ಕೊಲೆ ಬೆದರಿಕೆ ಹಾಕಿದ ಜಿಲ್ಲೆಯಲ್ಲೇ ನನ್ನನ್ನು ನಿರ್ಲಕ್ಷಿಸಿದ್ದಾರೆ: ಬೊಮ್ಮಾಯಿ ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡಾಮಂಡಲ

| Updated By: ರಮೇಶ್ ಬಿ. ಜವಳಗೇರಾ

Updated on: Oct 05, 2022 | 6:06 PM

ಬೊಮ್ಮಾಯಿ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಪ್ರಮೋದ್ ಮುತಾಲಿಕ್ ಸಹ ಕಿಡಿಕಾರಿದ್ದಾರೆ.

ಕೊಲೆ ಬೆದರಿಕೆ ಹಾಕಿದ ಜಿಲ್ಲೆಯಲ್ಲೇ ನನ್ನನ್ನು ನಿರ್ಲಕ್ಷಿಸಿದ್ದಾರೆ: ಬೊಮ್ಮಾಯಿ ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡಾಮಂಡಲ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
Follow us on

ಉಡುಪಿ:  ಐದು ದಿನಗಳ ಕಾಲ ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಪ್ರಮೋದ್ ಮುತಾಲಿಕ್ ಅವರಿಗೆ ಭದ್ರತೆ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಶ್ರೀರಾಮಸೇನೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಮೋದ್ ಮುತಾಲಿಕ್ ಸಹ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಉಡುಪಿಯಲ್ಲಿಂದು (ಅ.05) ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಉಡುಪಿಯಲ್ಲಿ ನನಗೆ ಪೋಲಿಸ್ ಎಸ್ಕಾರ್ಟ್ ಕೊಡಬೇಕಾಗಿತ್ತು. ಅದು ಪೋಲಿಸ್ ಇಲಾಖೆಯ ಕರ್ತವ್ಯವಾಗಿತ್ತು. ಈ ಜಿಲ್ಲೆಯಿಂದಲೇ ನನಗೆ ಬೆದರಿಕೆ ಹಾಕಲಾಗಿತ್ತು. ಕೊಲೆ ಬೆದರಿಕೆ ಹಾಕಿದ ಜಿಲ್ಲೆಯಲ್ಲೇ ನನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ಬೊಮ್ಮಾಯಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪರೇಶ್ ಮೇಸ್ತಾ ಪ್ರಕರಣದ ಸಿಬಿಐ ವರದಿ: ಸಮರ್ಥಿಸಿಕೊಳ್ಳಲು ಬಿಜೆಪಿಯಿಂದ ಹೊಸ ವರಸೆ

ಮುತಾಲಿಕ್ ಮತ್ತು ಯಶ್ಪಾಲ್. ತಲೆ ಕಡಿದವರಿಗೆ 10 ಲಕ್ಷ ರೂ ಕೊಡುವುದಾಗಿ ಘೋಷಿಸಿದ್ದರು. ನೇರವಾಗಿ ಖಾತೆಗೆ ಹಣ ಹಾಕುವುದಾಗಿ ಧಮ್ಕಿ ಕೊಟ್ಟಿದ್ದರು. ಕೊಲೆ ಬೆದರಿಕೆ ಹಾಕಿದ ಜಿಲ್ಲೆಯಲ್ಲೇ ನನ್ನನ್ನು ನಿರ್ಲಕ್ಷ್ಯಿಸಿದ್ದಾರೆ. ಇದೊಂದು ರಾಜಕೀಯ ಕುತಂತ್ರಗಾರಿಕೆ ಎಂದು ಅನಿಸುತ್ತದೆ. ಈ ರೀತಿ ಮಾಡಿದರೆ ಜನರೇ ನಿಮಗೆ ಉಗಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದುತ್ವಕ್ಕಾಗಿ ಕೆಲಸ ಮಾಡಿದವರಿಗೆ ರಕ್ಷಣೆ ಕೊಟ್ಟಿಲ್ಲ ಅಂದರೆ ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಅನ್ನೋದು ಗೊತ್ತಾಗುತ್ತದೆ. ಇಷ್ಟಕ್ಕೇ ಬಿಡಲ್ಲ, ನನಗೆ ಇನ್ನೂ ತೊಂದರೆ ಕೊಡುತ್ತಾರೆ. ನನಗೆ ತೊಂದರೆ ಕೊಡುವುದು ಬಿಟ್ಟು ಬೇರೆ ಯೋಚನೆ ಮಾಡಿ ಎಂದು ಟಾಂಗ್ ಕೊಟ್ಟರು.

