆ. ಅಲ್ಲದೇ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್​ ತಮ್ಮನ್ನು ಭೇಟಿಯಾಗಿದ್ದು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಹಾಗೇ ಸಿಐಟಿ ತಂಡದ ಮೇಲೂ ಸಹ ಗಂಭೀರ ಆರೋಪಗಳನ್ನು ಮಾಡಿರುವ ದೇವರಾಜೇಗೌಡ, ಈ ಬಗ್ಗೆ ಸಿಬಿಐ ದೂರು ನೀಡಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮೇ.06) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವರಾಜೇಗೌಡ, ರಾಜ್ಯ ಸರ್ಕಾರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಗೌಪ್ಯ ಸಭೆ ಮಾಡಲಾಗುತ್ತಿದೆ. ಗೌಪ್ಯ ಸಭೆ ನಡೆಸಿ ಯಾರು ಯಾರನ್ನ ಆರೋಪಿಗಳನ್ನ ಮಾಡಬೇಕು ಎನ್ನುವುದನ್ನು ಸೂಚನೆ ಕೊಟ್ಟಿದ್ದಾರೆ. ನನ್ನ ಜೀವನದ ಹೋರಾಟ ಇದ್ದಿದ್ದು ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ವಿರುದ್ಧವಾಗಿದೆ. ಅದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ವಾಮ ಮಾರ್ಗದಲ್ಲಿ ಹೋಗಲು ಮುಂದಾಗಿದ್ದಾರೆ.

ವಿಡಿಯೋ ಪ್ರದರ್ಶನ ಮಾಡಿದ ವಕೀಲ

ನನ್ನ ಸಾಕ್ಷೀ ಹೇಳಿಕೆಯಲ್ಲಿ ಕಹಿ ಸತ್ಯಗಳನ್ನ ವಿಚಾರಣೆ ಸಂದರ್ಭದಲ್ಲಿ ಇಟ್ಟಿದ್ದೇನೆ. ಇದರಲ್ಲಿ ಕೆಲ ಆರೋಪಿಗಳನ್ನ ಬಂಧಿಸಲಾಗಿದೆ. ಅಶ್ಲೀಲ ವಿಡಿಯೋ ತಡೆಯಾಜ್ಞೆ ಇದ್ದರೂ ಕೂಡ, ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರುವ ಸಂಬಂಧ ದೂರು ದಾಖಲಾಗಿದೆ. ಇದರಲ್ಲಿ ದೇವರಾಜೇಗೌಡ ಅವರದ್ದು ಪಾತ್ರ ಏನು? ಒಬ್ಬ ಕೊಲೆಗಾರ ವಕೀಲನ ಹತ್ರ ಬಂದಾಗ, ನಮ್ಮ ವಕೀಲ ವೃತ್ತಿಯಲ್ಲಿ ಏನು ಮಾಡಬೇಕು ಅದನ್ನ ಮಾಡಿದ್ದೇನೆ. ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು, ಒಂದು ಪೆನ್ ಡ್ರೈವ್ ಹಾಗೂ ‌ಕೆಲ ಡಾಕ್ಯುಮೆಂಟ್ ಕೊಡುತ್ತಾರೆ. ಅಶ್ಲೀಲ ವಿಡಿಯೋ ಕ್ಲೀಪ್ ಹಾಗೂ ಪತ್ರಿಕೆ ಪೇಪರ್ ಅನ್ನ ನಮ್ಮ ವಕೀಲರಿಗೆ ತಂದು ಕೊಡುತ್ತಾರೆ. ಇದಕ್ಕೆ ಪೂರಕವಾದ ಕೆಲ ಡಾಕ್ಯುಮೆಂಟ್ ‌ಕೊಡಿ ಎಂದು ಕೇಳಿದ್ದೇನೆ. ಕಾರ್ತಿಕ್ ‌ನನ್ನ ಮನೆಗೆ ಯಾವಾಗ ಬಂದ? ನನ್ನ ಮನೆಯಲ್ಲಿ ‌ಕುಳಿತು‌ ಮಾತನಾಡಿರುವ ವಿಡಿಯೋ ಸಿಬಿಐಗೆ ಕೊಡುತ್ತಿದ್ದೇನೆ ಎಂದು ವಕೀಲ ದೇವರಾಜೇಗೌಡ ವಿಡಿಯೋ ಪ್ರದರ್ಶನ ‌ಮಾಡಿದರು.