ನೀವು ಯಾರಿಗೆ ತೊಂದರೆ ಕೊಡಿತ್ತಿದ್ದೀರಿ ಗೊತ್ತಾ? ಹಿಂದು ನಾಯಕನಿಗೆ ತೊಂದರೆ ನೀಡ್ತಾ ಇದೀರಿ. ಈ ರಾಕ್ಷಸಿ ಪ್ರವೃತ್ತಿಯನ್ನು ಕಾಂಗ್ರೆಸ್ ನವರು ಮಾಡುತ್ತಿದ್ದರು. ನೀವು ಹೀಗೆ ಮಾಡಿದರೆ ಹಿಂದುತ್ವಕ್ಕೆ ತೊಂದರೆಯಾಗುತ್ತದೆ. ನೀವು ತೊಂದರೆ ಕೊಟ್ಟಷ್ಟು ನಾನು ಮತ್ತೆ ಮತ್ತೆ ಪುಟಿದು ಎದ್ದು ಬರುತ್ತೇನೆ. ನಿಮ್ಮ ಭದ್ರತೆ ಇಲ್ಲದೆ ಹೇಗೆ ಇರಬೇಕೆಂದು ನನಗೆ ಗೊತ್ತು. ಹಿಂದುತ್ವದ ವಿಚಾರದಲ್ಲಿ ನನ್ನದು ಕಾಂಪ್ರಮೈಸ್ ಇಲ್ಲ ಎಂದರು.

ನಾನು 15 ವರ್ಷದಿಂದ ಶಸ್ತ್ರಪೂಜೆ ಮಾಡುತ್ತಾ ಬಂದಿದ್ದೇನೆ. ಶಸ್ತ್ರಪೂಜೆ ಮಾಡುವುದು ನವರಾತ್ರಿ ಪರಂಪರೆ. ಆಯುಧ ಪೂಜೆಯ ದಿನ ಶಸ್ತ್ರಕ್ಕೆ ಪೂಜೆ ಮಾಡುವ ಸಂಪ್ರದಾಯ ನಡೆದು ಬಂದಿದೆ. ಹಾಗಾಗಿ ನನ್ನಲ್ಲಿ ಇರುವ ಶಸ್ತ್ರವನ್ನಿಟ್ಟು ಪೂಜೆ ಮಾಡಿದ್ದೆನೆ. ನನ್ನ ಬಳಿ ಪರವಾನಿಗೆ ಇರುವ ಗನ್ ಇದೆ. ಯಾವುದೇ ಕಾನೂನುಬಾಹಿರ ಶಸ್ತ್ರಗಳನ್ನು ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾರನ್ನೂ ಹೆದರಿಸಲು ನಾನು ಶಸ್ತ್ರ ಪೂಜೆ ಮಾಡಿದಲ್ಲ. ಸಂಪ್ರದಾಯದ ಹಿನ್ನಲೆಯಲ್ಲಿ ಪೂಜೆ ಮಾಡಿದ್ದೇನೆ. ಎಲ್ಲರೂ ಸಂಪ್ರದಾಯದಂತೆ ಶಸ್ತ್ರ ಪೂಜೆ ಮಾಡಬೇಕು. ಶಸ್ತ್ರ ಪೂಜೆ ಮಾಡದೇ ಇರುವುದರಿಂದಲೇ ಭಯ ಆವರಿಸಿ, ಪ್ರತಿಭಟನಾ ಗುಣ ನಾಶ ಆಗಿದೆ. ನವರಾತ್ರಿಯಲ್ಲಿ ಪಾಲಿಸುವ ಈ ಪದ್ದತಿಯನ್ನು ಬಿಡಬಾರದು. ನಮ್ಮ ಶಾಸ್ತ್ರ, ವಿಜ್ಞಾನ, ಸಂಸ್ಕೃತಿ ಬಿಡಬಾರದು. ನಾನು ಯಾವ ಊರಿನಲ್ಲಿ ಇರುತ್ತೇನೋ, ಅಲ್ಲೇ ಪೂಜೆ ಮಾಡುತ್ತೇನೆ ಎಂದು ತಿಳಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