ಪೆನ್ ಡ್ರೈವ್ ಯಾವ ರೀತಿ ಬೆಂಗಳೂರಿಗೆ ಬಂತು

ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಪೆನ್ ಡ್ರೈವ್ ಕೊಟ್ಟ ನಂತರ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋ ಇರುವುದನ್ನು ನಾನು ನೋಡಿದೆ. ಕಾರ್ತಿಕ್ ಸ್ಟೇ ವೆಕೆಟ್ ಮಾಡಿ ಅಂತ ನಮ್ಮ ಬಳಿ ಕೇಳಿದ್ದನು. ರಾಜ್ಯದ ಮಹಾನ್ ನಾಯಕ ಈ ಸರ್ಕಾರದ ರೂವಾರಿ ಆಗಿದ್ದಾನೆ. ಅದಕ್ಕೆ ಸಾಕ್ಷಿ ಇಲ್ಲಿದೆ ಅಂತ ಎಸ್ ಐಟಿ ಅಧಿಕಾರಿಗಳು ಕೇಳ್ತಾರೆ. ಅದಕ್ಕೆ ನಾನು ಈ ಸಾಕ್ಷಿಯನ್ನು ಬಿಡುಗಡೆ ಮಾಡಿದ್ದೇನೆ. ಪೆನ್ ಡ್ರೈವ್ ಯಾವ ರೀತಿ ಬೆಂಗಳೂರಿಗೆ ಬಂತು? ಈ ವಿಚಾರದಲ್ಲಿ ನಾನು ಎಸ್ ಐ ಟಿ ಅಧಿಕಾರಿಗಳಿಗೆ ಹೇಳಿಕೆ ಕೊಟ್ಟಿದ್ದೇನೆ. ಮುಖ್ಯಮಂತ್ರಿಗಳು ಅಧಿಕಾರಿಗಳನ್ನ ಗೌಪ್ಯ ಜಾಗಕ್ಕೆ ಕರೆಸಿಕೊಳ್ಳುತ್ತಾರೆ. ಪೆನ್ ಡ್ರೈವ್ ಕಥಾನಾಯಕ ಕಾಂಗ್ರೆಸ್ ಸರ್ಕಾರವಾಗಿದೆ. ಇದರ ರೂವಾರಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿಕೆಶಿ ಆಫರ್ ಬಗ್ಗೆ ಬಹಿರಂಗ

ಇನ್ನು ಪೆನ್‌ಡ್ರೈವ್ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ‌ನನಗೆ ದೊಡ್ಡ ‌ಮಟ್ಟದಲ್ಲಿ ಆಫರ್ ಕೊಟ್ಟಿದ್ದರು. ಕ್ಯಾಬಿನೆಟ್ ಮಟ್ಟದ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಮೊದಲು ನನ್ನನ್ನ ಯಾರು ಭೇಟಿ ಮಾಡಿದರು ಅನ್ನೋದನ್ನ ಅದರ ಅಡಿಯೋ ಬಿಡುಗಡೆ ಮಾಡುತ್ತಿದ್ದೇನೆ. ಇದೇ ವೇಳೆ ಎಲ್.ಆರ್. ಶಿವರಾಮೇಗೌಡ ಹಾಗೂ ದೇವರಾಜೇಗೌಡ ಅಡಿಯೋ ಸಂಭಾಷಣೆ ಮಾಡುತ್ತಿದ್ದೇನೆ. ಇಲ್ಲಿ ನೋಡಿ ಆಡಿಯೋ ಕ್ಲಿಪ್ಪಿಂಗ್ ಎಂದು ಹೇಳಿದರು. ಇದೇ ವೇಳೆ ಎಸ್‌ಐಟಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ಇದರ ತನಿಖೆಯನ್ನು ಸಿಬಿಐಗೆ ಕೊಟ್ಟರೆ, ನಾನು ಸಂಪೂರ್ಣ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

L.R.ಶಿವರಾಮೇಗೌಡ ಮೊದಲು ಮಾತಾಡಿ ಡಿಕೆ ಶಿವಕುಮಾರ್​​ಗೆ ಕೊಟ್ಟರು. ಬಳಿಕ ಡಿಕೆಶಿವಕುಮಾರ್ ನನಗೆ ಆಫರ್ ಕೊಟ್ಟಿದ್ದರು. ಬೇರೆ ಬೇರೆ ಹುದ್ದೆ ಕೊಡುತ್ತೇವೆ. ಸಂಪುಟ ದರ್ಜೆ ಹುದ್ದೆ ಕೊಡುತ್ತೇವೆ ಎಂದು ಆಫರ್ ಕೊಟ್ಟರು, ಆಡಿಯೋದಲ್ಲಿ ಯಾರು ಮಾತಾಡಿದ್ದಾರೆ ಗೊತ್ತಾಯಿತಲ್ವಾ? ಇದರಲ್ಲಿ ಯಾರ ಪಾತ್ರ ಇದೆ ಎಂದು ಗೊತ್ತಾಯಿತಲ್ಲವಾ? SIT ಮೇಲೆ ನಂಬಿಕೆ ಇಲ್ಲ. ನಾನು ಸಿಬಿಐಗೆ ದೂರು ಕೊಡುತ್ತೇನೆ ಎಂದು ಹೇಳಿದರು.

ನನಗೆ ಆಫರ್ ಕೊಟ್ಟಿರುವ ವಿಚಾರವಾಗಿ, ನನ್ನನ್ನ ನೇರವಾಗಿ ಅವರೇ ಕರೆಸಿಕೊಂಡಿದ್ದರು. ಎಲ್.ಆರ್.ಶಿವರಾಮೇಗೌಡ ಹಾಗೂ ಡಿಕೆ ಶಿವಕುಮಾರ್ ಕೇಸ್ ವಿಚಾರವಾಗಿ ನನ್ನ ಬಳಿ ಚರ್ಚೆ ನಡೆಸಿದ್ದರು. ಸಂತ್ರಸ್ಥರು ಬಂದು ದೂರು ಕೊಡ್ತಾರಾ? ಸಂತ್ರಸ್ಥ ಮಹಿಳೆಯರ ಬಗ್ಗೆನೂ ಬಿಟ್ಟರು. ಪೆನ್ ಡ್ರೈವ್ ಲೀಕ್ ಮೂಲಕ ಈಗ ದೇವೇಗೌಡ ಅವರನ್ನ ಫಿಕ್ಸ್ ಮಾಡಲು ನೋಡ್ತಾ ಇದ್ದಾರೆ. ಎಸ್.ಐಟಿ ಅಧಿಕಾರಿಗಳು ನನಗೆ ನೋಟೀಸ್ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ‌ಮೇಲೆ ಮಾಡಿದ ಆರೋಪವನ್ನ ಡಿಲೀಟ್ ಮಾಡಿ ಅಂತ ಇಬ್ಬರು ಮಹಿಳಾ ತನಿಖಾಧಿಕಾರಿಗಳು ಹೇಳಿದ್ದಾರೆಂದು ತಿಳಿಸಿದ್ದಾರೆ.

IPS ಅಧಿಕಾರಿ ವಿರುದ್ಧವೂ ಗಂಭೀರ ಆರೋಪ

ಮೂರು ದಿನದಿಂದ ಸರಿಯಾದ ತನಿಖೆ ಆಗುತ್ತಲೇ ಇಲ್ಲ. ಸಣ್ಣಕ್ಕೆ ಇರುವ ಆಫೀಸರ್‌ ನನಗೆ ವಿಶ್ವಾಸ ಹೋಗುವಂತೆ ಮಾತನಾಡಿದರು. ಡಿಸಿಎಂ ಡಿಕೆ ಶಿವಕುಮಾರ್​ ಬಗ್ಗೆ ನಾನು ಕೊಟ್ಟ ಹೇಳಿಕೆ ಡಿಲೀಟ್‌ ಮಾಡೋಣ ಅಂದರು. ಹೇಳಿಕೆ ಡಿಲೀಟ್‌ ಮಾಡೋಣ ಎಂದು ಸುಮನ್ ಡಿ ಪೆನ್ನೇಕರ್ ಹೇಳಿದ್ರು ಎಂದು IPS ಅಧಿಕಾರಿ ಸುಮನ್ ಡಿ ಪೆನ್ನೇಕರ್ ವಿರುದ್ಧ ಗಂಭೀರ ಆರೋಪ ಮಾಡಿದ ದೇವರಾಜೇಗೌಡ, ಡಿ.ಕೆ.ಶಿವಕುಮಾರ್‌ಗೆ ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದಾನೆ. ಎಲ್ಲದರ ರೂವಾರಿ, ಪೆನ್ ಡ್ರೈವ್ ಹಂಚಿಕೆ ಸೂತ್ರಧಾರಿ ಡಿಕೆ, ಕಾಂಗ್ರೆಸ್ ಪಕ್ಷ. ನನಗೆ ಧಮ್ಕಿ ಸಹ ಹಾಕಲಾಗಿದೆ ಎಂದು ಆರೋಪಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Mon, 6 May 24